HEALTH TIPS

ಫ್ರಾನ್ಸ್, ನೆದರ್ಲೆಂಡ್ಸ್‌ ನಾಯಕರ ಜತೆ ನೆತನ್ಯಾಹು ಮಾತುಕತೆ

             ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾನುವಾರ ಫ್ರಾನ್ಸ್, ಸ್ಪೇನ್ ಮತ್ತು ನೆದರ್ಲೆಂಡ್ಸ್‌ ನಾಯಕರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಹಮಾಸ್ ಮೇಲೆ ನಡೆಸುತ್ತಿರುವ ದಾಳಿ ಕುರಿತು ಚರ್ಚೆ ನಡೆಸಿದ್ದಾರೆ.

               ಇಸ್ರೇಲ್ -ಹಮಾಸ್ ಸಂಘರ್ಷ ಕುರಿತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್, ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್, ನೆದರ್ಲೆಂಡ್ಸ್‌ ಪ್ರಧಾನಿ ಮಾರ್ಕ್‌ ರುಟ್ಟೆ ಸೇರಿದಂತೆ ಇತರೆ ನಾಯಕರೊಂದಿಗೆ ನೆತನ್ಯಾಹು ಮಾತುಕತೆ ನಡೆಸಿದ್ದಾರೆ.

             'ಹಮಾಸ್‌ನ ಮಿಲಿಟರಿ ಮತ್ತು ಆಡಳಿತದ ಸಾಮರ್ಥ್ಯಗಳನ್ನು ತೊಡೆದುಹಾಕುವುದು ನಮ್ಮ ದೇಶದ ಜನರ ಸಂಕಲ್ಪವಾಗಿದೆ. ಹಮಾಸ್ ವಿರುದ್ಧ ಇಸ್ರೇಲ್‌ನ ವಿಜಯವು ಇಡೀ ಜಗತ್ತಿನ ವಿಜಯವಾಗಿದೆ ಎಂದು ನೆತನ್ಯಾಹು ಒತ್ತಿ ಹೇಳಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದೆ.

               ಹಮಾಸ್‌ನ ಕ್ರೂರ ಭಯೋತ್ಪಾದನೆ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಇಸ್ರೇಲ್‌ನ ಹಕ್ಕನ್ನು ಬೆಂಬಲಿಸಿದ್ದಕ್ಕಾಗಿ ಅವರು ವಿಶ್ವದ ನಾಯಕರಿಗೆ ನೆತನ್ಯಾಹು ಧನ್ಯವಾದ ಸಲ್ಲಿಸಿದ್ದಾರೆ.

                        ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್, ನೆದರ್ಲೆಂಡ್ಸ್‌ ಪ್ರಧಾನಿ ಮಾರ್ಕ್‌ ರುಟ್ಟೆ ಅವರು ಮಂಗಳವಾರ ಇಸ್ರೇಲ್‌ಗೆ ಆಗಮಿಸಲಿದ್ದು, ನೆತನ್ಯಾಹು ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಇಸ್ರೇಲ್‌ ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries