HEALTH TIPS

ಮೊರೊಕ್ಕೊ ಭೂಕಂಪ: ಭಾರತೀಯರಿಗೆ ಹಾನಿಯಾದ ವರದಿ ಇಲ್ಲ- ರಾಯಭಾರ ಕಚೇರಿ

               ಬತ್: ಉತ್ತರ ಆಫ್ರಿಕಾದ ಮೊರೊಕ್ಕೊ ದೇಶದಲ್ಲಿ ಸಂಭವಿಸಿದ ಭೂಕಂಪದಿಂದಾಗಿ 2,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ, ಭಾರತ ಮೂಲದ ಯಾರೊಬ್ಬರಿಗೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

                  ದೇಶದ ಎಲ್ಲಾ ನಾಗರಿಕರಿಗೆ ಶಾಂತವಾಗಿರಲು ಸಲಹೆ ನೀಡಿದೆ.

             ಸ್ಥಳೀಯ ಅಧಿಕಾರಿಗಳು ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ ಎಂದು ಅದು ತಿಳಿಸಿದೆ.

                ಶುಕ್ರವಾರ ತಡರಾತ್ರಿ ಮೊರೊಕ್ಕೊದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.

2,012 ಜನರು ಸಾವಿಗೀಡಾಗಿದ್ದಾರೆ ಎಂದು ಮೊರೊಕ್ಕೊ ಆಂತರಿಕ ಸಚಿವಾಲಯ ಶನಿವಾರ ತಡರಾತ್ರಿ ತಿಳಿಸಿದೆ. ಕನಿಷ್ಠ 2,059 ಜನರು ಗಾಯಗೊಂಡಿದ್ದಾರೆ, ಇದರಲ್ಲಿ 1,404 ಮಂದಿ ಸ್ಥಿತಿ ಗಂಭೀರವಾಗಿದೆ.

ಭೂಕಂಪದ ನಂತರ ರಬತ್‌ನಲ್ಲಿ ಭಾರತದ ರಾಯಭಾರ ಕಚೇರಿ ಶನಿವಾರ ಸಲಹೆಯನ್ನು ನೀಡಿದ್ದು, ಸಮುದಾಯದ ಸದಸ್ಯರ ಜೊತೆ ಸಂಪರ್ಕದಲ್ಲಿದೆ ಎಂದು ಹೇಳಿದೆ.

                 'ಇಲ್ಲಿಯವರೆಗೆ, ಭೂಕಂಪದಿಂದಾಗಿ ಯಾವುದೇ ಭಾರತೀಯ ಪ್ರಜೆ ಹಾನಿಗೊಳಗಾದ ವರದಿಯಾಗಿಲ್ಲ'ಎಂದು ಅದು ಹೇಳಿದೆ.

                'ಮೊರೊಕ್ಕೊದಲ್ಲಿ ನೆಲೆಸಿರುವ ಎಲ್ಲಾ ಭಾರತೀಯ ನಾಗರಿಕರಿಗೆ ಭೂಕಂಪದ ಕುರಿತಾದ ಅಗತ್ಯವಿರುವ ಯಾವುದೇ ಸಹಾಯಕ್ಕಾಗಿ ನಮ್ಮ 24x7ಸಹಾಯವಾಣಿ ಸಂಖ್ಯೆ +212 661 297 491ಗೆ ಕರೆ ಮಾಡಬಹುದು' ಎಂದು ರಬತ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ..

                  'ಈ ಕಷ್ಟದ ಸಮಯದಲ್ಲಿ ಮೊರೊಕ್ಕೊಗೆ ನೆರವು ನೀಡಲು ಭಾರತ ಸಿದ್ಧವಾಗಿದೆ'ಎಂದು ಅದು ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries