HEALTH TIPS

ಈಶ ಗ್ರಾಮೋತ್ಸವ ಸಾಮಾಜಿಕ ಪರಿವರ್ತನೆಗೆ ಪರಿಣಾಮಕಾರಿ ಸಾಧನ: ಕ್ರೀಡಾ ಸಚಿವ ಅನುರಾಗ್ ಠಾಕೂರ್

           ಕೊಯಮತ್ತೂರು: ಈಶ ಗ್ರಾಮೋತ್ಸವವು ಗ್ರಾಮಸ್ಥರನ್ನು ವ್ಯಸನಗಳಿಂದ ದೂರವಿರಲು, ಸಮುದಾಯದಲ್ಲಿನ ಜಾತಿಯ ಅಡೆತಡೆಗಳನ್ನು ಮುರಿಯಲು, ಮಹಿಳೆಯರನ್ನು ಸಬಲೀಕರಣಗೊಳಿಸಲು ಸಹಕಾರಿಯಾಗಿದೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅಭಿಪ್ರಾಯ ಪಟ್ಟಿದ್ದಾರೆ.


              ಶನಿವಾರ ಕೊಯಮತ್ತೂರಿನ ಈಶ ಯೋಗ ಕೇಂದ್ರದ ಆದಿಯೋಗಿ ಸಮ್ಮುಖದಲ್ಲಿ ನಡೆದ ಈಶ ಗ್ರಾಮೋತ್ಸವದ ಅಂತಿಮ ಹಂತದ ಪಂದ್ಯಾವಳಿಯಲ್ಲಿ ಭಾಗವಹಿಸಿದ ಅವರು, ಈಶ ಗ್ರಾಮೋತ್ಸವ ಸಾಮಾಜಿಕ ಪರಿವರ್ತನೆಗೆ ಪರಿಣಾಮಕಾರಿ ಸಾಧನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

             ಸದ್ಗುರುಗಳು ಕೈಗೊಂಡಿರುವ ಈ ಅದ್ಭುತ ಉಪಕ್ರಮ ಗ್ರಾಮೀಣ ಕ್ರೀಡೆಗಳು ಮತ್ತು ಸಂಸ್ಕೃತಿಯನ್ನು ಅಮೋಘವಾಗಿ ಆಚರಿಸುತ್ತಿದೆ. ಗ್ರಾಮೀಣ ಜನತೆಗೆ ಆರೋಗ್ಯ, ಸಮೃದ್ಧಿ ಮತ್ತು ಯೋಗಕ್ಷೇಮ ತರುವ ಉದ್ದೇಶದಿಂದ 2004ರಲ್ಲಿ ಈಶ ಗ್ರಾಮೋತ್ಸವ ಪ್ರಾರಂಭಿಸಲಾಯಿತು. ನಾನು ಈ ಬಾರಿ ಇಲ್ಲಿನ ಕ್ರೀಡಾಪಟುಗಳನ್ನು ನೋಡಿದೆ, ಅವರಲ್ಲಿ ಕೆಲವರು ಕಾರ್ಮಿಕರು, ಕೃಷಿಕರು ಮತ್ತು ಮೀನುಗಾರರಾಗಿ ಕೆಲಸ ಮಾಡುತ್ತಾರೆ, ಆದರೆ ನಾನು ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಗಮನಿಸಿದೆ ಎಂದು ಸಚಿವರು ಸಂತೋಷಪಟ್ಟರು.

                 ಸದ್ಗುರು ಅವರು 2004ರಲ್ಲಿ ಪ್ರಾರಂಭಿಸಿದ ಈ ಸಾಮಾಜಿಕ ಉಪಕ್ರಮವು ಗ್ರಾಮೀಣ ಜನರ ಜೀವನದಲ್ಲಿ ಕ್ರೀಡೆ ಮತ್ತು ಲವಲವಿಕೆಯ ಉತ್ಸಾಹ ತರುವ ಗುರಿ ಹೊಂದಿದೆ. ಈ ಮಹತ್ವದ ಸಂದರ್ಭದಲ್ಲಿ ಕ್ರೀಡಾ ಸಚಿವರು, ಜನಪ್ರಿಯ ತಮಿಳು ನಟ ಸಂತಾನಂ ಮತ್ತು ಭಾರತೀಯ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೈ ಅವರು ಸದ್ಗುರುಗಳ ಜೊತೆಗಿದ್ದರು.

