56 ವರ್ಷದ ವ್ಯಕ್ತಿಯೊಬ್ಬ ತನ್ನ ಸಾಕು ಎಮ್ಮೆಯನ್ನು ಎಂದಿನಂತೆ ಮೇಯಿಸಲು ಹೋದಾಗ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ವೆಲ್ಲಿಕುಲಂಗರದಲ್ಲಿ ವರದಿಯಾಗಿದೆ.
ಬುಧವಾರ (ಆಗಸ್ಟ್ 30) ಮಧ್ಯಾಹ್ನದ ವೇಳೆ ಎಮ್ಮೆಯನ್ನು ಮೇಯಿಸಲು ಹೋದ ವ್ಯಕ್ತಿ, ತದನಂತರ ಮನೆಗೆ ಹಿಂತಿರುಗಿ ಬಂದಿಲ್ಲ. ಮನೆಗೆ ಬಾರದ ಹಿನ್ನೆಲೆ ಆತನನ್ನು ಹುಡುಕಿಕೊಂಡು ಹೋದ ಗ್ರಾಮಸ್ಥರಿಗೆ, ಹತ್ತಿರದ ಹೊಳೆಯಲ್ಲಿ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ.
ಹೊಳೆಯ ಬಳಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಎಮ್ಮೆ ಕೂಡ ಸಮೀಪದಲ್ಲಿಯೇ ಇತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವೆಲ್ಲಿಕುಲಂಗರ ಠಾಣೆಯ ಪೊಲೀಸರು ವ್ಯಕ್ತಿ ಸಾವನ್ನಪ್ಪಿದ್ದಾನೆ. ಆತನ ಮೇಲೆ ಎಮ್ಮೆ ದಾಳಿ ಮಾಡಿದೆಯೇ ಅಥವಾ ಆಕಸ್ಮಿಕವಾಗಿ ಸಂಭವಿಸಿದೆಯೇ ಎಂಬುದು ತಿಳಿದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ,





