ನವದೆಹಲಿ (PTI): 'ಇಂದು ವಿಶ್ವವು ಉತ್ತರ- ದಕ್ಷಿಣ ಮತ್ತು ಪೂರ್ವ- ಪಶ್ಚಿಮಗಳಾಗಿ ಎಂದು ವಿಭಜನೆಯಾಗಿದ್ದು, ಅದನ್ನು ಒಗ್ಗೂಡಿಸುವ ಜವಾಬ್ದಾರಿ ಭಾರತದ ಮೇಲಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಗುರುವಾರ ಹೇಳಿದರು.
0
samarasasudhi
ಸೆಪ್ಟೆಂಬರ್ 01, 2023
ನವದೆಹಲಿ (PTI): 'ಇಂದು ವಿಶ್ವವು ಉತ್ತರ- ದಕ್ಷಿಣ ಮತ್ತು ಪೂರ್ವ- ಪಶ್ಚಿಮಗಳಾಗಿ ಎಂದು ವಿಭಜನೆಯಾಗಿದ್ದು, ಅದನ್ನು ಒಗ್ಗೂಡಿಸುವ ಜವಾಬ್ದಾರಿ ಭಾರತದ ಮೇಲಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಗುರುವಾರ ಹೇಳಿದರು.
'ಜಗತ್ತು ಉತ್ತಮ ಆರೋಗ್ಯ, ಶಿಕ್ಷಣ, ಪೌಷ್ಟಿಕ ಆಹಾರ, ಜಲ, ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.
'ವಿಶ್ವವು ಒಂದೆಡೆ ಅಭಿವೃದ್ದಿ ಹೊಂದಿದ (ಉತ್ತರ) ಮತ್ತು ಅಭಿವೃದ್ಧಿ ಹೊಂದುತ್ತಿರುವ (ದಕ್ಷಿಣ) ದೇಶಗಳಾಗಿ ವಿಭಜನೆಯಾಗಿದೆ. ಮತ್ತೊಂದೆಡೆ ಉಕ್ರೇನ್ ಯುದ್ಧದಿಂದಾಗಿ ದೇಶಗಳು ಪೂರ್ವ ಮತ್ತು ಪಶ್ಚಿಮ ಧ್ರುವಗಳಾಗಿ ವಿಭಜನೆಯಾಗಿವೆ. ನಾವು ತಟಸ್ಥವಾಗಿದ್ದು, ಈ ವಿಭಜಿತ ಜಗತ್ತನ್ನು ಒಗ್ಗೂಡಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ' ಎಂದು ಹೇಳಿದರು.