ಕಾಸರಗೋಡು: ಸರ್ಕಾರಿ ಕಾಲೇಜು ಕನ್ನಡ ಬಳಗ ಕಾಸರಗೋಡು, ಕನ್ನಡ ಸ್ನಾತಕೊತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ ಸರ್ಕಾರಿ ಕಾಲೇಜು ಕಾಸರಗೋಡು ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಈ ವರ್ಷವೂ ನಾಡಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಅ.21ರಂದು ಮಧ್ಯಾಃನ 2 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ, ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ 'ಹಾಗೂ ಪೆÇ್ರೀತ್ಸಾಹಕ ಬಹುಮಾನಗಳಿದ್ದು, ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ.
ಅ. 21ರಂದು ಬೆಳಗ್ಗೆ 9.30ಕ್ಕೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಕವಿತಾ ರಚನೆ (ಕಾಲಾವಕಾಶ 1 ಗಂಟೆ), ಭಾಷಣ (ಕಾಲಾವಕಾ5 ನಿಮಿಷ), ಭಾವಗೀತೆ (ಕಾಲಾವಕಾಶ 5 ನಿಮಿಷ), ರಸಪ್ರಶ್ನೆ (ಕಾಲಾವಕಾಶ 1 ಗಂಟೆ), ಪದವಿಪೂರ್ವ ವಿಭಾಗಕ್ಕೆ ಕಂಠಪಾಠ (ಕಾಲಾವಕಾಶ 5 ನಿಮಿಷ), ಕವಿತಾ ರಚನೆ (ಕಾಲಾವಕಾಶ 1 ಗಂಟೆ) ಪದವಿ ವಿಭಾಗಕ್ಕೆ ಮಧ್ಯಾಹ್ನ 1.30 ಕ್ಕೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಕವಿತಾ ರಚನೆ (ಕಾಲಾವಕಾಶ 1 ಗಂಟೆ), ಕಥಾ ರಚನೆ (ಕಾಲಾವಕಾಶ 1 ಗಂಟೆ), ಭಾವಗೀತೆ (ಕಾಲಾವಕಾಶ 5 ನಿಮಿಷ), ಭಾಷಣ (ಕಾಲಾವಕಾ5 ನಿಮಿಷ)ಸ್ಪರ್ಧೆ ನಡೆಯಲಿದೆ.
ಪದವಿಪೂರ್ವ ವಿಭಾಗದ ಕಂಠಪಾಠಕ್ಕಾಗಿ ಯಾವುದಾದರೊಂದು ಷಟ್ಪದಿ ಕಾವ್ಯದ 7 ಪದ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸ್ಪರ್ಧಾಳುಗಳ ಹೆಸರು. ತರಗತಿ ಮತ್ತು ಸ್ಪರ್ಧೆಯ ವಿವರಗಳನ್ನು ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಸಹಿತ ಸ್ಪರ್ಧೆ ನಡೆಯುವ ದಿನ ಕನ್ನಡ ವಿಭಾಗದ ಮುಖ್ಯಸ್ಕರಿಗೆ ತಲುಪಿಸಬೇಕು. ಯಾವುದೇ ಸ್ಪರ್ಧೆಗೆ ಎಷ್ಟು ಮಂದಿ ವಿದ್ಯಾರ್ಥಿಗಳು ಬೇಕಾದರೂ ಭಾಗವಹಿಸಬಹುದಾಗಿದ್ದು, ಆದರೆ ಒಬ್ಬ ವಿದ್ಯಾರ್ಥಿ ಒಂದಕ್ಕಿಂತ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಪ್ರಕಟಣೆ ತಿಳಿಸಿದೆ.




