ಮುಂಬೈ: ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿದ್ದ ಬಾಲಿವುಡ್ ನಟಿ ನುಶ್ರತ್ ಭರುಚಾ ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣಕ್ಕೆ ನುಶ್ರತ್ ಬಂದಿರುವ ದೃಶ್ಯಗಳನ್ನು ಪಿಟಿಐ ಹಂಚಿಕೊಂಡಿದೆ.
0
samarasasudhi
ಅಕ್ಟೋಬರ್ 08, 2023
ಮುಂಬೈ: ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿದ್ದ ಬಾಲಿವುಡ್ ನಟಿ ನುಶ್ರತ್ ಭರುಚಾ ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣಕ್ಕೆ ನುಶ್ರತ್ ಬಂದಿರುವ ದೃಶ್ಯಗಳನ್ನು ಪಿಟಿಐ ಹಂಚಿಕೊಂಡಿದೆ.
9ನೇ ಹೈಫಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ನುಶ್ರತ್ ಇಸ್ರೇಲ್‌ಗೆ ತೆರಳಿದ್ದು, ದುರದೃಷ್ಟವಶಾತ್ ಯುದ್ಧ ಪೀಡಿತ ನೆಲದಲ್ಲಿ ಸಿಲುಕಿಕೊಂಡಿದ್ದಾರೆ.
'ಮಧ್ಯಾಹ್ನ 12.30ರ ಹೊತ್ತಿಗೆ ನಾವು ಅವರನ್ನು ಸಂಪರ್ಕಿಸಿದೆವು. ನೆಳಮಾಳಿಗೆಯಲ್ಲಿ ರಕ್ಷಣೆ ಪಡೆದಿರುವುದಾಗಿ ತಿಳಿಸಿದ್ದರು. ಇದಾದ ಬಳಿಕ ಅವರನ್ನು ಸಂಪರ್ಕಿಸಲು ನಮಗೆ ಸಾಧ್ಯವಾಗಲಿಲ್ಲ. ನುಶ್ರತ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಿಸಲು ಪ್ರಯತ್ನಿಸುತ್ತಿದ್ದೇವೆ' ಎಂದೂ ಸದಸ್ಯರು ಮಾಹಿತಿ ನೀಡಿದ್ದರು.
ನುಶ್ರತ್ ನಟನೆಯ 'ಅಕೆಲ್ಲಿ' ಚಿತ್ರ ಹೈಫಾ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿತ್ತು.