HEALTH TIPS

ವಿದೇಶಿ ಸುದ್ದಿಗಾರರನ್ನು ದಾಳಿ ನಡೆದ ಸ್ಥಳಕ್ಕೆ ಕರೆದೊಯ್ದ ಸೇನೆ

              ಕ್ಫಾರ್‌ ಆಝಾ : ಇಸ್ರೇಲ್‌ ನಾಗರಿಕರು ಮತ್ತು ಹಮಾಸ್‌ ಬಂಡುಕೋರರ ಮೃತದೇಹಗಳು ಕ್ಫಾರ್‌ ಆಝಾದ ಕಿಬ್ಬುಟ್ಸ್‌ನಲ್ಲಿ (ಕೃಷಿಕ ಸಮುದಾಯ ನೆಲೆಸಿರುವ ಪ್ರದೇಶ) ಬೆಂಕಿಗೀಡಾದ ಮನೆಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪಿಠೋಪಕರಣಗಳು ಮತ್ತು ಸುಟ್ಟು ಕರಕಲಾದ ಕಾರುಗಳ ಮಧ್ಯೆ ಎಲ್ಲೆಂದರಲ್ಲಿ ಬಿದ್ದಿವೆ.

                ಇಸ್ರೇಲ್‌ ಸೈನಿಕರು ಮನೆಯಿಂದ ಮನೆಗೆ ಓಡಾಡುತ್ತಾ ಮೃತದೇಹಗಳನ್ನು ಹೊರತೆಗೆಯುತ್ತಿದ್ದಾರೆ. ಇದು ಇಸ್ರೇಲ್‌ ರಕ್ಷಣಾ ಪಡೆಯು ವಿದೇಶಿ ಪತ್ರಕರ್ತರನ್ನು ಕ್ಫಾರ್‌ ಆಝಾಗೆ ಕರೆದೊಯ್ದಾಗ ಕಂಡುಬಂದ ದೃಶ್ಯ.

                'ಮನೆಯ ಕೋಣೆ, ಭದ್ರತಾ ಕೋಣೆಯಲ್ಲಿ ಇದ್ದ ತಾಯಂದಿರು, ತಂದೆಯಂದಿರ ಮೃತದೇಹಗಳನ್ನು ಈಗ ನೀವು ನೋಡುತ್ತಿದ್ದೀರ ಅಲ್ಲವೇ? ಭಯೋತ್ಪಾದಕರು ಅವರನ್ನು ಹೇಗೆ ಕೊಂದಿದ್ದಾರೆ ಎಂದು ನೋಡುತ್ತಿದ್ದೀರ ಅಲ್ಲವೇ?. ಇದು ಯುದ್ಧವಲ್ಲ, ಯುದ್ಧಭೂಮಿಯೂ ಅಲ್ಲ. ಇದು ಭಯೋತ್ಪಾದಕ ಕೃತ್ಯ' ಎಂದು ಇಸ್ರೇಲ್‌ ಸೇನೆಯ ಮೇಜರ್‌ ಜನರಲ್‌ ಇಟಾಯ್‌ ವೆರೂವ್‌ ಅವರು ಪತ್ರಕರ್ತರಿಗೆ ಹೇಳುತ್ತಾರೆ.

              'ಈ ರೀತಿಯ ದಾಳಿಯನ್ನು ನನ್ನ ಜೀವಮಾನದಲ್ಲಿ ನೋಡಿರಲೇ ಇಲ್ಲ. ಒಂದು ಜನಾಂಗವನ್ನು ಗುರಿಯಾಗಿಸಿಕೊಂಡು ಯುರೋಪ್‌ ಮತ್ತು ಇತರ ಕಡೆಗಳಲ್ಲಿ ಸಾಮೂಹಿಕ ಹತ್ಯೆಗಳು ನಡೆದಿದ್ದವು ಎಂದು ನಮ್ಮ ಅಜ್ಜ, ಅಜ್ಜಿಯಂದಿರು ಹೇಳಿದ್ದರು. ಈಚಿನ ಇತಿಹಾಸದಲ್ಲಿ ಇಂಥದ್ದು ನಡೆದಿರಲಿಲ್ಲ' ಎಂದು ಹೇಳಿದ್ದಾರೆ.

              ಕ್ಫಾರ್ ಆಝಾ ಮತ್ತು ಸ್ಡೆರಾಟ್‌ ಪ್ರದೇಶಗಳಿಗೆ ನುಗ್ಗಿ ದಾಳಿ ನಡೆಸಿದ ಬಂಡುಕೋರರು ನೂರಾರು ಇಸ್ರೇಲಿಯನ್ನರನ್ನು ಹತ್ಯೆಗೈದಿದ್ದಾರೆ ಮತ್ತು ಹತ್ತಾರು ಜನರನ್ನು ಒತ್ತೆ ಇರಿಸಿಕೊಂಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries