ಕಾಸರಗೋಡು: ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗುವ ರೈಸಿಂಗ್ ಕಾಸರಗೋಡು ಹೂಡಿಕೆದಾರರ ಸಮಾವೇಶದ ಅಧಿಕೃತ ವೆಬ್‍ಸೈಟ್ ಅನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ರೈಸಿಂಗ್ ಕಾಸರಗೋಡು ಹೂಡಿಕೆದಾರರ ಶೃಂಗಸಭೆಯು ಜಿಲ್ಲೆಯಲ್ಲಿ ಕೈಗಾರಿಕಾ ಪಾರ್ಕ್‍ಗಳನ್ನು ಪ್ರಾರಂಭಿಸಿ, ಹೊರ ದೇಶಗಳಿಂದ ಬಂಡವಾಳ ಒಟ್ಟುಗೂಡಿಸಿ ಜಿಲ್ಲೆಯನ್ನು ಉತ್ತಮ ಪ್ರಗತಿಯತ್ತ ಕೊಂಡೊಯ್ಯುವ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ದೂರದೃಷ್ಟಿಯ ಯೋಜನೆಯಾಗಿದೆ ಎಂದು ಅವರು ಹೇಳಿದರು.
ವಿದ್ಯಾನಗರ ಎಎಸ್ ಎಪಿ ಕಮ್ಯೂನಿಟಿ ಸ್ಕಿಲ್ ಪಾರ್ಕ್ ನಲ್ಲಿರುವ ರೈಸಿಂಗ್ ಕಾಸರಗೋಡಿನ ಸಂಘಟನಾ ಸಮಿತಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಹೂಡಿಕೆದಾರರ ಸಭೆಯ ವಿವರಗಳು ಮತ್ತು ಜಿಲ್ಲೆಯ ಹೂಡಿಕೆ ಅವಕಾಶಗಳ ಮಾಹಿತಿಯು ಸೈಟ್‍ನಲ್ಲಿ ಲಭ್ಯವಿದೆ.
ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಪಿ.ಕೆ.ಸಜೀವ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್, ನವಕೇರಳಂ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಆಡಳಿತ ಸಹಾಯಕ ಆದಿಲ್ ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು. ಸೆ.18 ಮತ್ತು 19ರಂದು ಉದುಮ ಲಲಿತ್ ಹೋಟೆಲ್‍ನಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿದೆ.