HEALTH TIPS

ಮಗು ಮಾತನಾಡಲು ತಡವಾಗುವುದಕ್ಕೆ ಕಾರಣವೇನು?

 ಹೆಚ್ಚಿನ ಪೋಷಕರು ಇತ್ತೀಚಿಗೆ ನನ್ನ ಮಗುವಿಗೆ ಎರಡೂವರೆ ವರ್ಷವಾದರೂ ಇನ್ನೂ ಮಾತನಾಡುತ್ತಿಲ್ಲ ಎನ್ನುವ ಬೇಸರದ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದೆ. ಹಿಂದಿನ ಕಾಲದಲ್ಲೆಲ್ಲಾ ಒಂದೂವರೆ ವರ್ಷಕ್ಕೆಲ್ಲಾ ಮಕ್ಕಳು ಪಟ ಪಟನೆ ಮಾತನಾಡಲು ಆರಂಭಿಸ್ತಾ ಇದ್ರೂ, ಆದ್ರೆ ಈಗ ಮೂರು ವರ್ಷ ತುಂಬಿದರೂ ಸ್ಪಷ್ಟವಾಗಿ ಮಗು ಮಾತನಾಡುತ್ತಿಲ್ಲ ಎನ್ನುವ ಪೋಷಕರನ್ನು ಕಾಣಬಹುದು. ನಿಮ್ಮ ಮಗುವೂ ಎರಡೂವರೆ ವರ್ಷವಾದರೂ ಮಾತನಾಡುತ್ತಿಲ್ವಾ..? ಅವರ ಸಂವಹನಾ ಕೌಶಲ್ಯ ಇನ್ನೂ ಅಭಿವೃದ್ಧಿಯಾಗಿಲ್ಲ ಎನ್ನುವ ಚಿಂತೆ ನಿಮಗೆ ಕಾಡುತ್ತಿದ್ದಲ್ಲಿ ಈ ಸ್ಟೋರಿ ತಪ್ಪದೇ ಓದಿ.

ಮಾತಿನ ವಿಳಂಬದಲ್ಲಿ ಈ ಎರಡು ವಿಧಗಳನ್ನು ಗುರುತಿಸಿ
ಮಾತಿನ ವಿಳಂಬವನ್ನು ಸಾಮಾನ್ಯವಾಗಿ ಭಾಷಣ- ಮಾತಿನ ವಿಳಂಬ ಎನ್ನಲಾಗುತ್ತೆ. ಕೆಲವೊಂದು ಮಕ್ಕಳು ಮಾತನಾಡದಿದ್ದರೂ ವಿಭಿನ್ನ ಕೌಶಲ್ಯಗಳನ್ನು ಹೊಂದಿರುತ್ತಾರೆ. ಅದನ್ನು ಗುರುತಿಸುವ ಕೆಲಸ ಪೋಷಕರು ಮಾಡಬೇಕು. ಮಾತಿನ ವಿಳಂಬವನ್ನು ಎರಡು ವಿಧಗಳಲ್ಲಿ ಗುರುತಿಸಲಾಗುತ್ತೆ. ಒಂದು ಮಾತು ಮತ್ತು ಇನ್ನೊಂದು ಭಾಷೆ. ನಿಮ್ಮ ಮಗು ಯಾವ ರೀತಿಯ ಸಂವಹನದಲ್ಲಿ ವಿಳಂಬ ಮಾಡುತ್ತಿದೆ ಎನ್ನುವುದನ್ನು ಹೀಗೆ ಗುರುತಿಸಬಹುದು ನೋಡಿ.

