ನವದೆಹಲಿ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಕೈ ಬಸ್ ಪರಿಕ್ಷಾರ್ಥ ಸಂಚಾರ ನಡೆಸಿದರು.
uSky ಟೆಕ್ನಾಲಜಿಯು ಸ್ಕೈ ಬಸ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಸೇವೆಗಳನ್ನು ಭಾರತಕ್ಕೆ ತರಲು iSky ಮೊಬಿಲಿಟಿ uSky ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ಸಚಿವ ಗಡ್ಕರಿ ಸಾಮಾಜಿಕ ಮಾಧ್ಯಮ ಎಕ್ಸ್(ಹಿಂದಿನ ಟ್ವಿಟ್ಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಸ್ಕೈ ಬಸ್ ಮಾಲಿನ್ಯ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಮೇಲಾಗಿ, ಅದರ ಎತ್ತರಿಸಿದ ರೈಲು ಕೇಬಲ್ ವ್ಯವಸ್ಥೆಯು ರಸ್ತೆ ಮಾರ್ಗದ ಬಳಕೆಯನ್ನು ಕಡಿಮೆ ಮಾಡುತ್ತದೆ. ಇದು ರಾಷ್ಟ್ರದ ಚಲನಶೀಲ ಮೂಲಸೌಕರ್ಯಕ್ಕೆ ಅಮೂಲ್ಯವಾದ ಸೇರ್ಪಡೆಯಾಗಿದೆ" ಎಂದು ಅವರು ಹೇಳಿದರು.
uSky ಪ್ರಕಾರ, ಅದರ ವಾಹನಗಳು ವಿಶಿಷ್ಟ ವಿನ್ಯಾಸದ ಎತ್ತರಿಸಿದ ಓವರ್‌ಪಾಸ್ ಮೇಲೆ ಚಲಿಸುತ್ತವೆ. ಆಪ್ಟಿಮೈಸ್ಡ್ ಏರೋಡೈನಾಮಿಕ್ಸ್, ಹೆಚ್ಚಿದ ವೇಗ, ಅಭೂತಪೂರ್ವ ಸುರಕ್ಷತೆ, ಭೂಮಿ ಮತ್ತು ಸಂಪನ್ಮೂಲಗಳ ತರ್ಕಬದ್ಧ ಬಳಕೆ ಹಾಗೂ ಸಾರಿಗೆಯಿಂದ ಉಂಟಾಗುವ ಪರಿಸರ ಹಾನಿಯನ್ನು ಕಡಿಮೆ ಮಾಡುತ್ತದೆ. ಇದರ ಜತೆಗೆ, ಅಸ್ತಿತ್ವದಲ್ಲಿರುವ ಸಾರಿಗೆ ಸೇವೆಗಳಿಗೆ ಹೋಲಿಸಿದರೆ ನಿರ್ಮಾಣ ಮತ್ತು ಕಾರ್ಯಾಚರಣೆ ವೆಚ್ಚ ಕೂಡ ಕಡಿಮೆಯಾಗಿದೆ.
ಹೈಡ್ರೋಜನ್ ಬಸ್‌ಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಮಾಲಿನ್ಯ ತಡೆಯುವ ಮಹತ್ವದ ಉದ್ದೇಶವನ್ನು ಹೊಂದಿವೆ. ಇವುಗಳ ಯಶಸ್ವಿ ಕಾರ್ಯಾಚರಣೆಯ ಬಳಿಕ ಹೆಚ್ಚು ಬಂಡವಾಳದ ಮೆಟ್ರೋ ವ್ಯವಸ್ಥೆಗಳಿಗೆ ಪರಿಣಾಮಕಾರಿ ಪರ್ಯಾಯವಾಗಬಹುದು. ವಿಶೇಷವಾಗಿ ಬಸ್ ರ್ಯಾಪಿಡ್ ಟ್ರಾನ್ಸಿಟ್ (BRT) ವಿಸ್ತರಣೆಗಳಲ್ಲಿ ಈ ಬಸ್‌ಗಾಗಿ ಮೀಸಲಾದ ಮಾರ್ಗಗಳು, ಮೆಟ್ರೋ ರೈಲಿನಂತೆಯೇ, ಸಾರ್ವಜನಿಕ ಸಾರಿಗೆ ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ ಎಂದು ಗಡ್ಕರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.