112 ಅಡಿ ಎತ್ತರದ ವಿಸ್ಮಯಕಾರಿ ಆದಿಯೋಗಿಯ ಬಳಿ ನಡೆದ ಅಂತಿಮ ಪಂದ್ಯಗಳು, ಗ್ರಾಮೀಣ ಆಟಗಾರರ ಕೌಶಲದ ಮನಮೋಹಕ ಪ್ರದರ್ಶನಕ್ಕೆ ಸಾಕ್ಷಿಯಾದವು. ಪ್ರಪಂಚದ ಮೂಲೆಮೂಲೆಗಳಿಂದ ಬಂದು ಸೇರಿದ್ದ ಪ್ರೇಕ್ಷಕರು, ಚಾಂಪಿಯನ್‌ಶಿಪ್ ಟ್ರೋಫಿಗಾಗಿ ಆಟಗಾರರ ಸಂಪೂರ್ಣ ತೊಡಗುವಿಕೆಯನ್ನು ಮೈಮರೆತು ವೀಕ್ಷಿಸಿದರು, ಸಿಳ್ಳೆ ಹೊಡೆದು ಸಂಭ್ರಮಿಸಿದರು.

            25,000 ಹಳ್ಳಿಗಳ 60,000ಕ್ಕೂ ಹೆಚ್ಚು ಆಟಗಾರರು ಮತ್ತು ಆ ಹಳ್ಳಿಗಳ ಸಾವಿರಾರು ಪ್ರೇಕ್ಷಕರು, ಕೆಲವು ಸಮಯ ಆನಂದದಿಂದ ಜಿಗಿಯುತ್ತಿದ್ದುದನ್ನು, ಕಿರುಚುತ್ತಿದ್ದುದನ್ನು, ನಗುತ್ತಿದ್ದುದನ್ನು ಮತ್ತು ಅಳುತ್ತಿದ್ದುದನ್ನು ನೋಡಲು ಅದ್ಭುತವಾಗಿತ್ತು.ಬದುಕು ಲವಲವಿಕೆಯಿಂದ ನಡೆಯಲು ಇದು ಅಗತ್ಯ ಎಂದು ಸದ್ಗುರು ಹೇಳಿದರು.

          ನಮ್ಮ ತಂಡದ ಒಬ್ಬ ಸಹ ಆಟಗಾರ್ತಿ ತನ್ನ ಮೂರು ತಿಂಗಳ ಮಗುವನ್ನು ಸಹ ಬಿಟ್ಟು, ಫೈನಲ್‌ನಲ್ಲಿ ಭಾಗವಹಿಸಿದ್ದಳು. ಇಲ್ಲಿರುವುದು ಒಂದು ಕನಸು ನನಸಾದಂತೆ ಮತ್ತು ನಮ್ಮ ತರಬೇತಿಯಿಂದ ಹಿಡಿದು ಕೊಯಮತ್ತೂರಿನವರೆಗೆ ಪ್ರಯಾಣಿಸಲು ನಮ್ಮೊಂದಿಗೆ ನಿಂತಿದ್ದ ಈಶ ಸ್ವಯಂಸೇವಕರಿಗೆ ನಾವು ಅಪಾರ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಫೈನಲ್‌ನಲ್ಲಿ ಸ್ಪರ್ಧಿಸಿದ ಆಂಧ್ರಪ್ರದೇಶದ ಆನಂದಪುರಂ ಥ್ರೋಬಾಲ್ ತಂಡದ ನಾಯಕಿ ಕುಮಾರಿ ತಮ್ಮ ಅನಿಸಿಕೆ ಹಂಚಿಕೊಂಡರು.

