ನವದೆಹಲಿ: ವೈದ್ಯಕೀಯ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅಸಮರ್ಥರಾದ ಸೈನಿಕರಿಗೆ ನೀಡಲಾಗುವ ಪಿಂಚಣಿಯ ಹೊಸ ನೀತಿ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
0
samarasasudhi
ಅಕ್ಟೋಬರ್ 01, 2023
ನವದೆಹಲಿ: ವೈದ್ಯಕೀಯ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅಸಮರ್ಥರಾದ ಸೈನಿಕರಿಗೆ ನೀಡಲಾಗುವ ಪಿಂಚಣಿಯ ಹೊಸ ನೀತಿ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
'ಪ್ರಸ್ತುತ, ಶೇಕಡ 40ರಷ್ಟು ಸೈನಿಕರು ವೈದ್ಯಕೀಯ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅಸಮರ್ಥರಾಗಿದ್ದಾರೆ. ಪ್ರಸ್ತುತ ನೀತಿಯು ಈ ಹಿಂದಿನ ಅನೇಕ ತೀರ್ಪುಗಳು, ನಿಯಮಗಳು ಮತ್ತು ಸ್ವೀಕಾರಾರ್ಹ ಮಾನದಂಡಗಳನ್ನು ಉಲ್ಲಂಘಿಸುತ್ತದೆ' ಎಂದಿದ್ದಾರೆ.
'2019ರ ಜೂನ್‌ನಲ್ಲಿ ಸಹ ಈ ಪಿಂಚಣಿ ಮೇಲೆ ತೆರಿಗೆ ಹೇರುವುದಾಗಿ ಘೋಷಿಸಿದ್ದ ಮೋದಿ ನೇತೃತ್ವದ ಸರ್ಕಾರ, ಆಗಲೂ ಸೈನಿಕರಿಗೆ ದ್ರೋಹ ಎಸಗಿತ್ತು' ಎಂದು ಕಿಡಿಕಾರಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ, ವೈದ್ಯಕೀಯ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅಸಮರ್ಥರಾದ ಸೈನಿಕರು ಹಾಗೂ ಮೃತ ಸೈನಿಕರ ವಿಧವಾ ಪತ್ನಿಯರಿಗೆ ನೀಡಲಾಗುವ ಪಿಂಚಣಿಯ ನೂತನ ನೀತಿಗೆ ಅಖಿಲ ಭಾರತೀಯ ಮಾಜಿ ಸೈನಿಕರ ಕಲ್ಯಾಣ ಸಂಘವು ವಿರೋಧ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.