ನವದೆಹಲಿ: ಒಂದೊಳ್ಳೆಯ ಸೂರು ಮತ್ತು ಕೆಲಸ ಅದೆಷ್ಟೋ ಜನರಿಗೆ ಗಗನ ಕುಸುಮ. ಆದರೆ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ ಎಲ್ಲವೂ ತಾನಾಗಿಯೇ ಒಲಿದುಬರುತ್ತದೆ ಎನ್ನುವುದಕ್ಕೆ ಇಲ್ಲೊಬ್ಬ ನಾಗರೀಕ ಸೇವಕ ಸಾಕ್ಷಿಯಾಗಿದ್ದಾನೆ. ಸದ್ಯ ಇವರು ಟ್ವಿಟ್ಟರ್ನಲ್ಲಿ ಹಾಕಿರುವ ಪೋಸ್ಟ್ ಮನಮುಟ್ಟುವಂತಿದೆ.
0
samarasasudhi
ಸೆಪ್ಟೆಂಬರ್ 11, 2023
ನವದೆಹಲಿ: ಒಂದೊಳ್ಳೆಯ ಸೂರು ಮತ್ತು ಕೆಲಸ ಅದೆಷ್ಟೋ ಜನರಿಗೆ ಗಗನ ಕುಸುಮ. ಆದರೆ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ ಎಲ್ಲವೂ ತಾನಾಗಿಯೇ ಒಲಿದುಬರುತ್ತದೆ ಎನ್ನುವುದಕ್ಕೆ ಇಲ್ಲೊಬ್ಬ ನಾಗರೀಕ ಸೇವಕ ಸಾಕ್ಷಿಯಾಗಿದ್ದಾನೆ. ಸದ್ಯ ಇವರು ಟ್ವಿಟ್ಟರ್ನಲ್ಲಿ ಹಾಕಿರುವ ಪೋಸ್ಟ್ ಮನಮುಟ್ಟುವಂತಿದೆ.
ಶಿಕ್ಷಣ ಜೀವನವನ್ನು ಬದಲಾಯಿಸುತ್ತದೆ. ಬಡತನದಿಂದ ಹೊರಬನ್ನಿ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಮುನ್ನಡೆದರೆ ಉತ್ತಮ ಬದುಕು ಸಿಗುತ್ತದೆ. ಒಂದು ಕಾಲದಲ್ಲಿ ತೆಂಗಿನ ತೋಟದಲ್ಲಿದ್ದ ಪುಟ್ಟ ಮನೆಯಲ್ಲಿ ವಾಸವಾಗಿ ಬಡತನದಲ್ಲಿದ್ದ ವ್ಯಕ್ತಿಯೊಬ್ಬರು ಈಗ ಎರಡು ಅಂತಸ್ತಿನ ಬಂಗಲೆಯಲ್ಲಿ ತಮ್ಮ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ.
ಈ ಟ್ವೀಟ್ಗೆ 'ನೀವು ತುಂಬಾ ಸ್ಪೂರ್ತಿದಾಯಕ.. ನಿಮ್ಮ ಮನೆ ತುಂಬಾ ಸುಂದರವಾಗಿದೆ'..'ಅಭಿನಂದನೆಗಳು.. ಇಂದು ನೋಡಿದ ಅತ್ಯುತ್ತಮ ಪೋಸ್ಟ್' ಎಂದು ನೆಟಿಜನ್‌ಗಳು ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದೆ. ಲಕ್ಷಗಟ್ಟಲೆ ಕಮೆಂಟ್ಸ್ ಬರುತ್ತಿದ್ದು, ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಬಹಳ ವೈರಲ್ ಆಗುತ್ತಿದೆ.