                  ಈ ಮಧ್ಯೆ ಈಶ ಗ್ರಾಮೋತ್ಸವದ ಅಂತಿಮ ಸುತ್ತಿನ ಪಂದ್ಯಗಳು ಪ್ರೇಕ್ಷಕರನ್ನು ತಮ್ಮ ಆಸನಗಳಿಗೆ ಅಂಟಿಕೊಳ್ಳುವಂತೆ ಮಾಡಿದ್ದವು. ವಾಲಿಬಾಲ್‌ನಲ್ಲಿ, ಸೇಲಂನ ಉತಮಸೋಲ್‌ಪುರಂ ತಂಡವು ಎಫ್‌ಇಸಿ ಸಿತುರಾಜಪುರಂ ಮೇಲೆ ಜಯ ಸಾಧಿಸಿತು. ಕರ್ನಾಟಕವನ್ನು ಪ್ರತಿನಿಧಿಸಿದ ಮರಗೋಡುವಿನ ಬ್ಲ್ಯಾಕ್ ಪ್ಯಾಂಥರ್ ರನ್ನರ್ ಅಪ್ ಆಗಿದ್ದು, ಮೂರ್ನಾಡು ಥ್ರೋಬಾಲ್​ನಲ್ಲಿ ಕಾಂತೂರು ಫ್ರೆಂಡ್ಸ್ ತಂಡವು ತೃತೀಯ ಬಹುಮಾನ ಪಡೆಯಿತು.

          ಆಗಸ್ಟ್ ತಿಂಗಳಿನಲ್ಲಿ ಆರಂಭವಾದ ಈ ಕ್ರೀಡಾ ಸಂಭ್ರಮವು ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ತೆರೆದುಕೊಂಡಿತು. 194ಕ್ಕೂ ಹೆಚ್ಚು ಗ್ರಾಮೀಣ ಸ್ಥಳಗಳಲ್ಲಿ ನಡೆದ ಈಶ ಗ್ರಾಮೋತ್ಸವವು 60,000 ಆಟಗಾರರ ಭಾಗವಹಿಸುವಿಕೆಗೆ ಸ್ಫೂರ್ತಿಯಾಯಿತು. 10,000ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು, ಹೆಚ್ಚಾಗಿ ಗೃಹಸ್ಥ ಮಹಿಳೆಯರು, ಕಬಡ್ಡಿ ಮತ್ತು ಥ್ರೋಬಾಲ್‌ನಂತಹ ಆಟಗಳಲ್ಲಿ ಭಾಗವಹಿಸಿದರು.

               ತನ್ನ ಸ್ವರೂಪದಲ್ಲಿ ವಿಶಿಷ್ಟವಾಗಿರುವ ಈಶ ಗ್ರಾಮೋತ್ಸವವನ್ನು ದಿನನಿತ್ಯದ ಗ್ರಾಮೀಣ ಜನರಿಗೆ.. ದಿನಗೂಲಿ, ಮೀನುಗಾರರು ಮತ್ತು ಗೃಹಿಣಿಯರು, ತಮ್ಮ ದೈನಂದಿನ ಜಂಜಾಟದಿಂದ ವಿರಾಮ ಪಡೆದು, ಕ್ರೀಡೆಗಳ ಸಂಭ್ರಮಾಚರಣೆ ಮತ್ತು ಏಕೀಕರಣದ ಶಕ್ತಿ ಆನಂದಿಸುವುದಕ್ಕಾಗಿ ಆಯೋಜಿಸಲಾಗುತ್ತಿದೆ. ಇದರಲ್ಲಿ ವೃತ್ತಿಪರರಿಗೆ ಭಾಗವಹಿಸಲು ಅವಕಾಶವಿಲ್ಲ.

ಸಚಿನ್ ತೆಂಡೂಲ್ಕರ್, ಒಲಿಂಪಿಕ್ ಪದಕ ವಿಜೇತರಾದ ರಾಜವರ್ಧನ್ ಸಿಂಗ್ ರಾಥೋಡ್ ಮತ್ತು ಕರ್ಣಂ ಮಲ್ಲೇಶ್ವರಿ ಅವರಂತಹ ಕ್ರೀಡಾ ಗಣ್ಯರು ಈ ಹಿಂದೆ ಕ್ರೀಡಾ ಉತ್ಸವದ ಫೈನಲ್‌ನಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಮಿಥಾಲಿ ರಾಜ್, ಪಿವಿ ಸಿಂಧು, ವೀರೇಂದ್ರ ಸೆಹ್ವಾಗ್, ಶಿಖರ್ ಧವನ್ ಮತ್ತು ಜಾವಗಲ್ ಶ್ರೀನಾಥ್, ಈಶ ಗ್ರಾಮೋತ್ಸವಕ್ಕೆ ಬೆಂಬಲ ನೀಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries