HEALTH TIPS

ಅತಿಯಾದ ವ್ಯಾಯಾಮದಿಂದ ಹೃದಯಾಘಾತ ಉಂಟಾಗುವುದೇ? ತಜ್ಞರು ಹೇಳುವುದೇನು?

 ಸೆಪ್ಟೆಂಬರ್ 29 ವಿಶ್ವ ಹೃದಯ ದಿನ. ಹೃದಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಎಂಬುವುದು ತುಂಬಾ ಚಿಕ್ಕ ಪ್ರಾಯದವರನ್ನು ಕಾಡುತ್ತಿದೆ. ಫಿಟ್ ಅಂಡ್‌ ಫೈನ್ ಇದ್ದವರಿಗೂ ಹೃದಯಾಘಾತ ಕಂಡು ಬರುತ್ತಿದೆ. ವರ್ಕೌಟ್‌ ಮಾಡುತ್ತಿರುವವಾಗಲೇ ಸಾವನ್ನಪ್ಪಿರುವ ಹಲವಾರು ಉದಾಹರಣೆಗಳಿವೆ.

ಇನ್ನು ಪುನೀತ್‌ ರಾಜ್‌ಕುಮಾರ್ ಅವರಿಗೆ ಹೃದಯಾಘಾತವಾದಾಗ ಅಷ್ಟೊಂದು ಫಿಟ್ ಆಗಿದ್ದವರಿಗೆ ಹೃದಯಾಘಾತ ಹೇಗಾಯ್ತು ಎಂದು ತುಂಬಾನೇ ಚರ್ಚೆ ನಡೆದಿತ್ತು. ಅತಿಯಾದ ವ್ಯಾಯಾಮ ಅವರಿಗೆ ಹೃದಯಾಘಾತಕ್ಕೆ ಕಾರಣವಾಗಿರಬಹುದು ಎಂದು ಒಂದಿಷ್ಟು ತಜ್ಞರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ವ್ಯಾಯಾಮ ಬೇಕು ಆದರೆ ಅತಿಯಾದ ವ್ಯಾಯಾಮ ಬೇಡ
ನಮ್ಮ ಆರೋಗ್ಯಕ್ಕೆ ವ್ಯಾಯಾಮ ಬೇಕು. ದೇಹದ ವ್ಯಾಯಾಮಕ್ಕೆ ಹಲವು ಬಗೆಯ ವರ್ಕೌಟ್‌ಗಳಿವೆ. ಕೆಲವೊಂದು ವ್ಯಾಯಾಮಗಳು ಹೃದಯದ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ಆದರೆ ಅತಿಯಾಗಿ ವ್ಯಾಯಾಮ ಮಾಡಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ವಾರದಲ್ಲಿ 150 ನಿಮಿಷ ವ್ಯಾಯಾಮ ಅಂದರೆ ದಿನದಲ್ಲಿ 30 ನಿಮಿಷ ವ್ಯಾಯಾಮ ಮಾಡಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ನಡೆಯುವುದು, ಓಡುವುದು, ಈಜುವುದು ಈ ಬಗೆಯ ವ್ಯಾಯಾಮಗಳು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ತುಂಬಾನೇ ವ್ಯಾಯಾಮ ಮಾಡಿದರೆ ಹೃದಯಕ್ಕೆ ಹಾನಿಯುಂಟಾಗುವುದು.

ಅತಿಯಾದ ವ್ಯಾಯಾಮ ಮಾಡಿದಾಗ ಏನಾಗುತ್ತದೆ?
ಅತಿಯಾದ ವ್ಯಾಯಾಮ ಮಾಡಿದಾಗ ನಮ್ಮ ಹೃದಯದ ಮೇಲೆ ತುಂಬಾ ಒತ್ತಡ ಉಂಟಾಗುವುದು. ದೇಹದಲ್ಲಿ ನೀರಿನಂಶ ತುಂಬಾನೇ ಕಡಿಮೆಯಾಗುವುದು. ಹೃದಯದ ಮೇಲೆ ತುಂಬಾನೇ ಒತ್ತಡ ಉಂಟಾದಾಗ ಹೃದಯಕ್ಕೆ ಹಾನಿಯಾಗುವುದು. ಇದರಿಂದ ಹೃದಯಾಘಾತ ಉಂಟಾಗುವುದು. ಒಂದು ಅಧ್ಯಯನದಲ್ಲಿ ತುಂಬಾ ವ್ಯಾಯಾಮ ಮಾಡುವವರ ಹಾಗೂ ಹೆಚ್ಚೇನು ವ್ಯಾಯಾಮ ಮಾಡದವರನ್ನು ಪರೀಕ್ಷೆ ಮಾಡಿದಾಗ ಅತ್ಯಧಿಕ ವ್ಯಾಯಾಮ ಮಾಡಿದವರ ಹೃದಯಕ್ಕೆ ಹಾನಿಯುಂಟಾಗಿರುವುದು ತಿಳಿದು ಬಂದಿದೆ.

