HEALTH TIPS

ಕೃತಕ ಭ್ರೂಣ; ಪುರುಷ, ಮಹಿಳೆಯ ಮಿಲನವಿಲ್ಲದೆ ಭ್ರೂಣವನ್ನು ಸೃಷ್ಟಿಸಿದ ಇಸ್ರೇಲ್ ವಿಜ್ಞಾನಿಗಳು!

                ವದೆಹಲಿಮನುಷ್ಯನ ಜನನಕ್ಕೆ ವೀರ್ಯಾಣುಗಳು ಮುಖ್ಯಪಾತ್ರವಹಿಸುತ್ತವೆ. ಪುರುಷ ಮತ್ತು ಮಹಿಳೆಯ ಮಿಲನವಿಲ್ಲದೆ ಭ್ರೂಣವನ್ನು ಸೃಷ್ಟಿಸಿ, ಇನ್ನು ಮುಂದೆ ಅವರ ಅಗತ್ಯವಿಲ್ಲದೆ ಮಕ್ಕಳು ಹುಟ್ಟಬಹುದು ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಜೀವಂತ ಕೋಶವಿಲ್ಲದೆ ಮಾನವ ಭ್ರೂಣವನ್ನು ಕೃತಕ ಭ್ರೂಣವನ್ನು ರಚಿಸುವ ಮೂಲಕವಾಗಿ ಇಸ್ರೇಲಿ ವಿಜ್ಞಾನಿಗಳು ಪವಾಡ ಮಾಡಿದ್ದಾರೆ.

                     ಇಸ್ರೇಲಿನ ವೈಜ್​ಮಾನ್ ಇನ್​ಸ್ಟಿಟ್ಯೂಟ್​ನ ವಿಜ್ಞಾನಿಗಳ ತಂಡವು ಅಂಡಾಣು ಮತ್ತು ವಿರ್ಯಾಣುವಿನ ಸಹಾಯವಿಲ್ಲದೇ ಭ್ರೂಣ ಮಾದರಿಯೊಂದನ್ನು ತಯಾರಿಸಿದೆ. ಇದು ವಿಜ್ಞಾನ ಲೋಕದಲ್ಲಿ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡಲಿದೆ. ವಿಜ್ಞಾನಿಗಳ ತಂಡ ತಯಾರಿಸಿರುವ ಈ ಮಾದರಿಯನ್ನು 14 ದಿನಗಳ ಇರಿಸಲಾಗಿತ್ತು. ಈ ಭ್ರೂಣ ಮಾನವ ಭ್ರೂಣವನ್ನು ಹೋಲುತ್ತದೆ. ಭ್ರೂಣವನ್ನು ಪ್ರಾಯೋಗಲಯದಲ್ಲಿ ಬೆಳೆಸಿದ ಕಾಂಡ ಕೋಶಗಳಿಂದ(stell cells) ಸೃಷ್ಠಿಸಲಾಗಿದ್ದು, ಹಾರ್ಮೋನ್ ಕೂಡಾ ಬಿಡುಗಡೆ ಮಾಡಿವೆಯಂತೆ. ಅಂದ ಹಾಗೆ ಈ ಭ್ರೂಣ ಮಾದರಿಯನ್ನುಅಭಿವೃದ್ಧಿ ಪಡಿಸಲು ವಿಜ್ಞಾನಿಗಳು ವೀರ್ಯ, ಅಂಡಾಣು ಅಥವಾ ಗರ್ಭಾಶಯವನ್ನು ಬಳಸಿಲ್ಲ ಎಂಬುದು ವಿಶೇಷವಾಗಿದೆ.

                ಈ ಭ್ರೂಣದ ಮಾದರಿಯು ಜರಾಯು, ಹಳದಿ ಚೀಲ, ಕೊರಿಯಾನಿಕ್ ಚೀಲ ಮತ್ತು ಇತರ ಬಾಹ್ಯ ಅಂಗಾಂಶಗಳನ್ನು ಒಳಗೊಂಡು ವಿಶಿಷ್ಟವಾಗಿರುವ ಎಲ್ಲ ರಚನೆಗಳು, ವಿಭಾಗಗಳನ್ನು ಹೊಂದಿದೆ. ಈ ಮಾದರಿಯ ಕ್ರಿಯಾತ್ಮಕ ಮತ್ತು ಅಗತ್ಯ ಬೆಳವಣಿಗೆಯನ್ನು ಖಚಿತಪಡಿಸುತ್ತದೆ ಎಂದು ವಿಜ್ಞಾನಿಗಳ ತಂಡವು ಹೇಳಿದೆ.

                  ಪ್ರಯೋಗಾಲಯದಲ್ಲಿ ಅಭಿವೃದ್ಧಿ ಪಡಿಸಿದ ಸ್ಟೆಲ್ ಸೆಲ್‌ಗಳನ್ನು ಬಳಸಿಕೊಂಡು ಮಾನವ ಭ್ರೂಣದ ಮಾದರಿ ರಚಿಸಿದ್ದೇವೆ. ಅಷ್ಟೆ ಅಲ್ಲ, ಇದು ಗರ್ಭಾವಸ್ಥೆಯ ಪರೀಕ್ಷೆಯನ್ನು ಧನಾತ್ಮಕವಾಗಿ ಪರಿವರ್ತಿಸುವ ಹಾರ್ಮೋನನ್ನೂ ಬಿಡುಗಡೆ ಮಾಡಿತು. ಈ ಸಂಶೋಧನೆಯು ಭ್ರೂಣದ ಮಾಡೆಲಿಂಗ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇದು ಮನುಷ್ಯ ಜೀವನದ ಆರಂಭಿಕ ಕ್ಷಣಗಳನ್ನು ಅರ್ಥಮಾಡಿಕೊಳ್ಳುವ ನೈತಿಕ ಮಾರ್ಗವನ್ನು ನೀಡುತ್ತದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.

                   ಈ ಅಧ್ಯಯನವು ಅನಾದಿಕಾಲದಿಂದ ಆದ ಮನುಷ್ಯನ ಬೆಳೆವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಹಳ ಸಹಕಾರಿಯಾಗಲಿದೆ. ಈ ಭ್ರೂಣ ಮಾದರಿಗಳ ರಚನೆ ಸರಿಯಾಗಿ ಆಗುತ್ತಿದ್ದು, ಕ್ರಿಯಾತ್ಮಕ ಬೆಳೆವಣಿಗೆಯನ್ನು ಸೂಚಿಸುತ್ತಿವೆ ಎಂದು ತಂಡ ತಿಳಿಸಿದೆ.ಈ ಭ್ರೂಣ ಮಾದರಿಯ ಕುರಿತಾದ ಅಧ್ಯಯನ ಲೇಖನ ಈಗಾಗಲೇ ಖಾಸಗಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದು ಗರ್ಭಪಾತ, ಗರ್ಭಧಾರಣೆಯ ವೈಫಲ್ಯ ಸೇರಿದಂದೆ ಹಲವು ಆಯಾಮಗಳನ್ನು ವೈದ್ಯಕೀಯ ದೃಷ್ಟಿಯಲ್ಲಿ ಅದ್ಯಯನ ನಡೆಸಲು ಪೂರಕವಾಗಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries