ಜೈಪುರ: ಕ್ರಿಮಿನಲ್ ಮೊಕದ್ದಮೆಗಳು ಇರುವವರನ್ನು ಚುನಾವಣೆ ಅಭ್ಯರ್ಥಿಗಳಾಗಿ ಆಯ್ಕೆ ಮಾಡುವ ರಾಜಕೀಯ ಪಕ್ಷಗಳು ಇನ್ನು ಮುಂದೆ ಈ ಆಯ್ಕೆಗೆ ಕಾರಣಗಳನ್ನು ಸಾರ್ವಜನಿಕವಾಗಿ ನೀಡುವುದು ಕಡ್ಡಾಯವಾಗಲಿದೆ.
0
samarasasudhi
ಅಕ್ಟೋಬರ್ 02, 2023
ಜೈಪುರ: ಕ್ರಿಮಿನಲ್ ಮೊಕದ್ದಮೆಗಳು ಇರುವವರನ್ನು ಚುನಾವಣೆ ಅಭ್ಯರ್ಥಿಗಳಾಗಿ ಆಯ್ಕೆ ಮಾಡುವ ರಾಜಕೀಯ ಪಕ್ಷಗಳು ಇನ್ನು ಮುಂದೆ ಈ ಆಯ್ಕೆಗೆ ಕಾರಣಗಳನ್ನು ಸಾರ್ವಜನಿಕವಾಗಿ ನೀಡುವುದು ಕಡ್ಡಾಯವಾಗಲಿದೆ.
ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು ಸದ್ಯ ತಮ್ಮ ಮೇಲಿರುವ ಕ್ರಿಮಿನಲ್ ಮೊಕದ್ದಮೆಗಳ ವಿವರಗಳನ್ನು ಪತ್ರಿಕಾ ಜಾಹೀರಾತುಗಳ ಮೂಲಕ ಪ್ರಕಟಿಸುವುದು ಕಡ್ಡಾಯವಾಗಿದೆ.
ಭಾನುವಾರ ಇಲ್ಲಿ, ರಾಜಸ್ಥಾನ ವಿಧಾನಸಭೆ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಈ ವಿಷಯ ತಿಳಿಸಿದರು.
'ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಯನ್ನು ನಡೆಸಲು ಆಯೋಗ ಬದ್ಧವಾಗಿದೆ. ಆದರೆ, ಮತದಾರರು ತಮ್ಮ ಹಕ್ಕು ಚಲಾಯಿಸುವುದನ್ನು ಕಡ್ಡಾಯಪಡಿಸುವ ಯಾವುದೇ ಪ್ರಸ್ತಾವ ಸದ್ಯ ಆಯೋಗದ ಮುಂದಿಲ್ಲ' ಎಂದು ತಿಳಿಸಿದರು.
ಶೇ 40 ಅಥವಾ ಅದಕ್ಕೂ ಹೆಚ್ಚಿನ ಅಂಗವಿಕಲತೆ ಉಳ್ಳವರು ಹಾಗೂ ವಯಸ್ಕರಾದ ಮತದಾರರಿಗೆ ಮನೆಯಿಂದಲೇ ಹಕ್ಕು ಚಲಾಯಿಸುವ ಸೌಲಭ್ಯವಿದೆ. ಮತದಾನದ ಪ್ರಮಾಣ ಹೆಚ್ಚಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದರು.
ಗಡಿ ಭಾಗದಲ್ಲಿ ನಗದು ಮತ್ತು ಮದ್ಯಸಾಗಣೆ ವಿರುದ್ಧ ಕಟ್ಟೆಚ್ಚರವಹಿಸಲು ಕಾನೂನು ಜಾರಿ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆಗೂ ಇದೇ ಸಂದರ್ಭದಲ್ಲಿ ಚರ್ಚಿಸಿದರು.