ಸ್ಪೀಚ್‌ (ಮಾತು)
ಮಾತು ಮಾತನಾಡುವುದು ಮತ್ತು ಶಬ್ದಗಳು ಮತ್ತು ಪದಗಳನ್ನು ಸರಿಯಾಗಿ ರೂಪಿಸಿಕೊಂಡು ಹೋಗುವ ಸಾಮರ್ಥ್ಯವನ್ನು ಸೂಚಿಸುತ್ತೆ. ಮಾತಿನಲ್ಲಿ ವಿಳಂಬವಿರುವ ಮಕ್ಕಳು ಕೆಲವೊಂದು ಪದಗಳನ್ನು ಹೇಳಬಹುದು. ಆದರೆ ಅದು ನಿಮಗೆ ಅರ್ಥವಾಗದೆಯೇ ಇರಬಹುದು.ಅವರು ಮಾತನಾಡಲು ಕಷ್ಟವಾಗುವ ಕಾರಣವೆಂದರೆ ಅವರಿಗೆ ಪದಗಳನ್ನು ಜೋಡಿಸಿ ಮಾತನಾಡಲು ಆಗದೇ ಇರುವುದು.

ಭಾಷೆ
ಭಾಷೆ ಸಂವಹನ ಮತ್ತು ಗ್ರಹಿಕೆಯನ್ನು ಒಳಗೊಂಡಿರುತ್ತೆ. ಇತರರು ಹೇಳಿದ್ದನ್ನು ಅರ್ಥಮಾಡಿಕೊಂಡು ಪ್ರತಿಕ್ರಿಯೆ ನೀಡುವ ಸಾಮರ್ಥ್ಯವನ್ನು ಇದು ಸೂಚಿಸುತ್ತೆ. ಭಾಷೆ ವಿಳಂಬವಿರುವ ಮಕ್ಕಳು ಸ್ಪಷ್ಟವಾಗಿ ಮಾತನಾಡಬಹುದು ಆದತೆ ಕೆಲವು ಪದಗಳನ್ನು ಮಾತ್ರ ಬಳಸುತ್ತಾರೆ. ಇತರರು ಹೇಳುವುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಕಷ್ಟವಾಗಬಹುದು.

ಮಾತು-ಭಾಷೆಯ ವಿಳಂಬಕ್ಕೆ ಪ್ರಮುಖ ಕಾರಣಗಳು
ಮಾತಿನ ವಿಳಂಬವನ್ನು ಹೊಂದಿರುವ ಕೆಲವು ಮಕ್ಕಳಲ್ಲಿ ಬೆಳವಣಿಗೆಯ ಸಮಸ್ಯೆ ಅಥವಾ ದೈಹಿಕ ಸಮಸ್ಯೆಯು ಮಾತಿನಲ್ಲಿ ವಿಳಂಬವನ್ನುಂಟು ಮಾಡಬಹುದು. ಕೆಲವೊಂದು ಮಕ್ಕಳಲ್ಲಿ ನಿರ್ದಿಷ್ಟಕಾರಣವನ್ನು ಗುರುತಿಸಲಾಗದೆ ಇರಬಹುದು ಕೂಡಾ. ಮಾತಿನ-ಭಾಷೆಯ ವಿಳಂಬಕ್ಕೆ ಸಾಮಾನ್ಯ ಕಾರಣಗಳೆಂದರೆ,

ಮೌಖಿಕ ಮತ್ತು ಚಲನಾತ್ಮಕ ಸಮಸ್ಯೆ
ಮಾತಿಗೆ ಕಾರಣವಾಗುವ ಸ್ನಾಯುಗಳನ್ನು ನಿಯಂತ್ರಿಸುವ ಮೆದುಳಿನ ಪ್ರದೇಶದಲ್ಲಿ ಸಮಸ್ಯೆ ಉಂಟಾದಾಗ ಮಾತಿನದಲ್ಲಿ ವಿಳಂಬಗಳು ಹೆಚ್ಚಾಗಿ ಕಂಡುಬರುತ್ತೆ. ಪರಿಣಾಮವಾಗಿ ಮಕ್ಕಳು ತಮ್ಮ ತುಟಿ, ನಾಲಿಗೆ ಮತ್ತು ದವಡೆಯ ಚಲನೆಯನ್ನು ಸಂಯೋಜಿಸಲು ಸಾಧ್ಯವಾಗದ ಕಾರಣ ಶಬ್ದಗಳನ್ನು ಹೆಣೆಯಲು ಕಷ್ಟಪಡಬಹುದು.
ಮೆದುಳು ಮುಖದ ಸ್ನಾಯುಗಳೊಂದಿಗೆ ಸಂವಹನ ನಡೆಸದಿದ್ದಾಗ ಅಪ್ರಾಕ್ಸಿಯಾ ಎಂಬ ಸ್ಥಿತಿ ಉಂಟಾಗುತ್ತೆ. ಅಂದರೆ ಮಗುವ ಮಾತನಾಡಲು ಅಗತ್ಯವಾಗ ಸ್ನಾಯುಗಳನ್ನು ಚಲಿಸಲಾಗದೇ ಇರುವ ಸ್ಥಿತಿ. ಮುಖ, ತುಟಿ ಮತ್ತು ನಾಲಿಗೆಯನ್ನು ನಿಯಂತ್ರಿಸುವ ಸ್ನಾಯುಗಳು ಸರಿಯಾಗಿ ಕೆಲಸ ಮಾಡಲಾಗದೇ ದುರ್ಬಲವಾದಾಗ ಇನ್ನೊಂದು ಮೌಖಿಕ ಚಲನಾತ್ಮಕ ಸಮಸ್ಯೆ ಡೈಸರ್ಥ್ರಿಯಾ ಸಂಭವಿಸುತ್ತೆ.

ಆಟಿಸಂ
ಆಟಿಸಂ ಸಮಸ್ಯೆಯು ಕೂಡಾ ಮಕ್ಕಳ ಮಾತಿನ ಮೇಲೆ ಪರಿಣಾಮ ಬೀರುತ್ತದೆ. ಅಧ್ಯಯನದ ಪ್ರಕಾರ 3-4 ವರ್ಷದ ಮಕ್ಕಳಲ್ಲಿ ಅರ್ಧದಷ್ಟು ಆಟಿಸಂ ಇರುವವರಲ್ಲಿ ತಮ್ಮ ವಯಸ್ಸಿಗೆ ತಕ್ಕಂತೆ ಮಾತನಾಡಲು ಸಾಧ್ಯವಾಗದಿರುವುದು ಕಂಡುಬಂದಿದೆ. ಆಟಿಸಂ ಸ್ಪೆಕ್ಟ್ರಂ ಸಮಸ್ಯೆಯು ಭಾಷೆಯ ಬೆಳವಣಿಗೆಯ ಮೇಲೆ ಇತರ ರೀತಿಯಲ್ಲಿ ಪರಿಣಾಮ ಬೀರುತ್ತೆ. ಆಟಿಸಂ ಇರುವ ಮಕ್ಕಳು ಅಮೌಖಿಕವಾಗಿಯೂ ಸಂವಹನ ನಡೆಸಲು ಕಷ್ಟಪಡುತ್ತಾರೆ. 12 ತಿಂಗಳವರೆಗೂ ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ. ಕೆಲವೊಂದು ಆಟಿಸಂ ಇರುವ ಮಕ್ಕಳು ಇತರರು ಹೇಳುವುದನ್ನು ಅರ್ಥಮಾಡಿಕೊಳ್ಳದಿರಹುದು. ಪದೇ ಪದೇ ಒಂದೇ ಪದವನ್ನು ಪುನರಾವರ್ತಿಸುತ್ತಾರೆ. ಸಾಮಾನ್ಯವಾಗಿ ಟಿವಿಯಲ್ಲಿ ನೋಡಿರುವ ಒಂದು ಪದವನ್ನೇ ಹೇಳುತ್ತಲೇ ಇರಬಹುದು.

ಶ್ರವಣ ಸಮಸ್ಯೆಗಳು
ಕಿವಿಗೆ ಸಂಬಂಧಿಸಿದ ಸಮಸ್ಯೆ ಅಥವಾ ಶ್ರವಣೇಂದ್ರಿಯ ಪ್ರಕ್ರಿಯೆಯ ಅಸ್ವಸ್ಥತೆಯು ನಿಮ್ಮ ಮಗುವಿನ ಮಾತನಾಡುವ, ಭಾಷೆಯನ್ನು ಬಳಸುವ ಮತ್ತು ಇತರರನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಕಿವಿಗೆ ಸಂಬಂಧಿಸಿದ ಸಮಸ್ಯೆಯಿದ್ದರೂ ಅವರು ಕೇಳುವುದನ್ನು ಅರ್ಥಮಾಡಿಕೊಳ್ಳುವುದನ್ನು ಸಾಧ್ಯವಾಗದೇ ಇರಬಹುದು.

ಬೌದ್ಧಿಕ ಅಸಾಮರ್ಥ್ಯ
ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ಮಕ್ಕಳು ಸಾಮಾನ್ಯವಾಗಿ ಅವರ ಮಾತಿ ಮತ್ತು ಭಾಷೆ ಹಾಗೂ ಅವರ ಕಲಿಕೆ, ಸಾಮಾಜಿಕ, ಭಾವನಾತ್ಮಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಹೆಚ್ಚಿನ ಬೆಳವಣಿಗೆ ವಿಳಂಬಗಳನ್ನು ಹೊಂದಿರುತ್ತಾರೆ. ಈ ಮಕ್ಕಳು ಇತರರು ಅರ್ಥಮಾಡಿಕೊಳ್ಳುವ ಪದಗಳನ್ನು ರೂಪಿಸಲು ಅಥವಾ ಉಚ್ಚರಿಸಲು ತೊಂದರೆ ಹೊಂದಿರಬಹುದು. ವಾಕ್ಯಗಳನ್ನು ಒಟ್ಟಿಗೆ ಸೇರಿಸಲು ಅಥವಾ ಭಾಷೆಯನ್ನು ಅರ್ಥಮಾಡಿಕೊಳ್ಳಲು ಅವರು ಹೆಣಗಾಡಬಹುದು.

ನಿಮ್ಮ ಮಗುವಿನಲ್ಲಿ ಮಾತು- ಭಾಷೆಯ ವಿಳಂಬವಿದ್ದರೆ ನೆನಪಿಟ್ಟುಕೊಳ್ಳಬೇಕಾದ ಮುಖ್ಯ ಸಂಗತಿಯೆಂದರೆ ರೋಗ ನಿರ್ಣಯ ಮತ್ತು ಚಿಕಿತ್ಸೆ. ಮಗುವಿಗೆ ಮಾತನಾಡಲು ಪೂರಕವಾಗುವಂತೆ ಅವರಿಗೆ ಸವಾಲೆನಿಸಿದ ಸಂಗತಿಗಳನ್ನು ಕಲಿಸುವ ಗುರಿ ಹೊಂದಿರಿ. ಮಗುವಿನೊಂದಿಗೆ ಹೆಚ್ಚು ಮಾತನಾಡಿ. ಸಣ್ಣ ಸಣ್ಣ ಪದಗಳನ್ನು ಜೋಡಿಸಿ ಅವರೊಂದಿಗೆ ಮಾತನಾಡಿ. ವೈದ್ಯರ ಸಲಹೆ ಅಗತ್ಯವೆನಿಸಿದಲ್ಲಿ ಖಂಡಿತವಾಗಿಯೂ ತಪ್ಪದೇ ನಿಮ್ಮ ಮಗುವಿನ ವೈದ್ಯರೊಂದಿಗೆ ಮಾತನಾಡಿ. ಇತ್ತೀಚೆಗೆ ಭಾಷೆ ವಿಳಂಬವಿರುವ ಮಕ್ಕಳಿಗಾಗಿ ಸ್ಪೀಚ್‌ ಥೆರಪಿಗಳೂ ಲಭ್ಯವಿದೆ. ಸಾಧ್ಯವಾದಷ್ಟು ಮಗುವಿನ ಮಾತಿನ ಅಭಿವೃದ್ಧಿಗೆ ಪೂರಕವಾಗುವಂತೆ ಮನೆಯ ವಾತಾವರಣವಿರಲಿ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries