HEALTH TIPS

ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ಮಗು: ಬಡಕುಟುಂಬಕ್ಕೆ ದಾನಿಗಳ ಸಹಾಯಹಸ್ತದ ಕೋರಿಕೆ

                 ಬದಿಯಡ್ಕ: ಆತ ಕೇವಲ ಮೂರೂವರೆ ವರ್ಷದ ಪುಟ್ಟ ಮಗು. ತನ್ನ ಬಾಲ್ಯದ ಆಟೋಟಗಳಲ್ಲಿ ಕಳೆಯಬೇಕಾದ ಎಳವೆ. ಮಗುವನ್ನು ಎತ್ತಿ ಆಡಿಸಿ ಸಂತೋಷಪಡಬೇಕಾದ ಹೆತ್ತವರು. ಸಹೋದರನೊಂದಿಗೆ ತುಂಟಾಟದಲ್ಲಿ ತೊಡಗಬೇಕಾದ ಮಗು. ಆದರೆ ಇದ್ಯಾವುದೂ ಆ ಕುಟುಂಬದಲ್ಲಿ ಇಲ್ಲವಾಗಿದೆ. ಪುಟ್ಟ ಮಗುವಿಗೆ ಅಂಟಿದ ವಿಚಿತ್ರ ಖಾಯಿಲೆಯು ಕುಟುಂಬದ ನೆಮ್ಮದಿಯನ್ನೇ ಕಸಿದುಕೊಂಡಿದೆ. ಕಳೆದೆರಡು ವರ್ಷಗಳಿಂದ ಹೆತ್ತವರು ಆಸ್ಪತ್ರೆಯಲ್ಲೇ ವಾಸಿಸುವಂತಾಗಿದೆ.

                ಮೂಲತಃ ಕಾಸರಗೋಡು ಜಿಲ್ಲೆಯ ಪಾಲಕ್ಕುನ್ನು ನಿವಾಸಿಯಾಗಿರುವ ಕೆ.ಮೋಹನ್ ಎಂಬವರು ನೀರ್ಚಾಲು ಸಮೀಪದ ಬಿರ್ಮಿನಡ್ಕ ಎಂಬಲ್ಲಿ ವಾಸಿಸುತ್ತಿದ್ದಾರೆ. ಪತ್ನಿ ಶ್ವೇತಾ ಮತ್ತು ಇಬ್ಬರು ಮುದ್ದಾದ ಪುಟ್ಟ ಗಂಡು ಮಕ್ಕಳ ಚಿಕ್ಕ ಚೊಕ್ಕ ಸಂಸಾರ. ದೊಡ್ಡ ಮಗ ತನುಷ್‍ಗೆ 10 ವರ್ಷ ಪ್ರಾಯ. ಈತ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ 5ನೇ ತರಗತಿಯ ವಿದ್ಯಾರ್ಥಿ. ಮತ್ತೊಬ್ಬ ಮೂರೂವರೆ ವರ್ಷ ಪ್ರಾಯದ ಇಶಾನ್, ಈತ ಒಂದೂವರೆ ವರ್ಷ ಪ್ರಾಯದಲ್ಲಿರುವಾಗ ಅಕಸ್ಮಿಕ ಅನಾರೋಗ್ಯ ಕಂಡು ಬಂದಿತ್ತು. ಅಪಸ್ಮಾರದ ರೀತಿಯಲ್ಲಿ ಮಗುವು ಮಾನಸಿಕ ವ್ಯಗ್ರತೆಯಿಂದ ಹೊರಳಾಡುವುದು, ಏನೇನೋ ಹೇಳುವು ಮಾಡುತ್ತಿತ್ತು. ಆತನನ್ನು ಹಿಡಿದಿಟ್ಟುಕೊಳ್ಳಲು ಇಬ್ಬರ ಸಹಾಯ ಬೇಕಿತ್ತು. ಅನಂತರ ಶ್ವಾಸವು ನಿಂತುಹೋದ ರೀತಿಯಲ್ಲಿ ಮಗುವು ಒಂದು ವಾರದ ವರೆಗೆ ಅಬೋಧಾವಸ್ಥೆಯಲ್ಲೇ ಇರುತ್ತಿತ್ತು. ಇದು ಯಾವ ರೋಗವೆಂದು ಗುರುತಿಸಲು ಸಾಧ್ಯವಾಗದೆ ಇತ್ತೀಚೆಗೆ ವೈದ್ಯರು ಇದನ್ನು ಮಾಕ್ರೊ ಸೆಫಾಲಿ ರೋಗ ಎಂಬುದಾಗಿ ಹೇಳಿದ್ದರು. ಇದೊಂದು ಅಪೂರ್ವ ರೋಗವಾಗಿದ್ದು, ತಲೆಯ ಒಳಗಡೆ ಎಲುಬು ಬೆಳೆಯುವುದು ಎಂಬುದನ್ನು ಸಂಶೋಧನೆಯ ಮೂಲಕ ಕಂಡುಹಿಡಿಯಲಾಗಿದೆ. ಪ್ರಸ್ತುತ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. 6 ವರ್ಷ ತುಂಬುವ ತನಕ ಚಿಕಿತ್ಸೆ ಮುಂದುವರಿಸಬೇಕಾಗಬಹುದು ಎಂದು ತಜ್ಞವೈದ್ಯರ ತಂಡ ತಿಳಿಸಿದೆ. ಪ್ರಸ್ತುತ ತಿಂಗಳಿಗೆ 30-40 ಸಾವಿರದಷ್ಟು ಖರ್ಚಾಗುತ್ತಿದೆ. ಪುಟ್ಟ ಮಗು ಇಶಾನ್‍ನ ಚಿಕಿತ್ಸೆಗಾಗಿ ಈ ಬಡ ಕುಟುಂಬವು ಸಮಾಜದ ಉದಾರ ದಾನಿಗಳ ಸಹಾಯವನ್ನು ಅಪೇಕ್ಷಿಸಿರುತ್ತಾರೆ. ಒಂದು ಪುಟ್ಟ ಮಗುವಿನ ಜೀವವನ್ನು ಉಳಿಸಿದ ಪುಣ್ಯಕಾರ್ಯದಲ್ಲಿ ಸಹೃದಯರು ಕೈಜೋಡಿಸಬೇಕೆಂದು ಕೇಳಿಕೊಳ್ಳಲಾಗಿದೆ. ತಮ್ಮಿಂದಾದ ಚಿಕ್ಕ ಮೊತ್ತವನ್ನಾದರೂ ನೀಡಿ ಕುಟುಂಬಕ್ಕೆ ಆಸರೆಯಾಗೋಣ.

        ಸಹಾಯಧನವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ಕಳುಹಿಸಲು ಕೋರಲಾಗಿದೆ.

   ಶ್ರೀಮತಿ.ಶ್ವೇತಾ

ಎಸ್.ಬಿ.ಐ.ಕಾಸರಗೋಡು ಶಾಖೆ

ಖಾತೆ ಸಂಖ್ಯೆ: 42166650458

ಐ.ಎಫ್.ಎಸ್.ಸಿ.ಶಂಖ್ಯೆ: ಎಸ್.ಬಿ.ಐ.ಎನ್.0006715

ಮೋಹನ್ ಕೆ.ಗೂಗಲ್ ಪೇ: 8848341308



               

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries