HEALTH TIPS

ಬಿಹಾರ: ಸೆಪ್ಟೆಂಬರ್‌ ತಿಂಗಳಲ್ಲಿಯೇ 6 ಸಾವಿರಕ್ಕೂ ಹೆಚ್ಚು ಡೆಂಗಿ ಪ್ರಕರಣ ವರದಿ

              ಪಾಟ್ನಾ: ಬಿಹಾರದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸೆಪ್ಟೆಂಬರ್‌ನಲ್ಲಿ 6,146 ಪ್ರಕರಣಗಳು ವರದಿಯಾಗಿದ್ದು, ಕಳೆದ ಐದು ವರ್ಷದಲ್ಲಿಯೇ ಒಂದು ತಿಂಗಳಿನಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

                 'ರಾಜ್ಯದಲ್ಲಿ ಈ ವರ್ಷ 6,421 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 6,146 ಪ್ರಕರಣಗಳು ಸೆಪ್ಟೆಂಬರ್‌ ತಿಂಗಳಲ್ಲಿ ವರದಿಯಾಗಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 1,896 ಪ್ರಕರಣಗಳು ವರದಿಯಾದರೆ, ಈ ವರ್ಷ ಅದರ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ' ಎಂದು ಇಲಾಖೆ ತಿಳಿಸಿದೆ.

                  ಶುಕ್ರವಾರ ರಾಜ್ಯದಲ್ಲಿ 416 ಪ್ರಕರಣಗಳು ವರದಿಯಾಗಿದ್ದು, ಪಾಟ್ನಾದಲ್ಲಿ 177 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಮುಂಗಾರ್‌ನಲ್ಲಿ 33, ಭಾಗಲ್ಪುರದಲ್ಲಿ 27 ಮತ್ತು ಬೇಗುಸರಾಯ್‌ನಲ್ಲಿ 17 ಪ್ರಕರಣಗಳು ವರದಿಯಾಗಿವೆ.

                ಈ ವರ್ಷ ಸೆಪ್ಟೆಂಬರ್‌ 17ರವರೆಗೆ ಏಳು ಜನರು ಡೆಂಗಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ನ್ಯಾಷನಲ್‌ ಸೆಂಟರ್‌ ಫಾರ್‌ ವೆಕ್ಟರ್‌ ಬಾರ್ನೆ ಡಿಸಿಸಸ್‌ ಕಂಟ್ರೋಲ್‌ ತಿಳಿಸಿದೆ.

ಕಳೆದ ವರ್ಷ ಬಿಹಾರದಲ್ಲಿ 13,972 ಪ್ರಕರಣಗಳು ವರದಿಯಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries