ಬದಿಯಡ್ಕ: ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಕೆ.ಎಸ್.ಪಿ.ಎಸ್. ಕುಂಬ್ಡಾಜೆ ಪಂಚಾಯಿತಿ ಘಟಕದ ವತಿಯಿಂದ ಉತ್ತಮ ಕೃಷಿಕ ಹಾಗೂ ಯಂತ್ರೋಪಕರಣ 95 ರ ಹರೆಯದ ಕಾನಕ್ಕೋಡು ಸುಬ್ರಹ್ಮಣ್ಯ ಭಟ್ ಅವರನ್ನು ಗೌರವಿಸಲಾಯಿತು. ಸಂಘಟನೆಯ ಪ್ರಾಂತ್ಯ ಉಪಾಧ್ಯಕ್ಷ ಈಶ್ವರ ರಾವ್ ಮೈಲುತೊಟ್ಟಿ ಶಾಲು ಹೊದೆಸಿದರು. ಪಂಚಾಯಿತಿ ಘಟಕದ ಅಧ್ಯಕ್ಷ ಮಾಳಿಗೆಮನೆ ಸೂರ್ಯನಾರಾಯಣ ಭಟ್ ಹಣ್ಣು ಹಂಪಲು ನೀಡಿದರು. ಪ್ರಾಂತ್ಯ ಸದಸ್ಯರಾದ ಶ್ರೀಧರ ಭಟ್ ಚೋಕೆಮೂಲೆ ಮತ್ತು ಸೀತಾರಾಮ ರಾವ್ ಪಿಲಿಕೂಡ್ಲು ಉಪಸ್ಥಿತರಿದ್ದರು.

.jpg)
