HEALTH TIPS

ದೇಶದ ಅಕ್ಷರ ಪ್ರೇಮಿ ಹಿರಿಯಜ್ಜಿ ನಿಧನ: 'ನನಗೆ 10ನೇ ತರಗತಿಯವರೆಗೆ ಓದಬೇಕು, ಆದರೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ..' ಎಂಬ ಆಶೆಯೊಂದಿಗೆ ಮುಗಿದ ಜೀವನ: ಅಕ್ಷರಗಳನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದ 'ಅಕ್ಷರ ಮುತ್ತಸ್ಸಿ'; ಕೇರಳದ ಕಾತ್ರ್ಯಾನಿ ಅಮ್ಮ ಇನ್ನಿಲ್ಲ

          

                   ಆಲಪ್ಪುಳ:   ದೃಢಸಂಕಲ್ಪಕ್ಕೆ ಸಮಾನಾರ್ಥಕ ಪದ, ಆತ್ಮಸ್ಥೈರ್ಯದ ಪ್ರತೀಕ - ಅದು ಅಕ್ಷರ ಪ್ರೇಮದ ಹಿರಿಯಜ್ಜಿ ಕಾತ್ರ್ಯಾಯನಿ ಅಮ್ಮ.

              ಜ್ಞಾನದ ಅನ್ವೇಷಣೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ ಧೀರ ಮಹಿಳೆ. ಕಾತ್ರ್ಯಾಯನಿ ಅಮ್ಮ ರಾಜ್ಯದ ಅತ್ಯಂತ ಹಿರಿಯ ಓದುಗ ವಿದ್ಯಾರ್ಥಿನಿ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಲಯಾಳಂನಲ್ಲಿ ಮಾತನಾಡಿದ ಆ ಅಜ್ಜಿಯನ್ನು ಯಾರೂ ಬೇಗ ಮರೆಯುವುದಿಲ್ಲ. ವೃದ್ದಾಪ್ಯದ ದೌರ್ಬಲ್ಯಗಳಿಂದ ದೂರ ಸರಿಯುತ್ತಿದ್ದ ವೃದ್ಧರ ನಡುವೆ ಅಕ್ಷರ ಪ್ರೇಮಿ ಹಿರಿಯಜ್ಜಿ ಇಂದೀಗ ನೆನಪಾಗಿದ್ದಾರೆ. 

               ಕಾರ್ತಿಯಾನಿ ಅಮ್ಮ ಆಲಪ್ಪುಳದ ಮೂಲದವರು. ಅಮ್ಮ ರಾಜ್ಯ ಸಾಕ್ಷರತಾ ಮಿಷನ್ ನ ‘ಅಕ್ಷರ ಲಕ್ಷಂ ಸಾಕ್ಷರತಾ ಪರೀಕ್ಷೆ’ಯಲ್ಲಿ ನಾಲ್ಕನೇ ತರಗತಿಯಲ್ಲಿ ಶೇ.98 ಅಂಕಗಳೊಂದಿಗೆ ತೇರ್ಗಡೆಯಾಗಿ ಪ್ರಥಮ ಯಾರ್ಂಕ್ ಪಡೆದಿದ್ದರು. ಕಾತ್ರ್ಯಾಯನಿ ಅಮ್ಮ ಅವರು ಮಹಿಳಾ ಸಬಲೀಕರಣದಲ್ಲಿ ಅಸಾಧಾರಣ ಕೊಡುಗೆ ನೀಡಿದ್ದಾರೆ. 2019 ರಲ್ಲಿ, ಅಮ್ಮ ತಮ್ಮ 98 ನೇ ವಯಸ್ಸಿನಲ್ಲಿ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ದೇಶದ ಅತ್ಯಂತ ಹಿರಿಯ ವ್ಯಕ್ತಿಯಾದರು. ಈ ಪ್ರತಿಷ್ಠಿತ ಸಾಧನೆಯ ನಂತರ ಕೇಂದ್ರ ಸರ್ಕಾರ ನಾರಿ ಶಕ್ತಿ ಪುರಸ್ಕಾರ ನೀಡಿ ಗೌರವಿಸಿತ್ತು. ಇದು ಮಹಿಳೆಯರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾಗಿದೆ. ಪ್ರಧಾನಿಯವರ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್‍ನಲ್ಲೂ ಕಾತ್ರ್ಯಾಯನಿ ಅಮ್ಮನ ಬಗ್ಗೆ ಪ್ರಸ್ತಾಪಿಸಿದ್ದರು. ಇತ್ತೀಚಿಗೆ ನಡೆದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕೇರಳದ ಪ್ಲಾಟ್‍ನಲ್ಲಿ ಸ್ಥಾನ ಪಡೆಯಲು ಅಮ್ಮ ಕೂಡ ಬಯಸಿದ್ದರು.


                  ನಾರಿ ಶಕ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಭೇಟಿ ಇವತ್ತಿಗೂ ವೈರಲ್ ಆಗಿದೆ. 100 ಅಂಕ ಬರುತ್ತೆ ಅಂದುಕೊಂಡಿದ್ದೆ ಆದರೆ 98 ಬಂದಿತ್ತು. ಹತ್ತನೇ ತರಗತಿ ವರೆಗೂ ಓದಬೇಕು ಎಂದು ಆ ಅಜ್ಜಿ ಪ್ರಧಾನಿಗೆ ತಿಳಿಸಿದ್ದರು. ಕಂಪ್ಯೂಟರ್ ಕಲಿಯುತ್ತಿದ್ದು, ಮೊಮ್ಮಕ್ಕಳಿಂದ ಕಲಿಯುತ್ತಿರುವೆ ಎಂದು ತಾಯಿ ಹೇಳಿದ್ದರು. ಆಸೆಯಿದ್ದರೆ ಅದನ್ನು ಸಾಧಿಸಲು ಇಡೀ ಜಗತ್ತೇ ಇದೆ ಎಂಬುದಕ್ಕೆ ಕಾತ್ರ್ಯಾನಿ ಅಮ್ಮನೇ ಸಾಕ್ಷಿ.

                   ಈ ಅಲಪ್ಪುಳ ತಾಯಿಗೆ ಬಾಲ್ಯದಿಂದಲೂ ಅಕ್ಷರಗಳ ಮೇಲೆ ಇನ್ನಿಲ್ಲದ ಪ್ರೀತಿ. ಆದರೆ ಕುಟುಂಬದ ದುರ್ಬಲತೆ ಮತ್ತು ಹಸಿವು ಬಾಲಕಿ ಕಾತ್ರ್ಯಾಯನಿ ಅವರನ್ನು ಅಕ್ಷರ  ಲೋಕದಿಂದ ದೂರವಿಟ್ಟಿತು. ಇಳಿವಯಸ್ಸಿನಲ್ಲಿ ಶಿಕ್ಷಣ ಬಿಟ್ಟರೂ ಕಲಿಕೆಯ ಆಸಕ್ತಿ ಅವರಲ್ಲಿತ್ತು. ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಆಕೆಯ ಪತಿ ಅನಿರೀಕ್ಷಿತವಾಗಿ ವಿದಾಯ ಹೇಳಿದಾಗ, ಅವರು ತನ್ನ ಆರು ಮಕ್ಕಳನ್ನು ಬೆಂಬಲಿಸಲು ವಿವಿಧಡೆ ಮನೆಗೆಲಸ ಸಹಿತ ಕೂಲಿ ಕೆಲಸವನ್ನು ಮಾಡಿದ್ದಳು. ನಂತರ ಅವರು ತಮ್ಮ ಜೀವನದ ಮಹತ್ವಾಕಾಂಕ್ಷೆಯನ್ನು ತಮ್ಮ ಪುತ್ರರು ಮತ್ತು ಸೊಸೆಯರೊಂದಿಗೆ ಹಂಚಿಕೊಂಡರು. ಅವರ ಸಂಪೂರ್ಣ ಬೆಂಬಲದೊಂದಿಗೆ ಕಾತ್ರ್ಯಾಯನಿ ಅಮ್ಮ ತಮ್ಮ ಆಸೆಯನ್ನು ಪೂರೈಸಿದರು. 96 ವರ್ಷದ ತಾಯಿ ಹಾಗೂ 60 ವರ್ಷದ ಮಗಳು ಒಟ್ಟಿಗೆ ಸಮಾನತೆ ಪರೀಕ್ಷೆ ಬರೆದಿರುವುದು ಕೂಡ ಕುತೂಹಲ ಮೂಡಿಸಿತ್ತು. ಮಗಳಿಗಿಂತ ಹೆಚ್ಚಿನ ಅಂಕಗಳು ತಾಯಿಗೆ ಲಭಿಸಿ ಅವಳಿಗೆ ತಿಳಿಯದೆ ಇತಿಹಾಸದ ಭಾಗವಾಗುತ್ತಿದ್ದಳು. ಈ ಅದ್ಭುತ ಯಶಸ್ಸು ಸಿಕ್ಕಿದ್ದು 4ನೇ ತರಗತಿ ಪರೀಕ್ಷೆಯಲ್ಲಿ.

               ಇತ್ತೀಚೆಗμÉ್ಟೀ ತಾಯಿ ಅನಾರೋಗ್ಯದಿಂದ ಬಳಲುತ್ತಿರುವುದು ಹೊರಜಗತ್ತಿಗೆ ತಿಳಿಯಿತು. ತಾಯಿ ಸೊಂಟದ ಕೆಳಗೆ ಪಾಶ್ರ್ವವಾಯುವಿಗೆ ಒಳಗಾಗಿದ್ದರು ಮತ್ತು ಹಾಸಿಗೆ ಹಿಡಿದಿದ್ದರು. ಸಾಕ್ಷರತಾ ಮಿಷನ್ ನ 7ನೇ ತರಗತಿ ಸಮಾನತೆ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಪಾಶ್ರ್ವವಾಯುವಿಗೆ ತುತ್ತಾಗಿದ್ದರು. 103ರ ಹರೆಯದಲ್ಲೂ ಕಲಿಯುವ ಹಂಬಲದಲ್ಲೇ ಕಾತ್ರ್ಯಾಯಿನಿ ಅಮ್ಮ ತೀರಿಕೊಂಡರು. ಹರಿಪಾಡ್ ನ ಸ್ವಗೃಹದಲ್ಲಿ ನಿಧನರಾದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries