ಕುಂಬಳೆ: ಅನಂತಪುರ ಪರಿಸರದಲ್ಲಿ ದುರ್ಗಂಧ ಬೀರುತ್ತಿರುವ ಕೋಳಿ ತ್ಯಾಜ್ಯ ಸಂಸ್ಕರಣ ಘಟಕಗಳಿಗೆ ಎದುರಾಗಿ ಹಾಗೂ ದೇವರ ಗುಡ್ಡೆಯನ್ನು ಕೊರೆದು ಮಣ್ಣನ್ನು ಸಾಗಿಸುತ್ತಿರುವುದರ ವಿರುದ್ಧ ಅನಂತಪುರ ಉಳಿಸಿ ಕ್ರಿಯಾ ಸಮಿತಿ ವತಿಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದ ವೇದಿಕೆಗೆ ಜಿಲ್ಲಾಧಿಕಾರಿ ಇನ್ಬಶೇಕರ್ ಶನಿವಾರ ಆಗಮಿಸಿ ಪರಿಶೀಲನೆ ನಡೆಸಿದರು.
ಸ್ಥಳದಲ್ಲಿ ನಡೆಯುತ್ತಿರುವ ಅನಧಿಕೃತ ಘಟಕಗಳಿಗೂ ಭೇಟಿ ನೀಡಿ ವಿಷಯಗಳ ಗಂಭೀರತೆ ಅವಲೋಕಿಸಿ ಜಿಲ್ಲಾಧಿಕಾರಿ ಹಲವು ಪರಿಹಾರ ಮಾರ್ಗ ನಿರ್ದೇಶಗಳನ್ನು ಅಧಿಕಾರಿಗಳಿಗೆ ನೀಡಿದರು. ಜನರಿಗೆ ಆದಷ್ಟು ಬೇಗನೆ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುವುದಾಗಿ ತಿಳಿಸಿದರು. ಕ್ರಿಯಾ ಸಮಿತಿಯು ಸಮಸ್ಯೆ ಪರಿಹಾರಗೊಂಡ ನಂತರವೇ ಸತ್ಯಾಗ್ರಹವನ್ನು ಹಿಂಪಡೆಯುವುದಾಗಿ ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ. ಅ. 30 ರಂದು ಕಲೆಕ್ಟರ್ ಸಭಾಂಗಣದಲ್ಲಿ ಅಧಿಕೃತ ಸಭೆಯನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕರೆಯಲಾಗುವ ಬಗ್ಗೆ ಭರವಸೆ ನೀಡಿದರು.

.jpg)
