HEALTH TIPS

ವರ್ಷದ ಕೊನೆಗೆ ಐಪಿಒ ಸಂಭ್ರಮ

              ಮುಂಬೈ: ಈ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ 31 ಕಂಪನಿಗಳು ತಮ್ಮ ಆರಂಭಿಕ ಷೇರು ಮಾರಾಟ (ಕಂಪನಿ ಷೇರುಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವುದು-ಐಪಿಒ) ನಡೆಸುವ ಮೂಲಕ ದಾಖಲೆ ಬರೆದಿವೆ. ಮುಂದಿನ ಆರು ತಿಂಗಳಲ್ಲಿ 28 ಕಂಪನಿಗಳು ಆರಂಭಿಕ ಷೇರು ಮಾರಾಟ ನಡೆಸುವ ಚಿಂತನೆಯಲ್ಲಿವೆ.

              ಈ ಕಂಪನಿಗಳು ₹38 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿವೆ. ಇನ್ನೂ 41 ಕಂಪನಿಗಳು ಐಪಿಒ ಮೂಲಕ ₹44 ಸಾವಿರ ಕೋಟಿ ಸಂಗ್ರಹಿಸಲು ಭಾರತೀಯ ಷೇರು ನಿಯಂತ್ರಣ ಮಂಡಳಿಯ (ಸೆಬಿ) ಅನುಮತಿಗಾಗಿ ಕಾದಿವೆ ಎಂದು ವರದಿಯೊಂದು ಹೇಳಿದೆ.

                  ಈ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಆರಂಭಿಕ ಷೇರು ಮಾರಾಟ ನಡೆಸಿದ ಕಂಪನಿಗಳ ಸಂಖ್ಯೆ ಕಳೆದ ಆರ್ಥಿಕ ವರ್ಷದ ಈ ಅವಧಿಗೆ ಹೋಲಿಸಿದರೆ ದುಪ್ಪಟ್ಟುಗಿಂತಲೂ ಹೆಚ್ಚಾಗಿದೆ. ಕಳೆದ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ 14 ಕಂಪನಿಗಳು ಮಾತ್ರ ಐಪಿಒ ನಡೆಸಿದ್ದವು. ಈ ಆರ್ಥಿಕ ವರ್ಷದಲ್ಲಿ ಈ ಸಂಖ್ಯೆ ಎರಡು ಪಟ್ಟಿಗೂ ಹೆಚ್ಚಾಗಿದೆ. ಆದರೆ, ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಈ ವರ್ಷದಲ್ಲಿ ಸಂಗ್ರಹವಾದ ಮೊತ್ತ ಕಡಿಮೆ ಇದೆ. ಕಳೆದ ವರ್ಷದಲ್ಲಿ ₹35,456 ಕೋಟಿ ಸಂಗ್ರಹವಾಗಿದ್ದರೆ ಈ ಬಾರಿ ಈ ಮೊತ್ತವು ₹26,300 ಕೋಟಿಗೆ ಇಳಿದಿದೆ ಎಂದು ಪ್ರೈಮ್‌ಡಾಟಾಬೇಸ್‌ ಡಾಟ್‌ಕಾಂ ವಿವರಿಸಿದೆ.

               ಐಪಿಒಗೆ ಮುಂದಾಗಿರುವ ಒಟ್ಟು 69 ಕಂಪನಿಗಳ ಪೈಕಿ ಮೂರು ಕಂಪನಿಗಳು ಹೊಸ ಯುಗದ ತಂತ್ರಜ್ಞಾನ ಕಂಪನಿಗಳಾಗಿವೆ. ಈ ಕಂಪನಿಗಳು ಒಟ್ಟು ₹12 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿವೆ ಎಂದು ಬಂಡವಾಳ ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆ ಪ್ರೈಮ್‌ಡಾಟಾಬೇಸ್‌ನ ವ್ಯವಸ್ಥಾ‍ಪಕ ನಿರ್ದೇಶಕ ಪ್ರಣವ್‌ ಹಲ್ದಿಯಾ ಹೇಳಿದ್ದಾರೆ.

              ಇವುಗಳ ಪೈಕಿ ಓಯೊ ಕಂಪನಿಯೊಂದೇ ₹8,300 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಈ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಐಪಿಒ ನೀಡಿದ ಕಂಪನಿಗಳ ಪೈಕಿ ತಂತ್ರಜ್ಞಾನ ಕಂಪನಿ ಇದ್ದಿದ್ದು ಯಾತ್ರಾ ಮಾತ್ರ. ಈ ಕಂಪನಿ ಐಪಿಒ ಮೂಲಕ ಸಂಗ್ರಹಿಸಿದ ಮೊತ್ತ ₹775 ಕೋಟಿ.

2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಯಾವುದೇ ಐಪಿಒ ಬಿಡುಗಡೆ ಸಾಧ್ಯತೆ ಇಲ್ಲ. ಆದರೆ, ಅದಕ್ಕೂ ಮುಂಚೆ ಷೇರು ಮಾರುಕಟ್ಟೆಯಲ್ಲಿ ಚಟುವಟಿಕೆ ಗರಿಗೆದರಬಹುದು ಎಂಬುದು ಹಲ್ದಿಯಾ ಅವರ ಅಭಿಪ್ರಾಯ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries