HEALTH TIPS

G20 Summit: ವಿಶ್ವ ನಾಯಕರ ಭೋಜನಕ್ಕೆ ಬೆಳ್ಳಿ ಲೇಪಿತ ಪಾತ್ರೆಗಳ ಬಳಕೆ

            ವದೆಹಲಿ: ಜಿ-20 ಶೃಂಗಸಭೆಯಲ್ಲಿ ಭಾಗವಹಿಸುವ ವಿಶ್ವ ನಾಯಕರಿಗೆ ಭಾರತದ ಸಾಂಸ್ಕೃತಿಕ ಪರಂಪರೆ ಹೊಂದಿರುವ ಕಲಾತ್ಮಕ ಕೆತ್ತನೆಗಳಿರುವ ಬೆಳ್ಳಿ, ಚಿನ್ನ ಲೇಪಿತ ತಟ್ಟೆಯಲ್ಲಿ ಊಟವನ್ನು ನೀಡಲಾಗುತ್ತದೆ ಎಂದು ಜೈಪುರ ಮೂಲದ ಮೆಟಲ್‌ವೇರ್ ಸಂಸ್ಥೆ ಐರಿಸ್‌ ಜೈಪುರ್‌ ಹೇಳಿದೆ.

             ಸಂಸ್ಥೆಯು ದೆಹಲಿಯಲ್ಲಿ ಮಂಗಳವಾರ ಅತಿಥಿಗಳ ಆತಿಥ್ಯಕ್ಕೆ ಬಳಸುವ ಪಾತ್ರೆಗಳ ಪೂರ್ವವೀಕ್ಷಣೆಯನ್ನು ನಡೆಸಿತು. ‌

           ಉಣಬಡಿಸಲು ಬಳಸಲಾಗುವ ಪಾತ್ರೆಗಳಲ್ಲಿ ಬಹುತೇಕವು ಸ್ಟೀಲ್‌, ಹಿತ್ತಾಳೆಯ ತಳವನ್ನು ಹೊಂದಿವೆ. ಇನ್ನು ಕೆಲವು ಮಿಶ್ರ ಲೋಹಗಳ ಪಾತ್ರೆಗೆ ಬೆಳ್ಳಿಯ ಲೇಪನವನ್ನು ಮಾಡಲಾಗಿದೆ. ಸ್ವಾಗತ ಪಾನೀಯಗಳನ್ನು ನೀಡಲು ಬಳಸುವ ಲೋಟ, ತಟ್ಟೆಗಳಂತಹ ಕೆಲವು ಸಾಮಾನುಗಳು ಚಿನ್ನದ ಲೇಪನವನ್ನು ಹೊಂದಿರುತ್ತವೆ ಎಂದು ಸಂಸ್ಥೆ ಪಿಟಿಐಗೆ ತಿಳಿಸಿದೆ.

               ಜಿ20 ಶೃಂಗದಲ್ಲಿ ಪಾಲ್ಗೊಳ್ಳುವವರಿಗಾಗಿಯೇ 15 ಸಾವಿರ ಬೆಳ್ಳಿಯ ಪಾತ್ರೆಗಳನ್ನು 200 ಜನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ. ಜೈಪುರ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಕರ್ನಾಟಕ ಸೇರಿ ಇನ್ನೂ ಕೆಲವು ರಾಜ್ಯಗಳಲ್ಲಿನ ಕಲಾಕಾರರು ಇದನ್ನು ತಯಾರಿಸಿದ್ದಾರೆ.

                ಜಿ20 ಶೃಂಗದ ಊಟೋಪಚಾರದಲ್ಲಿ ಬಳಸಲಾಗುತ್ತಿರುವ ಪಾತ್ರೆಗಳ ಮೇಲಿನ ಕೆತ್ತನೆ ಅತಿ ಸೂಕ್ಷ್ಮ ವಿವರಗಳನ್ನು ಹೊಂದಿವೆ. ಮಣಿಗಳ ಅಂಚು, ಕೈ ಹಾಗೂ ಯಂತ್ರಗಳಿಂದ ಸಿದ್ಧಗೊಂಡಿರುವ ಈ ವಿನ್ಯಾಸಗಳಲ್ಲಿ ಸಮಕಾಲೀನ ಎರಕದ ತಂತ್ರಜ್ಞಾನ ಬಳಸಲಾಗಿದೆ ಎಂದು ಸಂಸ್ಥೆಯನ್ನು ಮುನ್ನಡೆಸುತ್ತಿರುವ ರಾಜೀವ್‌ ಪಬುವಾಲ್‌ ಎನ್ನುವವರು ಮಾಹಿತಿ ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries