HEALTH TIPS

ಬಿಸಿ ನೀರಿಗೆ ಜೇನು ಹಾಕಿ ಕುಡಿದರೆ ದೇಹಕ್ಕೆ ಹಾನಿಕರವೇ?


ಬೆಳಗ್ಗೆ ಬಿಸಿ ನೀರಿಗೆ ಜೇನು ಹಾಕಿ ಕುಡಿದರೆ ತೂಕ ಇಳಿಕೆಗೆ ತುಂಬಾನೇ ಒಳ್ಳೆಯದು ಎಂದು ಹೇಳುವುದನ್ನು ಕೇಳಿರಬಹುದು. ಆದರೆ ಆಯುರ್ವೇದ ಜೇನನ್ನು ಬಿಸಿ ನೀರಿಗೆ ಹಾಕುವುದು ಒಳ್ಳೆಯದಲ್ಲ ಎಂಬುವುದಾಗಿ ಹೇಳುತ್ತದೆ. ಏಕೆ ಜೇನನ್ನು ಬಿಸಿ ನೀರಿಗೆ ಹಾಕಿ ಸೇವಿಸಬಾರದು, ಈ ಕುರಿತು ಆಯುರ್ವೇದ ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:

ಜೇನನ್ನು ಬಿಸಿ ನೀರಿಗೆ ಹಾಕಿ ಕುಡಿಯುವ ಉದ್ದೇಶ
ಮೈ ತೂಕ ಕಡಿಮೆ ಮಾಡಬೇಕು ಎಂದು ಬಯಸುವವರು ಜೇನನ್ನು ಬಿಸಿ ನೀರಿಗೆ ಹಾಕಿ ಕುಡಿಯುತ್ತಾರೆ. ಇದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ, ಕೊಬ್ಬು ಕರಗಿಸುತ್ತದೆ ಎಂದು ಹೇಳಲಾಗುವುದು. ಈ ಕಾರಣಕ್ಕೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಜೇನು ಹಾಕಿ ಕುಡಿಯುವ ಅಭ್ಯಾಸ ಹಲವರಲ್ಲಿದೆ, ಆದರೆ ಆಯುರ್ವೇದ ಇದು ಉತ್ತಮ ಆಯ್ಕೆಯಲ್ಲ ಎಂಬುವುದಾಗಿ ಹೇಳುತ್ತದೆ.

ಜೇನನ್ನು ಬಿಸಿ ನೀರಿಗೆ ಹಾಕಿ ಕುಡಿದರೆ ಸ್ಲೋ ಪಾಯಿಸನ್ ಆಗುವುದುಆಯುರ್ವೇದ ಪ್ರಕಾರ ಜೇನನ್ನು ಬಿಸಿ ನೀರಿಗೆ ಹಾಕಿ ಕುಡಿಯುವುದರಿಂದ ಆಮ ಅಥವಾ ವಿಷವಾಗುವುದು. ಇದು ಒಂದು ರೀತಿ ಸ್ಲೋ ಪಾಯಿಸನ್ ಅಂತೆ ಆಗುವುದು. ಜೇನನ್ನು ಬಿಸಿ ನೀರಿಗೆ ಹಾಕಿ ಸೇವಿಸಿದಾಗ ಆಮ ಅಥವಾ ಕಫದ ಅಂಶ ಹೆಚ್ಚಾಗುವುದು, ಇದರಿಂದ ಅನೇಕ ಸಮಸ್ಯೆಗಳು ಉಂಟಾಗುವುದು.

ಜೇನನ್ನು ನೈಸರ್ಗಿಕವಾಗಿಯೇ ಸೇವಿಸಬೇಕು
ಜೇನು ಹೇಗೆ ಸಿಗುವುದೋ ಹಾಗೆ ನೈಸರ್ಗಿಕವಾಗಿ ಸೇವಿಸಬೇಕು. ಜೇನನ್ನು ಬಿಸಿ ಮಾಡಿದರೆ ಅದು ವಿಷವಾಗುವುದು ಈ ಕಾರಣಕ್ಕೆ ಜೇನನ್ನು ಬಿಸಿ ನೀರಿಗೆ ಕೂಡ ಹಾಕಿ ಸೇವಿಸುವುದು ಒಳ್ಳೆಯದಲ್ಲ ಎಂಬುವುದಾಗಿ ಹೇಳಿದೆ.

ಜೇನನ್ನು ಬಿಸಿ ಮಾಡಬಾರದು
ಜೇನನ್ನು ನೀವು ಜ್ಯೂಸ್‌, ಸಲಾಡ್, ಮನೆ ಔಷಧಿ ಮಾಡುವಾಗ ಬಳಸಬಹುದು. ಅದೇ ಜೇನನ್ನು ಬೇಯಿಸುವಾಗ ಬಳಸಬಾರದು, ಇದರಿಂದ ಫುಡ್‌ ಪಾಯಿಸನ್ ಆಗಿ ಆಹಾರದ ಮೇಲೆ ಗಂಭೀರ ಪರಿಣಾಮ ಬೀರುವುದು, ಈ ಕಾರಣಕ್ಕೆ ಜೇನನ್ನು ಯಾವುದೇ ಕಾರಣಕ್ಕೆ ಬಿಸಿ ಮಾಡಬಾರದು ಎಂದು ಹೇಳಲಾಗುವುದು.

ಜೇನಿನಲ್ಲಿದೆ ಔಷಧೀಯ ಗುಣ
ನೈಸರ್ಗಿಕವಾಗಿ ಸಿಗುವ ಜೇನನ್ನು ಅನೇಕ ಆರೋಗ್ಯ ಸಮಸ್ಯೆ ಹೋಗಲಾಡಿಸಲು ಮನೆಮದ್ದಾಗಿ ಬಳಸಲಾಗುವುದು. ಕೆಮ್ಮು, ಶೀತ, ಕಫ ಈ ಬಗೆಯ ಸಮಸ್ಯೆ ಹೋಗಲಾಡಿಸಲು ಜೇನು ತುಂಬಾನೇ ಪರಿಣಾಮಕಾರಿಯಾಗಿದೆ. ನೀವು ಕಲಬೆರಿತ ಜೇನು ಬಳಸುವ ಬದಲಿಗೆ ಯಾವಾಗಲೂ ನೈಸರ್ಗಿಕವಾದ ಜೇನನ್ನೇ ಬಳಸಿ.

ಜೇನನ್ನು ಬಿಸಿ ಮಾಡಿದಾಗ ಏನಾಗುತ್ತದೆ?
* ಜೇನನ್ನು ಬಿಸಿ ಮಾಡಿದಾಗ ಅದರ ಆ್ಯಂಟಿಬ್ಯಾಕ್ಟಿರಿಯಾ ಅಂದರೆ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಗುಣ ಹಾಳಾಗುವುದು.
* ಇದರಲ್ಲಿರುವ ಆ್ಯಂಟಿಆಕ್ಸಿಡೆಂಡ್‌ ಗುಣಗಳು ನಾಶವಾಗುವುದು.
ಈ ಕಾರಣಕ್ಕೆ ಜೇನನ್ನು ಬಿಸಿ ನೀರಿಗೆ ಹಾಕಿ ಕುಡಿಯುವುದು ಆರೋಗ್ಯಕರವಲ್ಲ ಎಂದು ಆಯುರ್ವೇದ ಹೇಳುತ್ತದೆ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries