ಕಾಸರಗೋಡು: ಐವರ ಸಾವಿಗೆ ಕಾರಣವಾದ ಪಳ್ಳತ್ತಡ್ಕÀದಲ್ಲಿ ಸಂಭವಿಸಿದ ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಮೋಟಾರು ವಾಹನ ಇಲಾಖೆ ತಿಳಿಸಿದೆ.
ರಸ್ತೆ ನಿರ್ಮಾಣದ ಲೋಪವೂ ಅಪಘಾತಕ್ಕೆ ಕಾರಣ ಎಂದು ಮೋಟಾರು ವಾಹನ ಇಲಾಖೆ ಪತ್ತೆ ಮಾಡಿದೆ. ಈ ಕುರಿತು ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಮೋಟಾರು ವಾಹನ ಇಲಾಖೆ ತಿಳಿಸಿದೆ.
ಶಾಲಾ ಬಸ್ ಮತ್ತು ಆಟೋ ಡಿಕ್ಕಿಯಾಗಿ ನಿನ್ನೆ ಸಂಜೆ ಈ ಭೀಕರ ಅವಘಡ ಸಂಭವಿಸಿದೆ. ಒಂದೇ ಕುಟುಂಬದ ನಾಲ್ವರು ಹಾಗೂ ಆಟೋ ಚಾಲಕ ಆಟೋದಲ್ಲಿ ಸಾವನ್ನಪ್ಪಿದ್ದಾರೆ. ತಾಯಲಂಗಡಿ ಮೂಲದ ಎ.ಎಚ್. ಅಬ್ದುರ್ರವೂಫ್, ಬೀಫಾತಿಮಾ, ಬೀಫಾತಿಮಾ ಮೊಗರ್, ಉಮ್ಮು ಹಲೀಮಾ ಮತ್ತು ನಫೀಸಾ ಮೃತರು. ಸಂಬಂಧಿಕರೊಬ್ಬರ ಸಾವಿನ ಕಾರಣ ಅವರ ಪೆರ್ಲದ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಧ್ಯ ರಸ್ತೆಯಿಂದ ಮುಖ್ಯರಸ್ತೆ ಪ್ರವೇಶಿಸುತ್ತಿದ್ದ ಆಟೋರಿಕ್ಷಾ ಶಾಲಾ ಬಸ್‍ಗೆ ಡಿಕ್ಕಿ ಹೊಡೆದಿದೆ.
ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಆಟೋರಿಕ್ಷಾ ಸಂಪೂರ್ಣ ಜಖಂಗೊಂಡಿದೆ. ಶಾಲಾ ಬಸ್ ಮಕ್ಕಳನ್ನು ಇಳಿಸಿ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.