ಪದೇ ಪದೇ ತುಂಬಾ ವ್ಯಾಯಾಮ ಮಾಡುವುದರಿಂದ ಹೃದಯಕ್ಕೆ ಹಾನಿಯುಂಟಾಗುವುದು
ಪದೇ ಪದೇ ನಾವು ನಮ್ಮ ಹೃದಯದ ಮೇಲೆ ಅತ್ಯಧಿಕ ಒತ್ತಡ ಹಾಕಿದರೆ ಹೃದಯ ರಕ್ತನಾಳಗಳಿಗೆ ಹಾನಿಯುಂಟಾಗುವುದು. ಇದರಿಂದ ಯಾವುದೇ ಸಮಯದಲ್ಲಿ ಬೇಕಾದರೂ ಹೃದಯಾಘಾತ ಉಂಟಾಗುವುದು.

ತಜ್ಞರು ಹೇಳುವುದೇನು?
ಅತಿಯಾದ ವ್ಯಾಯಾಮದಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಅಪಾಯ ಉಂಟಾಗುವುದು. ಆದ್ದರಿಂದ ಅತಿಯಾಗಿ ದೇಹ ದಂಡನೆ ಮಾಡಬೇಡಿ. ಅತಿಯಾದ ದೇಹ ದಂಡನೆಯಿಂದ ಹೃದಯಾಘಾತ ಉಂಟಾಗುವುದು.

ದೇಹದ ಮಾತು ಕೇಳಿ
ನಾವು ವ್ಯಾಯಾಮ ಮಾಡುವಾಗ ನಮ್ಮ ದೇಹದ ಮಾತು ಕೇಳಬೇಕು. ನಮ್ಮ ದೇಹವೇ ನನ್ನಿಂದ ಆಗ್ತಾ ಇಲ್ಲ ಎಂಬ ಸೂಚನೆ ನೀಡುತ್ತದೆ, ಅದನ್ನು ಕೇಳಬೇಕು. ವ್ಯಾಯಾಮ ಮಾಡಬೇಕು ಹಾಗಂತ ತುಂಬಾನೇ ದೇಹವನ್ನು ದಂಡಿಸಲು ಹೋಗಬೇಡಿ.

ತಜ್ಞರ ಸಲಹೆ ಪಡೆಯದೆ ಯಾವುದೇ ವ್ಯಾಯಾಮ ಮಾಡಬೇಡಿ
ವಾಕಿಂಗ್, ರನ್ನಿಂಗ್ ಬಿಟ್ಟು ನೀವು ಯಾವುದೇ ಕಠಿಣ ವ್ಯಾಯಾಮ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಬೇಕು, ಅಲ್ಲದೆ ನಿಮ್ಮ ಆರೋಗ್ಯದ ಬಗ್ಗೆಯೂ ತಿಳಿಸಬೇಕು. ಇದರಿಂದ ಅವರು ನಿಮಗೆ ಯಾವ ವ್ಯಾಯಾಮ ಸೂಕ್ತವಲ್ಲವೋ ಅವುಗಳನ್ನು ಮಾಡಿಸುವುದಿಲ್ಲ. ತುಂಬಾ ಸುಸ್ತಾದಾಗ ವ್ಯಾಯಾಮ ಮಾಡಲೇಬೇಡಿ.'

ವಿಶ್ವ ಹೃದಯ ದಿನದ ಮಹತ್ವ ವಿಶ್ವ ಹೃದಯ ಒಕ್ಕೂಟದ ಪ್ರಕಾರ, ಅನಾರೋಗ್ಯಕರ ಆಹಾರ, ತಂಬಾಕು ಬಳಕೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಆಲ್ಕೋಹಾಲ್ ಬಳಕೆಯಂತಹ ನಾಲ್ಕು ಪ್ರಮುಖ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ ಕನಿಷ್ಠ 80% ಅಕಾಲಿಕ ಮರಣಗಳನ್ನು (ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ) ರಕ್ಷಿಸಬಹುದು. ವಿಶ್ವ ಹೃದಯ ದಿನದ ಅಭಿಯಾನದಲ್ಲಿ ಜನಸಾಮಾನ್ಯರೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹೃದಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಪಡೆಯುತ್ತಾರೆ ಹಾಗೂ ಅಕಾಲಿಕವಾಗಿ ಸಂಭವಿರುವ ಸಾವು ಎದುರಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಾರೆ. ಸಿವಿಡಿ (ಕಾರ್ಡಿಯೋ ವ್ಯಾಸ್ಕುಲರ್ ಡಿಸೀಸ್ ಅಥವಾ ಹೃದಯ ನಾಳಗಳ ಕಾಯಿಲೆ-ವಿಶ್ವದಲ್ಲಿ ಅತಿ ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ) ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಸರ್ಕಾರೇತರ ಸಂಸ್ಥೆಗಳೂ ಸೇರಿದಂತೆ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ಪುಟ್ಟ ಹೃದಯವನ್ನು ಜೋಪಾನ ಮಾಡಿ....




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries