HEALTH TIPS

ವೊಡಾಫೋನ್‌ ಐಡಿಯಾಗೆ ₹ 1,128 ಕೋಟಿ ಮರುಪಾವತಿಸಲು ಬಾಂಬೆ ಹೈಕೋರ್ಟ್‌ ಆದೇಶ

              ಮುಂಬೈ: 2016-17ನೇ ಅಂದಾಜು ವರ್ಷಕ್ಕೆ ಸಂಬಂಧಿಸಿ ಪಾವತಿ ಮಾಡಲಾದ ₹ 1,128 ಕೋಟಿ ತೆರಿಗೆ ಮೊತ್ತವನ್ನು ವೊಡಾಫೋನ್‌ ಐಡಿಯಾ ಕಂಪನಿಗೆ ಮರುಪಾವತಿಸುವಂತೆ ಆದಾಯ ತೆರಿಗೆ ಇಲಾಖೆಗೆ ಬಾಂಬೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

               'ತೆರಿಗೆ ಪಾವತಿ ಕುರಿತಂತೆ ಇಲಾಖೆಯು ಕಳೆದ ಆಗಸ್ಟ್‌ನಲ್ಲಿ ಆದೇಶ ಹೊರಡಿಸಿದೆ.

ಇದು ಅವಧಿ ಮೀರಿದ ಆದೇಶವಾಗಿದ್ದು, ಸಮರ್ಥನೀಯವೂ ಅಲ್ಲ' ಎಂದು ಹೈಕೋರ್ಟ್‌ ಬುಧವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

               ನ್ಯಾಯಮೂರ್ತಿಗಳಾದ ಕೆ.ಆರ್‌.ಶ್ರೀರಾಮ್ ಹಾಗೂ ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿದೆ.

            'ಈ ವಿಚಾರದಲ್ಲಿ ಸಂಬಂಧಿಸಿದ ಅಧಿಕಾರಿಯು ಅಸಡ್ಡೆಯಿಂದ ವರ್ತಿಸಿದ್ದಾರೆ. ತೆರಿಗೆ ನಿರ್ಧರಣೆಗೆ ಸಂಬಂಧಿಸಿದ ಆದೇಶವನ್ನು ನಿಗದಿತ 30 ದಿನಗಳ ಒಳಗಾಗಿ ನೀಡಿಲ್ಲ. ಇದರಿಂದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಲು ಕಾರಣರಾಗಿದ್ದಾರೆ' ಎಂದು ಪೀಠವು ಕಟು ಮಾತುಗಳಲ್ಲಿ ಹೇಳಿದೆ.

                2016-17ನೇ ಅಂದಾಜು ವರ್ಷಕ್ಕೆ ಸಂಬಂಧಿಸಿ, ತನ್ನ ಆದಾಯಕ್ಕೆ ಅನುಗುಣವಾದ ಮೊತ್ತಕ್ಕಿಂತಲೂ ಅಧಿಕ ತೆರಿಗೆಯನ್ನು ಆದಾಯ ತೆರಿಗೆ ಇಲಾಖೆ ಸಂಗ್ರಹಿಸಿದೆ. ಹೆಚ್ಚುವರಿ ತೆರಿಗೆ ಹಣವನ್ನು ಇಲಾಖೆ ಪಾವತಿಸಿಲ್ಲ ಎಂದು ವೊಡಾಫೋನ್‌ ಐಡಿಯಾ ಕಂಪನಿ ಹೈಕೋರ್ಟ್‌ ಮೊರೆ ಹೋಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries