ಅಕ್ಟೋಬರ್ 16ನ್ನು ವಿಶ್ವ ಅರವಳಿಕೆ ದಿನವನ್ನಾಗಿ ಆಚರಿಸಲಾಗುವುದು. ಒಂದು ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂದರೆ ಅರವಳಿಕೆ ನೀಡುವುದು ಸಾಮಾನ್ಯವಾಗಿದೆ. ಅರವಳಿಕೆ ನೀಡಿ ಶಸ್ತ್ರಚಿಕಿತ್ಸೆ ನೀಡಿದರೆ ನೋವು ಗೊತ್ತಾಗುವುದಿಲ್ಲ.
ಅದರಲ್ಲೂ ಹೆಚ್ಚಿನ ಮಹಿಳೆಯರು ಒಂದಕ್ಕಿಂತಲೂ ಹೆಚ್ಚಿನ ಬಾರಿ ಅರವಳಿಕೆ ಮದ್ದು ಚುಚ್ಚಿಸಿಕೊಂಡಿರುತ್ತಾರೆ. ಮೊದಲ ಬಾರಿ ಸಿ ಸೆಕ್ಷನ್ ಹೆರಿಗೆಯಾಗಿದ್ದು ನಂತರದ ಹೆರಿಗೆ ಕೂಡ ಸಿ ಸಿಕ್ಷನ್ ಆದರೆ ಅರವಳಿಕೆ ನೀಡಲಾಗಿರುತ್ತದೆ. ಅರವಳಿಕೆ ನೀಡಿದ ಆ ಕ್ಷಣ ಆ ಭಾಗ ಮರಗಟ್ಟಿದಂತಾಗುವುದರಿಂದ ಶಸ್ತ್ರ ಚಿಕಿತ್ಸೆ
ಮಾಡಿದಾಗ ನೋವು ಇರುವುದಿಲ್ಲ.
ಅರವಳಿಕೆ ವಿಧಗಳು
ಲೋಕಲ್ ಅನಸ್ತೇಶಿಯಾ: ತುಂಬಾ ಚಿಕ್ಕ ಶಸ್ತ್ರಚಿಕಿತ್ಸೆಗೆ ಇದನ್ನು ನೀಡಲಾಗುವುದು. ಉದಾಹರಣೆಗೆ ಕ್ಯಾಟ್ರಾಕ್ಟ್ ಸರ್ಜರಿ, ಸ್ಕಿನ್ ಬಯೋಸ್ಪೈನ್ ಈ ಬಗೆಯ ಚಿಕ್ಕ ಶಸ್ತ್ರ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುವುದು.
ಸೆಡೇಷನ್: ಇದರಲ್ಲಿ ನೀವು ನಿದ್ದೆಗೆ ಜಾರಿದರೂ ಅವರು ಮಾತನಾಡುತ್ತಿರುವುದು ನಿಮಗೆ ಕೇಳಿಸುತ್ತಿರುತ್ತದೆ, ವೈದ್ಯರು ಏನಾದರೂ ಕೇಳಿದರೆ ಅದಕ್ಕೆ ಉತ್ತರಿಸುತ್ತೀರಿ. ಹಲ್ಲು ಕೀಳುವಾಗ ಅಥವಾ ಕೊಲೊನೋಸ್ಕೋಪಿಸ್ ಈ ಬಗೆಯ ಚಿಕಿತ್ಸೆಯಲ್ಲಿ ಸಂಪೂರ್ಣ ಪ್ರಜ್ಞಾಹೀನರಾಗಬೇಕೆಂದೇನಿಲ್ಲ.
ರೀಜಿನಲ್ ಅನಸ್ತೇಶಿಯಾ: ದೇಹದಲ್ಲಿ ದೊಡ್ಡ ನೋವನ್ನು ತಡೆಗಟ್ಟಲು ಈ ಅರವಳಿಕೆ ನೀಡಲಾಗುವುದು. ಉದಾಹರಣೆಗೆ ಕೈ ಸರ್ಜರಿಯ ನೋವನ್ನು ಕಡಿಮೆ ಮಾಡಲು ಅಥವಾ ಹೆರಿಗೆಯ ನೋವನ್ನು ಕಡಿಮೆ ಮಾಡಲು ಈ ಅರವಳಿಕೆ ನೀಡಲಾಗುವುದು.
ಜನರಲ್ ಅನಸ್ತೇಶಿಯಾ: ಈ ಅರವಳಿಕೆ ನೀಡಿದಾಗ ವ್ಯಕ್ತಿ ಪ್ರಜ್ಞಾಹೀನರಾಗುತ್ತಾರೆ. ತಲೆ, ಎದೆ, ಹೊಟ್ಟೆ ಈ ಭಾಗಗಳಲ್ಲಿ ದೊಡ್ಡ ಸರ್ಜರಿ ಮಾಡುವಾಗ ಈ ಅರವಳಿಕೆ ನೀಡಲಾಗುವುದು.
ಅರವಳಿಕೆ ಪಡೆಯುವ ಮುನ್ನ ಈ ರೀತಿ ಸಿದ್ಧತೆ ಮಾಡಿಕೊಳ್ಳಬೇಕು
* ವೈದ್ಯರು ಸರ್ಜರಿಗೆ ಮುಂಚೆ 8 ಗಂಟೆ ಖಾಲಿ ಹೊಟ್ಟೆಯಲ್ಲಿ ಇರುವಂತೆ ಸೂಚಿಸುತ್ತಾರೆ. ಈ ಸಮಯದಲ್ಲಿ ಏನೂ ತಿನ್ನಲು ಹೋಗಬೇಡಿ.
* ಸರ್ಜರಿಗೆ ಎರಡು ವಾರಕ್ಕೆ ಮುನ್ನ ಧೂಮಪಾನ ಬಿಡಿ.
* ಶಸ್ತ್ರ ಚಕಕಿತ್ಸೆಗೆ ಮುನ್ನ ಹರ್ಬಲ್ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದರೆ ಅದನ್ನು ತೆಗೆದುಕೊಳ್ಳಬೇಡಿ
* ಕೆಲವರಿಗೆ ವೈದ್ಯರು ಬಿಪಿ ಮಾತ್ರೆ ತೆಗೆದುಕೊಳ್ಳುವಂತೆ ಹೇಳಬಹುದು ಅಂಥವರು ಬಿಪಿ ಮಾತ್ರೆ ತೆಗೆದುಕೊಳ್ಳಬೇಕು.
ಅರಳಿಕೆ ಪಡೆದ ಮೇಲೆ ಯಾವೆಲ್ಲಾ ಅಡ್ಡಪರಿಣಾಮ ಬೀರುವುದು?
* ಬೆನ್ನುನೋವು ಅಥವಾ ಸ್ನಾಯುಗಳಲ್ಲಿ ನೋವು
* ಚಳಿ ಜ್ವರ
* ಮೂತ್ರ ವಿಸರ್ಜನೆಗೆ ಕಷ್ಟವಾಗುವುದು
* ತಲೆಸುತ್ತು
* ತಲೆನೋವು
* ತುರಿಕೆ
* ತಲೆನೋವು
* ವಾಂತಿ
* ಗಂಟಲು ಕೆರೆತ
* ಸೂಜಿ ಚುಚ್ಚಿದ ಜಾಗದಲ್ಲಿ ನೋವು
ಇವೆಲ್ಲಾ ಅರವಳಿಕೆ ನೀಡಿದಾಗ ಕಂಡು ಬರುವ ಸಾಮಾನ್ಯ ಅಡ್ಡಪರಿಣಾಮಗಳಾಗಿದೆ.
ಗಂಭೀರ ಅಡ್ಡಪರಿಣಾಮ ಉಂಟಾಗುವ ಸಾಧ್ಯತೆಯೂ ಇದೆ
ಕೆಲವರಿಗೆ ಅರವಳಿಕೆ ನೀಡಿದಾಗ ಅದರಿಂದ ಗಂಭೀರ ಸಮಸ್ಯೆ ಉಂಟಾಗುವುದೂ ಇದೆ. ಕಾಲಿನ ಸ್ವಾದೀನ ಇಲ್ಲವಾಗಬಹುದು, ಶ್ವಾಸಕೋಶಕ್ಕೆ ಹಾನಿಯಾಗಬಹುದು, ಪ್ರಾಣಕ್ಕೆ ಅಪಾಯ ಉಂಟಾಗಬಹುದು. ಆದ್ದರಿಂದ ಅರವಳಿಕೆ ತಜ್ಞರಷ್ಟೇ ಅರವಳಿಕೆ ಚುಚ್ಚುಮದ್ದು ನೀಡಬೇಕು.
ಅರವಳಿಕೆ ಬಳಿಕ ಯಾವ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರಿಗೆ ತಿಳಿಸಬೇಕು? * ಉಸಿರಾಟದಲ್ಲಿ ತೊಂದರೆ * ತುಂಬಾನೇ ತುರಿಕೆ, ಊತ * ದೇಹ ಮರಗಟ್ಟಿದಂತಾಗುವುದು * ಮಾತು ತೊದಲುವುದು * ಆಹಾರ, ಎಂಜಲು ನುಂಗಲು ಕಷ್ಟವಾಗುವುದು.





