HEALTH TIPS

ಪುಣಿಂಚಿತ್ತಾಯರ ಸಾಧನಾ ಕುಟೀರ ನಿರ್ಮಾಣ ಆಗಲಿ - ಡಾ.¨ನಾರಿ

          ಬದಿಯಡ್ಕ : ತುಳು ಲಿಪಿಯ ಸಂಶೋಧಕರಾದ ಡಾ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ನೆನಪಿನಲ್ಲಿ ಸಾಧನಾ ಕುಟೀರದ ನಿರ್ಮಾಣವು ಕಾಸರಗೋಡು ಸೇರಿದಂತೆ ತುಳುನಾಡಿನಲ್ಲಿ ನಿರ್ಮಾಣವಾಗಬೇಕು. ಅಲ್ಲಿ ಅವರ ಎಲ್ಲಾ ಸಂಶೋಧನೆಗಳೂ ಶಾಶ್ವತವಾಗಿ ಪ್ರದರ್ಶಿತವಾಗಬೇಕು. ಇದು ಹೊಸ ಸಂಶೋಧಕರಿಗೆ ಪ್ರೇರಣೆಯಾಗುತ್ತದೆ. ಇದುವೇ ಪುಣಿಂಚಿತ್ತಾಯರಿಗೆ ಸಮಾಜವು ನೀಡುವ ಅತ್ಯುತ್ತಮ ಗೌರವ' ಎಂದು ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಹೇಳಿದರು. 

           ಅವರು ಎಡನೀರು ಮಠದಲ್ಲಿ ಗುರುವಾರ ನಡೆದ ಡಾ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ(ಪುವೆಂಪು) ಒಂಜಿ ನೆನಪು-2023 ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.


          ಎಡನೀರು ಮಠದ ವ್ಯವಸ್ಥಾಪಕರಾದ ರಾಜೇಂದ್ರ ಕಲ್ಲೂರಾಯರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಬನದಗದ್ದೆ ಪ್ರಭಾಕರ ಕಲ್ಲೂರಾಯರು ಪುವೆಂಪು ಭಾವಚಿತ್ರ ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ತುಳು ಸಂಶೋಧಕ ಉಡುಪಿಯ ಡಾ. ಪದ್ಮನಾಭ ಕೇಕುಣ್ಣಾಯರಿಗೆ ಪುವೆಂಪು-2023ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ತುಳು ಗ್ರಂಥ ಸಂಪಾದನೆಗೆ ಡಾ.ಪುವೆಂಪು ಅವರ ಕೊಡುಗೆ' ಎಂಬ ವಿಚಾರದಲ್ಲಿ ಡಾ.ಪದ್ಮನಾಭ ಕೇಕುಣ್ಣಾಯರು ಉಪನ್ಯಾಸ ನೀಡಿದರು. 

          ಸಭೆಯಲ್ಲಿ ಬದಿಯಡ್ಕದ ತುಳುವೆರೆ ಆಯನೋ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್, ಕಾಸರಗೋಡಿನ ತುಳು ಕೂಟದ ಕಾರ್ಯದರ್ಶಿ ಸತೀಶ್ ಸಾಲಿಯಾನ್, ಕೆದಿಲಾಯ ಪ್ರತಿಷ್ಠಾನದ ಅಧ್ಯಕ್ಷೆ ಪುಂಡೂರು ಪ್ರಭಾವತಿ ಕೆದಿಲಾಯ, ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಜೈ ತುಳುನಾಡು ಸಂಘಟನೆಯ ಮುಖಂಡರಾದ ಹರಿಕಾಂತ್ ಸಾಲಿಯಾನ್, ಜಗನ್ನಾಥ ಬದಿಯಡ್ಕ, ಶ್ರೀಕರ ಭಟ್ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಸಿ ಎಚ್ ಗೋಪಾಲ ಭಟ್ 'ಕಾಶಿ ಪ್ರವಾಸ ಯಾತ್ರೆ' ಕೃತಿಯನ್ನು ಎಡನೀರು ಶ್ರೀಗಳು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಡಾ.ಪುವೆಂಪು ಸಂಪಾದಿತ ತುಳು ಕಾವ್ಯ 'ಶ್ರೀ ಭಾಗವತೋ' ದಿಂದ ಕಾವ್ಯವಾಚನ ನಡೆಯಿತು. ಡಾ.ಶಶಿರಾಜ ನೀಲಂಗಳ (ವಾಚನ), ಗುರುಮೂರ್ತಿ ನಾಯ್ಕಾಪು (ಪ್ರವಚನ) ನಡೆಸಿದರು, ಡಾ.ಸತೀಶ್ ಪುಣಿಂಚಿತ್ತಾಯ ಮತ್ತು ಬಳಗದವರಿಂದ ಪುವೆಂಪು ವಿರಚಿತ ಯಕ್ಷಗಾಯನ, ಆದ್ಯಂತ ತಂತ್ರಿ ಅಡೂರು ಅವರಿಂದ ಪುವೆಂಪು ವಿರಚಿತ ಹಾಡುಗಳ ತಬಲಾವಾದನ ಸಹಿತ ಗಾಯನ, ಸಾನ್ವಿತ್ ಜೆ ಎನ್, ಸನ್ನಿಧಿ ಜೆ ಎನ್ ಅವರಿಂದ ಗಾಯನ ನಡೆಯಿತು. ನಂತರ ಉದಯ ಸಾರಂಗ ನಿರ್ದೇಶನದಲ್ಲಿ ಪೆರ್ಲದ ಸತ್ಯನಾರಾಯಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ 'ರಂಗಡಿಂಡಿಮ' ಮಕ್ಕಳ ನಾಟಕ ತಂಡದಿಂದ, ಪುವೆಂಪು ವಿರಚಿತ 'ಮಾವು ಹಲಸು' ನಾಟಕ ಪ್ರದರ್ಶನಗೊಂಡಿತು.ಜೈ ತುಳುನಾಡಿನ ಗೌರವಾಧ್ಯ್ಷರಾದ ಹರಿಕಾಂತ ಸಾಲಿಯಾನ್ ಕಾಸ್ರೊಡ್  , ,ಉತ್ತಮ ಯು ,ಕಾರ್ಯದರ್ಶಿ ಜಗನ್ನಾಥ ಕುಲಾಲ್         ಜತೆ ಕಾರ್ಯದರ್ಶಿ ಪ್ರವೀಶ್ ಕುಲಾಲ್ ಬೀರಿಕುಂಜೆ ಜೈ ತುಳುನಾಡು ಸಂಘಟನೆಯ ಪದಾದಿಕಾರಿಗಳು  ಉಪಸ್ಥಿತರಿದ್ದರು. ವಿಜಯರಾಜ ಪುಣಿಂಚಿತ್ತಾಯ ಸ್ವಾಗತಿಸಿದರು. ಪೆರಡಾಲಮೂಲೆ ವೆಂಕಟಕೃಷ್ಣ ಭಟ್ ವಂದಿಸಿದರು. ಪ್ರೋ. ಶ್ರೀನಾಥ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಾಡಿನೆಲ್ಲಡೆಯಿಂದ ಆಗಮಿಸಿದ ಪುವೆಂಪು ಅಭಿಮಾನಿಗಳು ಭಾಗವಹಿಸಿದ್ದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries