ಪೆರ್ಲ : ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚಿನ ಅಭಿವೃದ್ಧಿ ಕಾರ್ಯದ ಸಹಾಯಾರ್ಥ ಫೆ.4ಕ್ಕೆ ಆಯೋಜಿಸಿರುವ ನಾಟಕದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಚರ್ಚಿನಲ್ಲಿ ಜರಗಿತು. ಚರ್ಚಿನ ಧರ್ಮಗುರು ಫಾ.ನೇಲ್ಸನ್ ಡಿ.ಅಲ್ಮೇಡ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ಚರ್ಚ್ ಪಾಲನ ಸಮಿತಿ ಅಧ್ಯಕ್ಷ ವಿಲ್ಸನ್ ಡಿಸೋಜ, ಕಾರ್ಯದರ್ಶಿ ಧನರಾಜ್, ಕೆಥೋಲಿಕ್ ಸಭಾ ವಲಯ ಅಧ್ಯಕ್ಷ ರಾಜು ಜೋನ್ ಡಿ.ಸೋಜ, ಮಣಿಯಂಪಾರೆ ಘಟಕಾಧ್ಯಕ್ಷ ಅಮೃತ್ ಲಾಲ್ ಡಿಸೋಜ, ಕೆಥೋಲಿಕ್ ಸಭಾದ ರೋಹನ್, ರಾಜು ಮೊದಲಾದವರು ಭಾಗವಹಿಸಿದ್ದರು. ಫೆ.4ಕ್ಕೆ ಸಾಂಸ್ಕøತಿಕೋತ್ಸವದ ಅಂಗವಾಗಿ ಚಾ ಪರ್ಕ ಕಲಾವಿದರಿಂದ ಹೊಸ ವರ್ಷದ ಸೂಪರ್ ಹಿಟ್ ನಾಟಕ "ಪುದರ್ ದೀದಾಂಡ್ " ಪ್ರದರ್ಶನಗೊಳ್ಳಲಿದೆ.

.jpg)
