ನವದೆಹಲಿ: ಇಂಗ್ಲಿಷ್ ಲೇಖಕಿ, ಪತ್ರಕರ್ತೆ ಗೀತಾ ಮೆಹ್ತಾ ಅವರು ಶನಿವಾರ ದೆಹಲಿಯಲ್ಲಿ ನಿಧನರಾಗಿದ್ದಾರೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸೋದರಿ ಗೀತಾ ಅವರು ಅಮೆರಿಕದ ಖ್ಯಾತ ಪ್ರಕಾಶಕ ಸನ್ನಿ ಮೆಹ್ತಾ ಅವರನ್ನು ವಿವಾಹವಾಗಿದ್ದರು. ಗೀತಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
'ಮೆಹ್ತಾ ಅವರದ್ದು ಬಹುಮುಖಿ ವ್ಯಕ್ತಿತ್ವ. ಬರವಣಿಗೆ ಮತ್ತು ಸಾಕ್ಷ್ಯ ಚಿತ್ರ ನಿರ್ಮಾಣದಲ್ಲಿ ಅವರು ಖ್ಯಾತಿ ಗಳಿಸಿದ್ದರು. ಪ್ರಕೃತಿ ಮತ್ತು ನೀರಿನ ಸಂರಕ್ಷಣೆಯ ಬಗೆಗೆ ಒಲವು ಹೊಂದಿದ್ದರು' ಎಂದು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಮೋದಿ ಪೋಸ್ಟ್ ಪ್ರಕಟಿಸಿದ್ದಾರೆ.
ಕೇಂದ್ರ ಸರ್ಕಾರ 2019ರ ಜನವರಿಯಲ್ಲಿ ಗೀತಾ ಮೆಹ್ತಾ ಅವರಿಗೆ ಪದ್ಮಶ್ರೀ ಘೋಷಿಸಿತ್ತು. ಆದರೆ, ಪ್ರಶಸ್ತಿ ಸ್ವೀಕರಿಸಲು ಅವರು ನಿರಾಕರಿಸಿದ್ದರು.