ನವದೆಹಲಿ: ಆಧಾರ್‍ನಂತೆಯೇ, ದೇಶದ ಪ್ರತಿ ಶಾಲಾ ವಿದ್ಯಾರ್ಥಿಗಳಿಗೂ ವಿಶಿಷ್ಟ ಗುರುತಿನ ಸಂಖ್ಯೆ ಬರಲಿದೆ.
ಈ ವ್ಯವಸ್ಥೆಯನ್ನು 'ಸ್ವಯಂಚಾಲಿತ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ' (ಎಪಿಎಎಆರ್) ಎಂದು ಕರೆಯಲಾಗುತ್ತದೆ. ಕೇಂದ್ರ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ 'ಒಂದು ದೇಶ, ಒಂದು ವಿದ್ಯಾರ್ಥಿ ಒಂದು ಐಡಿ' ರಚಿಸಲು ಯೋಜಿಸಿದೆ.
ಸ್ವಯಂಚಾಲಿತ ಪರ್ಮನೆಂಟ್ ಅಕಡೆಮಿಕ್ ಅಕೌಂಟ್ ರಿಜಿಸ್ಟ್ರಿ ಎಂಬ ಹೆಸರಿನಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲಾ ವಿದ್ಯಾರ್ಥಿಗಳೆಂಬ ಭೇದವಿಲ್ಲದೆ ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಕೇಂದ್ರ ಯೋಜಿಸಿದೆ. ಶಾಲಾ ಮಕ್ಕಳಿಗೆ ಆಧಾರ್ ಕಾರ್ಡ್ ಹೊರತುಪಡಿಸಿ ಇನ್ನೊಂದು ಗುರುತಿನ ಸಂಖ್ಯೆ ನೀಡಲಾಗುತ್ತದೆ. ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗಿನ ವಿದ್ಯಾರ್ಥಿಗಳಿಗೆ ಗುರುತಿನ ಸಂಖ್ಯೆ ನೀಡಲಾಗುವುದು. ಮಕ್ಕಳ ಶೈಕ್ಷಣಿಕ ಸಾಧನೆ ಮತ್ತು ಇತರ ಸಾಧನೆಗಳನ್ನು ಪತ್ತೆಹಚ್ಚಲು ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.
ಒಂದು ದೇಶ, ಒಂದು ವಿದ್ಯಾರ್ಥಿ ಐಡಿ ಕುರಿತು ಪೋಷಕರನ್ನು ಸಂವೇದನಾಶೀಲಗೊಳಿಸುವಂತೆ ಸರ್ಕಾರವು ಶಾಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಆಧಾರ್ ಕಾರ್ಡ್‍ನಂತೆಯೇ, ಈ ಕಾರ್ಡ್ ಅನ್ನು ಕ್ಯೂಆರ್ ಕೋಡ್ ಆಧರಿಸಿ ನೀಡಲಾಗುತ್ತದೆ. ಗುರುತಿನ ಸಂಖ್ಯೆಗಾಗಿ ರಕ್ತದ ಗುಂಪು, ಎತ್ತರ ಮತ್ತು ತೂಕದಂತಹ ಮಾಹಿತಿಯನ್ನು ಸಹ ಸಂಗ್ರಹಿಸಲಾಗುತ್ತದೆ. ಆದರೆ ಸಂಗ್ರಹಿಸಿದ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.





