ಕಾಸರಗೋಡು : ರಾಜ್ಯ ಚೆಸ್ ತಾಂತ್ರಿಕ ಸಮಿತಿ, ಕಾಸರಗೋಡು ಮಚೆರ್ಂಟ್ ಅಸೋಸಿಯೇಶನ್ ಸಹಯೋಗದಲ್ಲಿ ಆಯೋಜಿಸಿರುವ ಕಾಸರಗೋಡು ಮಚೆರ್ಂಟ್ ಟ್ರೋಫಿಗಾಗಿ ಕೇರಳ ರಾಜ್ಯ 19 ವರ್ಷದೊಳಗಿನವರ ಓಪನ್ ಮತ್ತು ಬಾಲಕಿಯರ ಚೆಸ್ ಚಾಂಪಿಯನ್‍ಶಿಪ್ ಕಾಸರಗೋಡು ವ್ಯಾಪಾರ ಭವನದಲ್ಲಿ ಆರಂಭಗೊಂಡಿತು.
ಕೇರಳ ರಾಜ್ಯ ಸ್ಪೋಟ್ರ್ಸ್ ಕೌನ್ಸಿಲ್ ಕಾರ್ಯದರ್ಶಿ ಲೀನಾ ಎ ಚಾಂಪಿಯನ್‍ಶಿಪ್ ಉದ್ಘಾಟಿಸಿದರು. ಕಾಸರಗೋಡು ಮಚರ್ಂಟ್ ಅಸೋಸಿಯೇಶನ್ ಅಧ್ಯಕ್ಷ ಟಿ. ಎ. ಇಲ್ಯಾಸ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಚೆಸ್ ತಾಂತ್ರಿಕ ಸಮಿತಿ ಅಧ್ಯಕ್ಷ ಜೋ ಪರಪಳ್ಳಿ, ಕೆವಿವಿಇಎಸ್ ಜಿಲ್ಲಾ ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ, ಕೆವಿವಿಇಎಸ್ ಜಿಲ್ಲಾ ಉಪಾಧ್ಯಕ್ಷರಾದ ಎ. ಎ. ಅಜೀಜ್, ಕಾಸರಗೋಡು ಮಚರ್ಂಟ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಪಂದ್ಯಾಟ ಸಮಿತಿ ಅಧ್ಯಕ್ಷ ಪಿ. ಶ್ರೀಧರನ್ ಮಾಸ್ಟರ್, ಸಂಚಾಲಕ ರಾಜೇಶ್ ವಿ. ಎನ್. ರಾಜೇಶ್ ಉಪಸ್ಥಿತರಿದ್ದರು. ರಾಜ್ಯ ಚೆಸ್ ತಾಂತ್ರಿಕ ಸಮಿತಿ ಸಂಚಾಲಕ ಶ್ರೀ. ವಿನು ಭಾಸ್ಕರ್ ಸ್ವಾಗತಿಸಿದರು. ಮಚೆರ್ಂಟ್ ಅಸೋಸಿಯೇಶನ್ ಉಪಾಧ್ಯಕ್ಷ ಶಶಿಧರನ್ ಕೆ ವಂದಿಸಿದರು.
ಚಮಪ್ಯನ್‍ಶಿಪ್‍ನಲ್ಲಿ ಹದಿನಾಲ್ಕು ಜಿಲ್ಲೆಗಳಿಂದ ಆಯ್ಕೆಯಾದ 96 ಆಟಗಾರರು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಅಂತಾರಾಷ್ಟ್ರೀಯ ಮಾಸ್ಟರ್ ಜುಬಿನ್ ಜಿಮ್ಮಿ, ಕೆ.ವಿ, ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಅರ್ಪಿತ್ ಎಸ್ ಬಿಜೋಯ್ ಮತ್ತು ಇತರ ಪ್ರಮುಖ ಜೂನಿಯರ್ ಆಟಗಾರರು ಸ್ಪರ್ಧಿಸುತ್ತಿದ್ದಾರೆ.