ಇಂಫಾಲ: ಮಣಿಪುರ ಸರ್ಕಾರವು ತನ್ನ ಪೂರ್ವಾನುಮತಿಯಿಲ್ಲದೆ ಜಿಲ್ಲೆಗಳು ಮತ್ತು ಸಂಸ್ಥೆಗಳ ಮರು ನಾಮಕರಣ ಮಾಡಬಾರದೆಂದು ಅಧಿಸೂಚನೆ ಹೊರಡಿಸಿದೆ. ಅಂತಹ ಕ್ರಮಗಳು ಸಮುದಾಯಗಳ ನಡುವೆ ಸಂಘರ್ಷವನ್ನು ಉಂಟುಮಾಡಬಹುದು ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ತೊಡಕಾಗಬಹುದು ಎಂದು ಹೇಳಿದೆ.
0
samarasasudhi
ಅಕ್ಟೋಬರ್ 08, 2023
ಇಂಫಾಲ: ಮಣಿಪುರ ಸರ್ಕಾರವು ತನ್ನ ಪೂರ್ವಾನುಮತಿಯಿಲ್ಲದೆ ಜಿಲ್ಲೆಗಳು ಮತ್ತು ಸಂಸ್ಥೆಗಳ ಮರು ನಾಮಕರಣ ಮಾಡಬಾರದೆಂದು ಅಧಿಸೂಚನೆ ಹೊರಡಿಸಿದೆ. ಅಂತಹ ಕ್ರಮಗಳು ಸಮುದಾಯಗಳ ನಡುವೆ ಸಂಘರ್ಷವನ್ನು ಉಂಟುಮಾಡಬಹುದು ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ತೊಡಕಾಗಬಹುದು ಎಂದು ಹೇಳಿದೆ.
ನಿರ್ದೇಶನ ಉಲ್ಲಂಘನೆಯಾದರೆ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ರಾಜ್ಯ ಸರ್ಕಾರದ ಅನುಮೋದನೆ ಇಲ್ಲದೆ ಜಿಲ್ಲೆಗಳು, ಉಪ ವಿಭಾಗಗಳು, ಸ್ಥಳಗಳು, ಸಂಸ್ಥೆಗಳು ಹಾಗೂ ಸಂಸ್ಥೆಗಳ ವಿಳಾಸವನ್ನು ಮರುನಾಮಕರಣ ಮಾಡುವ ಉದ್ದೇಶಪೂರ್ವಕ ಕೆಲಸವನ್ನು ಯಾರೂ ಮಾಡಬಾರದು ಅಥವಾ ಮಾಡಲು ಪ್ರಯತ್ನಿಸಬಾರದು ಎಂದು ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಿಕ್ಕಟ್ಟಿನ ಸಂದರ್ಭದಲ್ಲಿರುವಾಗ, ಹಲವು ಸಂಘಟನೆಗಳು, ಸಂಸ್ಥೆಗಳು, ಮತ್ತು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಮರುನಾಮಕರಣ ಮಾಡುತ್ತಿದ್ದಾರೆ ಅಥವಾ ಮರುನಾಮಕರಣ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮಣಿಪುರ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದೆ.