ನವದೆಹಲಿ: ತಂಗಿ ಕಾಣೆಯಾಗಿರುವುದರ ಬಗ್ಗೆ ಶಂಕೆ ವ್ಯಕ್ತಪಡಿಸಿದ ಅಣ್ಣ, ತನ್ನ ಸ್ನೇಹಿತನನ್ನೇ ಭೀಕರವಾಗಿ ಥಳಿಸಿ ಕೊಂದಿರುವ ಘಟನೆ ದೆಹಲಿಯ ಮಾಲ್ವಿಯಾ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತರನ್ನು 22 ವರ್ಷದ ಪಂಕಜ್ ಎಂದು ಗುರುತಿಸಲಾಗಿದೆ.
0
samarasasudhi
ಅಕ್ಟೋಬರ್ 10, 2023
ನವದೆಹಲಿ: ತಂಗಿ ಕಾಣೆಯಾಗಿರುವುದರ ಬಗ್ಗೆ ಶಂಕೆ ವ್ಯಕ್ತಪಡಿಸಿದ ಅಣ್ಣ, ತನ್ನ ಸ್ನೇಹಿತನನ್ನೇ ಭೀಕರವಾಗಿ ಥಳಿಸಿ ಕೊಂದಿರುವ ಘಟನೆ ದೆಹಲಿಯ ಮಾಲ್ವಿಯಾ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತರನ್ನು 22 ವರ್ಷದ ಪಂಕಜ್ ಎಂದು ಗುರುತಿಸಲಾಗಿದೆ.
ವಿಫಿನ್ ತಂಗಿ ಕಾಣೆಯಾಗಿರುವ ವಿಚಾರದಲ್ಲಿ ಸ್ನೇಹಿತ ಪಂಕಜ್ ಜತೆಗೆ ಭಾನುವಾರ ಗಲಾಟೆ ನಡೆದಿದೆ. ಕಾಣೆಯಾಗಿರುವ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ಪಂಕಜ್ ತಿಳಿಸಿದಾದರೂ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ.
ಈ ವೇಳೆ ಮದ್ಯದ ಆಮಲಿನಲ್ಲಿದ್ದ ವಿಫಿನ್, ಪಂಕಜ್‌ನ ಮೇಲೆ ಇಟ್ಟಿಗೆ ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾನೆ. ಪ್ರಜ್ಞಾಹೀನಾ ಸ್ಥಿತಿಯಲ್ಲಿ ಕಂಡು ಬಂದಿದ್ದ ಪಂಕಜ್‌ನನ್ನು ಅವರ ಅಣ್ಣ ಆಸ್ಪತ್ರೆಗೆ ದಾಖಲಿಸಿದಾದರೂ ಬದುಕುಳಿಯಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.