HEALTH TIPS

ಬಸ್ ನಿಲ್ಲಿಸದಿರುವುದನ್ನು ಪ್ರಶ್ನಿಸಿ ಬಸ್ಸಿಗೆ ತಡೆಯೊಡ್ಡಿದ ವಿದ್ಯಾರ್ಥಿನಿಯರು

              . ಕುಂಬಳೆ : ನಿಲುಗಡೆಯಿರುವ ಸ್ಥಳದಲ್ಲಿ ಬಸ್ ನಿಲ್ಲಿಸದೆ ಮುಂದೆ ಸಂಚರಿಸಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರ ತಂಡವೊಂದು, ಬಸ್ಸಿಗೆ ತಡೆಯೊಡ್ಡಿ ಪ್ರತಿಭಟಿಸಿದ್ದಾರೆ. ಕುಂಬಳೆ ಭಾಸ್ಕರನಗರ ಸನಿಹದ ವಿಮೆನ್ಸ್ ಕಾಲೇಜು ಒಂದರ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದವರು. 

           ವಿದ್ಯಾರ್ಥಿನಿಯರು ಬಸ್ ಸಿಬ್ಬಂದಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿರುವುದು ವಾಟ್ಸ್‍ಅಪ್ ಮೂಲಕ ವ್ಯಾಪಕ ವೈರಲ್ ಆಗಿದೆ.    

            ನಿಲುಗಡೆಯಿದ್ದರೂ, ಇಲ್ಲಿ ಬಸ್ ನಿಲ್ಲಿಸದೆ ಮುಂದೆ ಸಾಗಿ ನಿಂತಿದ್ದು, ಇದನ್ನು ವಿದ್ಯಾರ್ಥಿನಿಯರು ಪ್ರಶ್ನಿಸಿದ್ದಾರೆ. ನಂತರ ವಿದ್ಯಾರ್ಥಿನಿಯರು ಕುಂಬಳೆ ಪೇಟೆಗೆ ತೆರಳಿ ಪ್ರತಿಭಟನೆ ಸೂಚಿಸಿದ್ದಾರೆ. ಇತರ ವಿದ್ಯಾರ್ಥಿಗಳೂ ಪ್ರತಿಭಟನೆಯಲ್ಲಿ ಸೇರಿಕೊಂಡಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಮಾತುಕತೆ ನಡೆಸಿದ್ದಾರೆ. ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ನೀಡಿದ ಭರವಸೆಯನ್ವಯ ವಿದ್ಯಾರ್ಥಿನಿಯರು ಹಿಂತಿರುಗಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries