ಕಾಸರಗೋಡು: ಕಾಸರಗೋಡು ಐಸಿಎಆರ್-ಸಿಪಿಸಿಆರ್.ಐಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಚ ದಿವನ್ ಆಚರಿಸಲಾಯಿತು. ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಐಸಿಎಆರ್-ಸಿಪಿಸಿಆರ್ ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ನೇತೃತ್ವದಲ್ಲಿ ಐಸಿಎಆರ್-ಸಿಪಿಸಿಆರ್ ಐನ ಎಲ್ಲ ಸಿಬ್ಬಂದಿಗಳು ಸ್ವಚ್ಛತಾ ಪ್ರತಿಜ್ಞೆ ಸ್ವೀಕರಿಸಿದರು.
ಪ್ರಧಾನ ವಿಜ್ಞಾನಿ ಡಾ.ಕೆ.ಸಂಸುದೀನ್ ಸ್ವಚ್ಛ ಭಾರತ್ ಮಿಷನ್ ಮತ್ತು ಸ್ವಚ್ಛತಾ ಹಿ ಸೇವೆಯ ಕಲ್ಪನೆ ಮತ್ತು ಮಹತ್ವದ ಕುರಿತು ವಿವರವಾದ ಮಾಹಿತಿ ನೀಡಿದರು. ಬಳಿಕ ಸಂಸ್ಥೆಯ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಎಲ್ಲಾ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದರು. ಡಾ. ಆಗಸ್ಟಿನ್ ಗೆರಾರ್ಡ್ (ಅಧ್ಯಕ್ಷರು, ಇನ್ಸ್ಟಿಟ್ಯೂಟ್ ಸ್ವಾಚ್ ಭಾರತ್ ಮಿಷನ್ ಸಮಿತಿ) ಸಭೆಯನ್ನು ಸ್ವಾಗತಿಸಿ, ವಂದಿಸಿದರು.

