HEALTH TIPS

ಕೆ.ಎಸ್.ಆರ್.ಟಿ.ಸಿ- ಭಾರೀ ವಾಹನಗಳಿಗೆ ಕಡ್ಡಾಯ ಸೀಟ್ ಬೆಲ್ಟ್: ನವೆಂಬರ್ 1 ರಿಂದ ಕಾನೂನು ಜಾರಿಗೆ

                    ತಿರುವನಂತಪುರಂ: ನವೆಂಬರ್ 1ರಿಂದ ಕೆ.ಎಸ್.ಆರ್.ಟಿ.ಸಿ. ಸೇರಿದಂತೆ ಎಲ್ಲಾ ಭಾರಿ ವಾಹನಗಳಿಗೆ ಸೀಟ್ ಬೆಲ್ಟ್ ಕಡ್ಡಾಯವಾಗಲಿದೆ.

                  ಚಾಲಕ ಮತ್ತು ಮುಂಭಾಗದ ಸೀಟ್ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯವಾಗಿದೆ. ಈ ಬಗ್ಗೆ ಸಾರಿಗೆ ಸಚಿವ ಆಂಟನಿ ರಾಜು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಸಂಸದರು ಮತ್ತು ಶಾಸಕರ ವಾಹನಗಳು ಸೆಪ್ಟೆಂಬರ್‍ನಲ್ಲಿ 56 ಬಾರಿ ಕಾನೂನು ಉಲ್ಲಂಘಿಸಿವೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

               ಈ ಹಿಂದೆ ಭಾರಿ ವಾಹನಗಳಲ್ಲಿ ಚಾಲಕರು ಮತ್ತು ಮುಂಭಾಗದ ಸೀಟಿನ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯಗೊಳಿಸುವ ಪ್ರಸ್ತಾವನೆ ಇತ್ತು. ಆದರೆ ಇದನ್ನು ಅನುಷ್ಠಾನಗೊಳಿಸಲು ವಿಳಂಬ ಮಾಡಬೇಕು ಎಂದು ಸಚಿವರು ಹೇಳಿದ್ದರು. ವಿವರವಾದ ಚರ್ಚೆಯ ನಂತರ, ನವೆಂಬರ್ 1 ರಿಂದ ಕೇರಳದ ಮೂಲಕ ಸಂಚರಿಸುವ ಎಲ್ಲಾ ಭಾರೀ ವಾಹನಗಳಲ್ಲಿ ಸೀಟ್ ಬೆಲ್ಟ್ ಅನ್ನು ಕಡ್ಡಾಯಗೊಳಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries