HEALTH TIPS

ಸ್ಟಾಂಪ್ ಸಂಗ್ರಹದಿಂದ…….ಲೆಕ್ಕವಿಲ್ಲದಷ್ಟು ಜವಾಬ್ದಾರಿಗಳು ಮತ್ತು ಆರ್ಥಿಕ ನಷ್ಟದ ಭಯ: ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಾಗಲು ಅನಾಸಕ್ತಿ: ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯದಿಂದ ಶಾಲೆಗಳು ಅವನತಿ ಭೀತಿಯಲ್ಲಿ

                   ಮಕ್ಕಳಿಗೆ ಮಧ್ಯಾಹ್ನದ ಊಟದ ವೆಚ್ಚ ಭರಿಸುವುದೂ ಪ್ರಾಥಮಿಕ ಶಾಲಾ ಶಿಕ್ಷಕರೇ  ಎಂಬ ಸುದ್ದಿ ಹೊರಬಿದ್ದ ನಂತರ ಕಂಡು ಬಂದ ಸಂಗತಿಗಳು ಗಂಭೀರವಾಗಿವೆ.

                    ಆರ್ಥಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ನಿಭಾಯಿಸಬೇಕಾಗಿರುವುದರಿಂದ ಶಿಕ್ಷಕರು ಎಲ್.ಪಿ. ಮತ್ತು ಯುಪಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಲು ಆಸಕ್ತಿ ಹೊಂದಿಲ್ಲ. ಅಂಚೆಚೀಟಿ ಸಂಗ್ರಹ, ಮಧ್ಯಾಹ್ನದ ಊಟ, ಉಚಿತ ಅಕ್ಕಿ ವಿತರಣೆ ಮುಂತಾದ ಲೆಕ್ಕವಿಲ್ಲದಷ್ಟು ಜವಾಬ್ದಾರಿಗಳನ್ನು ಮತ್ತು ಆರ್ಥಿಕ ಹೊರೆಗಳನ್ನು ಈ ಶಿಕ್ಷಕರು ಹೊರಬೇಕಾಗಿದೆ.

                   ಮೊದಲ ಸಲ ಶಿಕ್ಷಕರಾಗಿ ಸಿಗುವ ಎರಡರಿಂದ ನಾಲ್ಕು ಇನ್‍ಕ್ರಿಮೆಂಟ್‍ಗಳನ್ನು ಬಿಟ್ಟು ಅನೇಕರು ಶಿಕ್ಷಕರಾಗಿಯೇ ಮುಂದುವರಿದಿದ್ದಾರೆ. ಗುರುತರವಾದ ಜವಾಬ್ದಾರಿಗಳ ಭಯದಿಂದ ಶಿಕ್ಷಕರು ಈ ನಿರ್ಧಾರಕ್ಕೆ ಬರುತ್ತಾರೆ. ಎಲ್ಲಾ ಕಾರ್ಯಯೋಜನೆಗಳ ಜೊತೆಗೆ, ಪ್ರಾಥಮಿಕ ಶಿಕ್ಷಕರು ವಾರಕ್ಕೆ 35 ಅವಧಿ ತರಗತಿಗಳನ್ನು ತೆಗೆದುಕೊಳ್ಳಬೇಕು. ಮಧ್ಯಾಹ್ನದ ಊಟಕ್ಕೆ ಸರ್ಕಾರ ಅನುಮತಿಸಿರುವ 6ರಿಂದ 8 ರೂಪಾಯಿ ಹಣ ಸಾಕಾಗದೇ ಇರುವುದರಿಂದ ಶಿಕ್ಷಕರು ವಸೂಲಿ ಮಾಡಲೂ ಪರದಾಡುವಂತಾಗಿದೆ.

              ಇದರ ಜೊತೆಗೆ ಶಾಲೆಯ ನಿರ್ವಹಣೆಗೆ ಇತರ ತುರ್ತು ವೆಚ್ಚವನ್ನು ಸಹ ಕೈಯಿಂದ ಪಾವತಿಸಲಾಗುತ್ತಿದೆ. ಊಟದ ಅಕ್ಕಿಯನ್ನು ಮಾವೇಲಿ ಅಂಗಡಿಯಿಂದ ತರಬೇಕು. ಸÀರ್ಕಾರ ಮಕ್ಕಳಿಗೆ ಓಣಂಗಾಗಿ ನಿಗದಿಪಡಿಸಿದ ಐದು ಕಿಲೋ ಅಕ್ಕಿಯನ್ನು ಮಾವೇಲಿ ಸ್ಟೋರ್‍ನಿಂದ ಪ್ರತಿ ಗೋಣಿಚೀಲಕ್ಕೆ 50 ರೂ.ನಂತೆ ಕಾರ್ಮಿಕರು ಶಾಲೆಗೆ ತಲಪಿಸುತ್ತಾರೆ. ವೆಚ್ಚ ಇತ್ಯಾದಿಗಳನ್ನು ಪ್ರಾಥಮಿಕ ಶಿಕ್ಷಕರೇ ಭರಿಸುತ್ತಾರೆ.

           ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಪಾಲನೆ ಮಾಡಿಲ್ಲ. ಅಂಕಿಅಂಶಗಳನ್ನು ಸರಿಯಾಗಿ ಪ್ರಸ್ತುತಪಡಿಸದಿದ್ದಲ್ಲಿ, ನಿವೃತ್ತಿ ಪ್ರಯೋಜನವಾಗಿ ನೀಡಬೇಕಾದ ಮೊತ್ತವನ್ನು ತಡೆಹಿಡಿಯಲಾಗುತ್ತದೆ, ಪ್ರಾಥಮಿಕ ಶಿಕ್ಷಕರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಸÀರ್ಕಾರಿ ವಲಯದಲ್ಲಿಯೇ ಕಳೆದ ಮೂರು ವರ್ಷಗಳಲ್ಲಿ 500ಕ್ಕೂ ಹೆಚ್ಚು ಮಂದಿ ಈ ಹುದ್ದೆ ತ್ಯಜಿಸಿದ್ದಾರೆ. ಅನುದಾನಿತ ವಲಯದಲ್ಲೂ ಈ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲಿ 7400 ಎಲ್‍ಪಿ ಮತ್ತು ಯುಪಿ ಶಾಲೆಗಳಿವೆ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries