ನವದೆಹಲಿ: ಜಿ 20 ಶೃಂಗಸಭೆಯಲ್ಲಿ ಚೀನಾದ ಪ್ರತಿನಿಧಿಗಳು ಭಾಗವಹಿಸುವುದನ್ನು ವಿರೋಧಿಸಿ ಟಿಬೆಟನ್ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು ಶುಕ್ರವಾರ, ದಕ್ಷಿಣ ದೆಹಲಿಯ ಮಜ್ನು ಕಾ ಟಿಲ್ಲಾ ಸಮೀಪ ಪ್ರತಿಭಟನೆ ನಡೆಸಿದರು.
0
samarasasudhi
ಸೆಪ್ಟೆಂಬರ್ 09, 2023
ನವದೆಹಲಿ: ಜಿ 20 ಶೃಂಗಸಭೆಯಲ್ಲಿ ಚೀನಾದ ಪ್ರತಿನಿಧಿಗಳು ಭಾಗವಹಿಸುವುದನ್ನು ವಿರೋಧಿಸಿ ಟಿಬೆಟನ್ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು ಶುಕ್ರವಾರ, ದಕ್ಷಿಣ ದೆಹಲಿಯ ಮಜ್ನು ಕಾ ಟಿಲ್ಲಾ ಸಮೀಪ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ಚೀನಾ ವಿರೋಧಿ ಘೋಷಣೆಗಳಿದ್ದ ಭಿತ್ತಿಪತ್ರ ಹಿಡಿದಿದ್ದು, ಪ್ರತಿಭಟನೆ ಶಾಂತಿಯುತವಾಗಿತ್ತು.
ಕೆಲ ಪ್ರತಿಭಟನಕಾರರು ತಮ್ಮ ಮುಖ, ದೇಹದ ಮೇಲೂ 'ಫ್ರಿ ಟಿಬೆಟ್' ಘೋಷಣೆ ಬರೆಯಿಸಿಕೊಂಡಿದ್ದರು. ಈ ಪ್ರತಿಭಟನೆಯು ಭಾರತ ಅಥವಾ ಭಾರತವು ಜಿ 20 ಶೃಂಗಸಭೆ ಆಯೋಜಿಸುತ್ತಿರುವುದರ ವಿರುದ್ಧವಲ್ಲ. ಈ ಶೃಂಗಸಭೆಯಲ್ಲಿ ಚೀನಾ ಭಾಗವಹಿಸುವಿಕೆಗೆ ವಿರೋಧ ವ್ಯಕ್ತಪಡಿಸುವುದೇ ನಮ್ಮ ಉದ್ದೇಶ ಎಂದು ಟಿಬೆಟನ್ ಯುವ ಕಾಂಗ್ರೆಸ್‌ನ ಅಧ್ಯಕ್ಷ ಗೊನ್ಪೊ ಧುಂಡುಪ್ ಅವರು ತಿಳಿಸಿದರು.