ಕಾಸರಗೋಡು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಸುಳ್ಯಪದವು ಪುದುಕ್ಕೋಡಿ ತೋಟದಮೂಲೆಯ ಕಸ್ತೂರಿ ರೈ ಹಾಗೂ ಅವರ ಪುತ್ರ ಗುರುಪ್ರಸಾದ್ ರೈ ಎಂಬವರನ್ನು ಮನೆಯೊಳಗೆ ಕಟ್ಟಿಹಾಕಿ, ಬಂದೂರು ತೋರಿಸಿ 15ಪವನು ಚಿನ್ನ, 50ಸಾವಿರ ರಊ. ನಗದು ಹಾಗೂ ಕೆಲವೊಂದು ಸಾಮಗ್ರಿ ದಓಚಿದ ಪ್ರಕರಣಕ್ಕೆ ಸಂಬಂಧಿಸಿ ಬಾಡೂರು ನಿವಾಸಿಯೊಬ್ಬನನ್ನು ಅಲ್ಲಿನ ಪೊಲೀಸರು ವಶಕ್ಕೆ ತೆಗೆದುಕೊಂಡು ಕರೆದೊಯ್ದಿದ್ದಾರೆ.
ಬಾಡೂರಿನ ಕ್ಲಬ್ ಒಂದರಲ್ಲಿ ಆಟವಾಡುತ್ತಿದ್ದ ಈತನನ್ನು ಮಪ್ತಿಯಲ್ಲಿದ್ದ ಪೊಲೀಸರು ಕ್ಲಬ್ ಕಟ್ಟಡಕ್ಕೆ ಸುತ್ತುವರಿದು ವಶಕ್ಕೆ ತೆಗೆದುಕೊಂಡಿದ್ದಾರೆ. ಗಾಂಜಾ ಮಾರಾಟ ಸೇರಿದಂತೆ ಕೆಲವೊಂದು ಕ್ರಿಮಿನಲ್ ಕೃತ್ಯಗಳಲ್ಲಿ ಶಾಮೀಲಾಗಿರುವ ಈತನ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲೂ ಕೇಸು ದಾಖಲಾಗಿದೆ.
ಪ್ರಕರಣದ ಆರಂಭದಿಂದಲೂ ಕಾಸರಗೋಡಿನ ವ್ಯಕ್ತಿಯೊಬ್ಬನ ಕೈವಾಡವಿರುವ ಬಗ್ಗೆ ಅಲ್ಲಿನ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ತನಿಖೆಯನ್ನು ಕಾಸರಗೋಡಿಗೆ ವಿಸ್ತರಿಸಿದ್ದರು.




