HEALTH TIPS

ದಾಖಲೆಯ ಖಾದಿ ಉತ್ಪನ್ನ ಮಾರಾಟ ಸಾರ್ವಜನಿಕ ಭಾವನೆಗಳ ಪ್ರಬಲ ಸಂಕೇತ: ಪ್ರಧಾನಿ ಮೋದಿ

        ವದೆಹಲಿ: ಮಹಾತ್ಮಾ ಗಾಂಧಿ ಜಯಂತಿಯಂದು (ಅಕ್ಟೋಬರ್ 2ರಂದು) ಇಲ್ಲಿನ ಖಾದಿ ಭವನದಲ್ಲಿ ದಾಖಲೆಯ ಪ್ರಮಾಣದಲ್ಲಿ ಖಾದಿ ಉತ್ಪನ್ನ ಮಾರಾಟವಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಖಾದಿಯು ಸಾರ್ವಜನಿಕ ಭಾವನೆಗಳ ಪ್ರಬಲ ಸಂಕೇತ ಎಂದು ಹೇಳಿದ್ದಾರೆ.

               ಗಾಂಧಿ ಜಯಂತಿಯಂದು ದೆಹಲಿಯ ಕನೌಟ್‌ ಪ್ರದೇಶದಲ್ಲಿರುವ ಖಾದಿ ಭವನದಲ್ಲಿ ಮೊದಲ ಬಾರಿಗೆ ₹1.5 ಕೋಟಿ ಮೌಲ್ಯದ ಖಾದಿ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ ಎಂದು ಖಾದಿ ಮತ್ತು  ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಬುಧವಾರ ತಿಳಿಸಿದೆ.


                  "ನಮ್ಮ ಕುಟುಂಬದ ಸದಸ್ಯರು ಖಾದಿ ಖರೀದಿಸಿದ ಹೊಸ ದಾಖಲೆ ಸಾರ್ವಜನಿಕ ಭಾವನೆಯ ಪ್ರಬಲ ಸಂಕೇತವಾಗಿದೆ. ಖಾದಿಯ ಮೇಲಿನ ಈ ಪ್ರೀತಿ ಪ್ರತಿದಿನ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಲೇ ಇರುತ್ತದೆ ಎಂಬ ವಿಶ್ವಾಸ ನನಗಿದೆ, ಇದು ಸ್ವಾವಲಂಬಿ ಭಾರತದ ದೃಷ್ಟಿಗೆ ಹೊಸ ಶಕ್ತಿಯನ್ನು ನೀಡುತ್ತದೆ" ಎಂದು ಪ್ರಧಾನಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

           ಸೆ.24 ರಂದು ತಮ್ಮ "ಮನ್ ಕಿ ಬಾತ್" ಕಾರ್ಯಕ್ರಮದಲ್ಲಿ ಗಾಂಧಿ ಜಯಂತಿಯಂದು ಖಾದಿ ಉತ್ಪನ್ನ ಖರೀದಿಸುವಂತೆ ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿದ್ದರು. ಇದರ ಪರಿಣಾಮವಾಗಿ ಖಾದಿ ಭವನದಲ್ಲಿ ಒಂದೇ ದಿನದಲ್ಲಿ ₹1.52 ಕೋಟಿ ದಾಖಲೆಯ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.

                ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, "ಪ್ರಧಾನಿ ನರೇಂದ್ರ ಮೋದಿಯವರ ಮನವಿಯ ಮೇರೆಗೆ ದೆಹಲಿಯ ಜನರು ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಖರೀದಿಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ, ನವದೆಹಲಿಯ ಹೃದಯಭಾಗದಲ್ಲಿರುವ ಖಾದಿ ಭವನ ₹1,52,45,000 ಮೌಲ್ಯದ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಅತ್ಯಧಿಕ ಮಾರಾಟಕ್ಕೆ ಸಾಕ್ಷಿಯಾಗಿದೆ" ಎಂದು ಅದು ಹೇಳಿದೆ.

"ಗಾಂಧಿ ಜಯಂತಿಯಂದು ಖಾದಿ ಉತ್ಪನ್ನಗಳ ದಾಖಲೆಯ ಮಾರಾಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಬ್ರಾಂಡ್ ಪವರ್ ಮತ್ತು ಅವರ ಜನಪ್ರಿಯತೆ ಕಾರಣ" ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷ ಮನೋಜ್ ಕುಮಾರ್ ಹೇಳಿದರು.

                    ಇತ್ತೀಚಿನ ಮಾರಾಟದ ಅಂಕಿಅಂಶಗಳ ಪ್ರಕಾರ, ಕಳೆದ ಹಣಕಾಸು ವರ್ಷ(2022-23)ದಲ್ಲಿ ಗಾಂಧಿ ಜಯಂತಿಯಂದು ಇದೇ ಭವನದಲ್ಲಿ ₹1,33,95,000 ಖಾದಿ ಉತ್ಪನ್ನಗಳು ಮಾರಾಟವಾಗಿದ್ದವು. ಈ ಬಾರಿ ಅದು ₹1,52,45,000ಕ್ಕೆ ಏರಿಕೆಯಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries