ಕೊಚ್ಚಿ: 4 ಮಂದಿಯ ಸಾವಿಗೆ ಕಾರಣವಾದ ಕೊಚ್ಚಿಯ ಕಳಮಶ್ಶೇರಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಡೊಮಿನಿಕ್ ಮಾರ್ಟಿನ್‌ನನ್ನು ನವೆಂಬರ್ 15ರವರೆಗೆ 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.
0
samarasasudhi
ನವೆಂಬರ್ 06, 2023
ಕೊಚ್ಚಿ: 4 ಮಂದಿಯ ಸಾವಿಗೆ ಕಾರಣವಾದ ಕೊಚ್ಚಿಯ ಕಳಮಶ್ಶೇರಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಡೊಮಿನಿಕ್ ಮಾರ್ಟಿನ್‌ನನ್ನು ನವೆಂಬರ್ 15ರವರೆಗೆ 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.
ಇಂದು ಬೆಳಿಗ್ಗೆ (ಸೋಮವಾರ) ಡೊಮಿನಿಕ್‌ಗೆ ವೈದ್ಯಕೀಯ ತಪಾಸಣೆ ಮಾಡಿಸಿದ ಕೊಚ್ಚಿ ಪೊಲೀಸರು, ಬಳಿಕ ಎರ್ನಾಕುಳಂ ಪ್ರಿನ್ಸಿಪಾಲ್ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಿದರು.
ಪೊಲೀಸರು ಯಾವುದೇ ರೀತಿಯ ಹಿಂಸೆ ನೀಡಿಲ್ಲ ಎಂದು ನ್ಯಾಯಾಧೀಶರ ಮುಂದೆ ನುಡಿದ ಡೊಮಿನಿಕ್, ತಾನು ಆರೋಗ್ಯವಾಗಿದ್ದು, ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾನೆ.
ಸ್ಫೋಟದ ಸಾಮಾಗ್ರಿಯ ಮೂಲ, ಹಣಕಾಸು ಹಾಗೂ ತಾಂತ್ರಿಕ ಮೂಲ, ಆತನ ಅಂತರರಾಷ್ಟ್ರೀಯ ಸಂಪರ್ಕಗಳು ಮತ್ತು 10 ಸ್ಥಳಗಳಲ್ಲಿ ಸಾಕ್ಷ್ಯ ಸಂಗ್ರಹಿಸಬೇಕಾಗಿರುವುದರಿಂದ 10 ದಿನಗಳ ಕಾಲ ಕಸ್ಟಡಿಗೆ ಬೇಕು ಎಂದು ಡಿಸಿಪಿ ಶಶಿಧರನ್ ಕೋರ್ಟ್‌ಗೆ ತಿಳಿಸಿದರು.
ಇದನ್ನು ಪರಿಗಣಿಸಿದ ನ್ಯಾಯಾಧೀಶರಾದ ಹನಿ ಎಂ ವರ್ಗೀಸ್, ಡೊಮಿನಿಕ್‌ನನ್ನು 10 ದಿನಗಳ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದರು.