ಕಾಸರಗೋಡು: ರಾತ್ರಿಯ ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಕಂಡು ಬಂದ ಐವರ ತಂಡವನ್ನು ವಿಚಾರಣೆಗೆ ಒಳಪಡಿಸಿದ ಎಸ್‍ಐಗೆ ಥಳಿಸಿದ ಘಟನೆ ನಡೆದಿದೆ.
ನಿನ್ನೆ ಬೆಳಗಿನ ಜಾವ ಒಂದು ಗಂಟೆಗೆ ಈ ಘಟನೆ ನಡೆದಿದೆ. ಉಪ್ಪಳ ಹಿದಾಯತ್ ನಗರದಲ್ಲಿ ಎಸ್‍ಐಗೆ ಥಳಿಸಲಾಗಿದೆ. ವಾಗ್ವಾದ ಮತ್ತು ತಳ್ಳಾಟದ ನಂತರ ಎಸ್‍ಐ ಮೇಲೆ ಹಲ್ಲೆ ನಡೆಸಲಾಗಿದೆ.
ಹಲ್ಲೆಯಿಂದ ಎಸ್‍ಐ ಬಲಗೈಗೆ ಗಾಯವಾಗಿದೆ. ಘಟನೆ ಬಳಿಕ ಯುವಕರು ಪ್ರಯಾಣಿಸುತ್ತಿದ್ದ ಬೈಕ್ ಹಾಗೂ ಕಾರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಗುಂಪಿನಲ್ಲಿದ್ದ ಅಫ್ಜಲ್, ರಶೀದ್ ಮತ್ತು ಸತ್ತಾರ್ ರನ್ನು ಪೋಲೀಸರು ಗುರುತಿಸಿದ್ದಾರೆ. ಅವರನ್ನು ಬಂಧಿಸಲು ಪೋಲೀಸರು ಯತ್ನಿಸುತ್ತಿದ್ದಾರೆ.
ಶನಿವಾರ ಇಡುಕ್ಕಿಯಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಚಿನ್ನಕನಾಲ್‍ನಲ್ಲಿ ಅಪಹರಣ ಪ್ರಕರಣದ ತಂಡವನ್ನು ಬಂಧಿಸಲು ಬಂದಿದ್ದ ಕಾಯಂಕುಳಂ ಪೋಲೀಸ್ ತಂಡದ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ ಸಿವಿಲ್ ಪೋಲೀಸ್ ಅಧಿಕಾರಿ ದೀಪಕ್ ಚಾಕುವಿನಿಂದ ಇರಿತಕ್ಕೊಳಗಾಗಿದ್ದಾರೆ. ಹೋಟೆಲ್ ಮಾಲೀಕ ರಿಹಾಸ್ ನನ್ನು ಥಳಿಸಿದ ಪ್ರಕರಣದ ಆರೋಪಿಗಳ ಹುಡುಕಾಟದಲ್ಲಿ ಕಾಯಂಕುಳಂ ಪೋಲೀಸ್ ತಂಡ ಚಿನ್ನಕನಾಲ್ ಗೆ ತೆರಳಿತ್ತು.





