ನವದೆಹಲಿ: ಜಾತಿ ಗಣತಿಯ ಮತ್ತಷ್ಟು ದತ್ತಾಂಶವನ್ನು ಪ್ರಕಟಿಸದಂತೆ ಬಿಹಾರ ಸರ್ಕಾರವನ್ನು ನಿರ್ಬಂಧಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ನೀತಿ ನಿರ್ಧಾರ ಕೈಗೊಳ್ಳದಂತೆ ಯಾವುದೇ ರಾಜ್ಯವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
0
samarasasudhi
ಅಕ್ಟೋಬರ್ 07, 2023
ನವದೆಹಲಿ: ಜಾತಿ ಗಣತಿಯ ಮತ್ತಷ್ಟು ದತ್ತಾಂಶವನ್ನು ಪ್ರಕಟಿಸದಂತೆ ಬಿಹಾರ ಸರ್ಕಾರವನ್ನು ನಿರ್ಬಂಧಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ನೀತಿ ನಿರ್ಧಾರ ಕೈಗೊಳ್ಳದಂತೆ ಯಾವುದೇ ರಾಜ್ಯವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
ಬಿಹಾರದಲ್ಲಿ ಜಾತಿ ಗಣತಿ ನಡೆಸಲು ಅನುಮತಿ ನೀಡಿದ ಪಟ್ನಾ ಹೈಕೋರ್ಟ್‌ನ ಆ.
'ಈ ಕ್ಷಣದಲ್ಲಿ ನಾವು ಯಾವುದಕ್ಕೂ ತಡೆ ನೀಡುವುದಿಲ್ಲ. ಜಾತಿ ಗಣತಿ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆಯೇ ಎಂಬುದಕ್ಕೆ ಸಂಬಂಧಿಸಿದ ಮತ್ತೊಂದು ವಿಷಯವನ್ನು ಪರಿಶೀಲಿಸಲಾಗುವುದು' ಎಂದು ಕೋರ್ಟ್ ಹೇಳಿತು.