ಮಧೂರು: ಅಂತಾರಾಷ್ಟ್ರೀಯ ವಯೋಜನರ ದಿನವನ್ನು ಅಕ್ಟೊಬರ್ ಒಂದರಂದು ಕಾಸರಗೋಡು ಮಧೂರು ಸಮೀಪದ ಪರಕ್ಕಿಲದಲ್ಲಿ ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘದ ಮಧೂರು ಘಟಕದ ವತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ನಿವೃತ್ತ ಉಪ ಜಿಲ್ಲಾಧಿಕಾರಿ ಬಾಲಕೃಷ್ಣ ಅಗ್ಗಿತ್ತಾಯರನ್ನು ಅವರ ವಸತಿಯಲ್ಲಿ ಗೌರವಿಸಲಾಯಿತು. ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘದ ಕಾಸರಗೋಡು ಜಿಲ್ಲಾಧ್ಯಕ್ಷ ಶ್ರೀ ಮುತ್ತುಕೃಷ್ಣನ್ ಅವರು ಶ್ರೀ ಬಾಲಕೃಷ್ಣ ಅಗ್ಗಿತ್ತಾಯರನ್ನು ಶಾಲು ಹೊದೆಸಿ ಸನ್ಮಾನಿಸಿದರು. ಮಧೂರು ಘಟಕದ ಅಧ್ಯಕ್ಷರಾದ ಶ್ರೀ ನಾರಾಯಣ ಯಂ. ಹಾಗೂ ಕಾರ್ಯದರ್ಶಿ ಶ್ರೀ ಬಲರಾಮ ಭಟ್ ಅವರು ಫಲ ಪುಷ್ಪಗಳನ್ನು ಅಗ್ಗಿತ್ತಾಯ ದಂಪತಿಗಳಿಗೆ ನೀಡಿ ಗೌರವಿಸಿದರು. ಅಗ್ಗಿತ್ತಾಯರ ಇಲಾಖೆಯಲ್ಲಿನ ಸಾಧನೆಗಳು, ಅವರ ಸತ್ಯಸಂಧತೆ, ಅವರ ಪತ್ರಿಕೋದ್ಯಮ, ಯುವಜನ ಸಂಘ ಹಾಗೂ ಶ್ರೀ ಬೊಡ್ಡಜ್ಜ ಯಕ್ಷಭಾರತಿ ಸಂಘಗಳನ್ನು ಹುಟ್ಟುಹಾಕಿದ್ದು, ಶ್ರೀ ಉಳಿಯ ಧನ್ವಂತರಿ ಯಕ್ಷಗಾನ ಸಂಘ ಹಾಗೂ ಮಿತ್ರ ಕಲಾವೃಂದದಲ್ಲಿ ನ ಸೇವೆ, ಮಧೂರು ಹಾಗೂ ಪರಿಸರದ ಧಾರ್ಮಿಕ ವಲಯದಲ್ಲಿ ಮಾಡಿದ ಸೇವೆ ಹಾಗೂ ಸ್ಪಂದನ ಕಲಾ ಸಾಹಿತ್ಯ ವೇದಿಕೆಯ ಸೇವೆಯ ಬಗ್ಗೆ ಶ್ರೀ ನಾರಾಯಣಯ್ಯ, ಶಿಕ್ಷಕರು ಹಾಗೂ ಮಧೂರು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರು; ಶ್ರೀ ಬಾಲಕೃಷ್ಣ ಉಳಿಯ, ನಿವೃತ್ತ ತಹಸೀಲ್ದಾರ್, ಬಲರಾಮ ಭಟ್, ನಿವೃತ್ತ ಉಪ ನಾಗರಿಕ ವಿತರಣೆ ಅಧಿಕಾರಿ, ಶ್ರೀಮತಿ ನೂತನ ಕುಮಾರಿ, ನಿವೃತ್ತ ಸಹಾಯಕ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಅವರುಗಳು ಮಾತನಾಡಿದರು. ಬಾಲಕೃಷ್ಣ ಅಗ್ಗಿತ್ತಾಯರ ಕುಟುಂಬ ಸದಸ್ಯರು ಶ್ರೀಮತಿ ಶಾಂತಾ, ಶ್ರೀ ಡಾ. ಗುರುಪ್ರಸಾದ್ ಅಗ್ಗಿತ್ತಾಯ, ಶ್ರೀಮತಿ ಡಾ. ಅನುರಾಧ ಗುರುಪ್ರಸಾದ್, ಶ್ರೀ ವಿಶ್ವನಾಥ ಭಟ್, ಮಣ್ಣಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.


