ಕೋಝಿಕ್ಕೋಡ್: ನಿಪಾ ಭೀತಿ ದೂರವಾಗಿದ್ದು ನಾಳೆಯಿಂದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು ತೆರೆಯಲಿದೆ. ಒಂಬತ್ತನೇ ದಿನಕ್ಕೆ ಯಾವುದೇ ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ.
ಸುರಕ್ಷತಾ ನಿಯಮಗಳನ್ನು ಅನುಸರಿಸಿ ಶಾಲೆಗಳನ್ನು ತೆರೆಯುವಂತೆ ಸೂಚಿಸಲಾಗಿದೆ. ಕಂಟೈನ್‍ಮೆಂಟ್ ವಲಯಗಳನ್ನು ಹೊರತುಪಡಿಸಿ ಪ್ರಸ್ತುತ ಶಾಲೆಗಳು ತೆರೆದಿರುತ್ತವೆ.
ಕಂಟೈನ್‍ಮೆಂಟ್ ವಲಯದಲ್ಲಿರುವ ಪಿಎಸ್‍ಸಿ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಸೋಮವಾರ (ಸೆಪ್ಟೆಂಬರ್ 25) ನಡೆಯಲಿರುವ ಪರೀಕ್ಷೆಯ ಕೇಂದ್ರಗಳನ್ನು ಬದಲಾಯಿಸಲಾಗಿದೆ. ಕೋಝಿಕ್ಕೋಡ್‍ನ ಜಿಎಚ್‍ಎಸ್‍ಎಸ್ ಬೇಪೂರ್ ಕೇಂದ್ರ 1 ಅನ್ನು ಜಿಎಚ್‍ಎಸ್‍ಎಸ್ ಕಚ್ಚಿರಾ ಮತ್ತು ಕ್ಯಾಲಿಕಟ್ ಗಲ್ರ್ಸ್ ವಿಎಚ್‍ಎಸ್‍ಎಸ್‍ನ ಕೇಂದ್ರ 2 ಅನ್ನು ಕುಂದುಂಗಲ್‍ಗೆ ಸ್ಥಳಾಂತರಿಸಲಾಗಿದೆ. ಅಭ್ಯರ್ಥಿಗಳು ಹಳೆಯ ಪ್ರವೇಶ ಚೀಟಿಯೊಂದಿಗೆ ಪರಿಷ್ಕøತ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಬಹುದು ಎಂದು ಪಿಎಸ್‍ಸಿ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.
ಏತನ್ಮಧ್ಯೆ, ಇದುವರೆಗೆ 1106 ನಿಪಾ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಂಪರ್ಕ ಪಟ್ಟಿಯಲ್ಲಿರುವ 915 ಜನರು ಪ್ರಸ್ತುತ ಪ್ರತ್ಯೇಕವಾಗಿದ್ದಾರೆ. ಚಿಕಿತ್ಸೆ ಬಳಿಕ 9 ವರ್ಷದ ಬಾಲಕ ಚೇತರಿಸಿಕೊಂಡಿದ್ದಾನೆ. ಸದ್ಯಕ್ಕೆ ಹೊಸ ರೋಗಿಗಳು ಇಲ್ಲದಿರುವುದು ಜಿಲ್ಲೆಗೆ ಸಮಾಧಾನ ತಂದಿದೆ.





