ಚೆನ್ನೈ: ಡಿಎಂಕೆ ಸಂಸದ ಮತ್ತು ಕೈಗಾರಿಕೋದ್ಯಮಿ ಎಸ್. ಜಗತ್ರಕ್ಷಕನ್ ಅವರಿಗೆ ಸಂಬಂಧಿಸಿದ ತಮಿಳುನಾಡು ಮತ್ತು ಪುದುಚೇರಿಯ 40 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಗುರುವಾರ ಶೋಧ ನಡೆಸಿದೆ.
0
samarasasudhi
ಅಕ್ಟೋಬರ್ 06, 2023
ಚೆನ್ನೈ: ಡಿಎಂಕೆ ಸಂಸದ ಮತ್ತು ಕೈಗಾರಿಕೋದ್ಯಮಿ ಎಸ್. ಜಗತ್ರಕ್ಷಕನ್ ಅವರಿಗೆ ಸಂಬಂಧಿಸಿದ ತಮಿಳುನಾಡು ಮತ್ತು ಪುದುಚೇರಿಯ 40 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಗುರುವಾರ ಶೋಧ ನಡೆಸಿದೆ.
ಅರಕ್ಕೋಣಂನ ಸಂಸದ ಜಗತ್ರಕ್ಷಕನ್ ಅವರು ತಮಿಳುನಾಡಿನಲ್ಲಿ ಹಲವು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದಾರೆ.
ಟಿ ನಗರದಲ್ಲಿರುವ ಸಂಸದರ ಹೋಟೆಲ್ ಮೇಲೂ ದಾಳಿ ನಡೆಸಲಾಗಿದೆ. ನೆರೆಯ ಪುದುಚೇರಿಯಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲೂ ಶೋಧ ನಡೆಸಿದ್ದಾರೆ.
ಐ.ಟಿ ದಾಳಿ ಖಂಡಿಸಿರುವ ಮುಖ್ಯಮಂತ್ರಿ ಸ್ಟಾಲಿನ್, ಬಿಜೆಪಿಯ ಸೇಡಿನ ರಾಜಕಾರಣಕ್ಕೆ ಮಿತಿ ಇಲ್ಲ ಎಂದು ಹೇಳಿದ್ದಾರೆ .