HEALTH TIPS

ರಾಜ್ಯ ಸರ್ಕಾರದ ಮಾಧ್ಯಮ ಪ್ರಶಸ್ತಿ 2022 ಗಾಗಿ ಅರ್ಜಿ ಆಹ್ವಾನ

  


                   ಕಾಸರಗೋಡು: ರಾಜ್ಯ ಸರ್ಕಾರದ 2022ರ ಮಾಧ್ಯಮ ಪ್ರಶಸ್ತಿಗಾಗಿ ಎಂಟ್ರಿಗಳನ್ನು ಆಹ್ವಾನಿಸಲಾಗಿದೆ. 2022 ಜನವರಿ 1 ರಿಂದ ಡಿಸೆಂಬರ್ 31ರ ಮಧ್ಯೆ ಪ್ರಕಟವಾದ ಅಭಿವೃದ್ಧಿಪರ ವರದಿ, ಜನರಲ್ ರಿಪೆÇೀರ್ಟ್, ವಾರ್ತಾಚಿತ್ರ,  ಕಾರ್ಟೂನ್ ಎಂಬಿವುಗಳಿಗೆ ಈ ಅವಧಿಯಲ್ಲಿ ಪ್ರಸಾರವಾದ ಟಿವಿ ವಾರ್ತಾ ರಿಪೆÇೀರ್ಟ್, ಕ್ಯಾಮೆರಾ, ವಿಡಿಯೋ ಎಡಿಟಿಂಗ್, ಟಿವಿ ನ್ಯೂಸ್ ಪ್ರೆಸೆಂಟರ್, ಅತ್ಯುತ್ತಮ ಸಂದರ್ಶನ ಮತ್ತು ಸಾಮಾಜಿಕ ಸಬಲೀಕರಣ ರಿಪೆÇೀರ್ಟ್ ಎಂಬಿವುಗಳನ್ನು ಪ್ರಶಸ್ತಿಗೆ ಪರಿಗಣಿಲಾಗುತ್ತದೆ. ಸಮಾಜದ ಸಕಾರಾತ್ಮಕ ಅಂಶಗಳನ್ನು ಸ್ಪರ್ಶಿಸುವುದು ಮತ್ತು ಅಭಿವೃದ್ಧಿ, ಸಂಸ್ಕøತಿ ಮತ್ತು ಸಾಮಾಜಿಕ ಜೀವನ ಮುಂತಾದ ಕ್ಷೇತ್ರಗಳಲ್ಲಿ ಅನುಕರಣೀಯ ಮಾದರಿಗಳನ್ನು ಎತ್ತಿ ತೋರಿಸುವ ಟಿವಿ ವರದಿಗಳಿಗೆ ಸಾಮಾಜಿಕ ಸಬಲೀಕರಣ ರಿಪೆÇೀಟಿರ್ಂಗ್ ಪ್ರಶಸ್ತಿಯನ್ನು ನೀಡಲಾಗುತ್ತದೆ.

                      ಅಭಿವೃದ್ಧಿ ರಿಪೆÇೀಟಿರ್ಂಗ್, ಜನರಲ್ ರಿಪೆÇೀರ್ಟ್ ಮತ್ತು ಕಾರ್ಟೂನ್ ಪ್ರಶಸ್ತಿಗಳಿಗಾಗಿ ಅವುಗಳು ಪ್ರಕಟವಾದ ಪತ್ರಿಕೆಯ ಒರಿಜಿನಲ್ ಕಟಿಂಗ್ ಜೊತೆಗೆ ಮೂರು ಪ್ರತಿಗಳನ್ನು ಕಳುಹಿಸಬೇಕು. ವಾರ್ತಾಚಿತ್ರದ ನಾಲ್ಕು ದೊಡ್ಡ ಪ್ರಿಂಟುಗಳು ಮತ್ತು ಚಿತ್ರ ಮುದ್ರಿಸಿದ ಪತ್ರಿಕೆಯ ಪ್ರತಿಯನ್ನು ಕಳುಹಿಸಬೇಕು.

             ಟಿವಿ ಸುದ್ದಿ ವರದಿಯಲ್ಲಿ ಮಲಯಾಳ ಟಿವಿ ಚಾನೆಲ್‍ಗಳ ಸುದ್ದಿ ಬುಲೆಟಿನ್‍ನಲ್ಲಿ ಪ್ರಸಾರವಾದ ಏಳು ನಿಮಿಷಗಳಿಗೆ ಮೀರದ ವರದಿಗಳನ್ನು ಸಲ್ಲಿಸಬೇಕು. ಒಂದು ಸುದ್ದಿಯನ್ನು ಹಲವಾರು ಭಾಗಗಳಾಗಿ ನೀಡದೆ ಸಮಗ್ರ ಸ್ವರೂಪದೊಂದಿಗೆ ಒಂದು ಸುದ್ದಿ ವರದಿಯಾಗಿ ನೀಡಬೇಕು. ಟಿವಿ ಪ್ರಶಸ್ತಿಗಳ ಎಂಟ್ರಿಗಳನ್ನು ಡಿವಿಡಿ (ಮೂರು ಪ್ರತಿಗಳು) ಅಥವಾ ಪೆನ್ ಡ್ರೈವ್‍ನಲ್ಲಿ ಸಲ್ಲಿಸಬಹುದು. ಎಂಟ್ರಿಗಳ ಜೊತೆ ಶೀರ್ಷಿಕೆ, ವಿಷಯ, ಅವಧಿ ಮತ್ತು ವಿವರಣೆ ಬರೆದು ನೀಡಬೇಕು.

           ಪ್ರಕಟಿಸಿದ ಪತ್ರಿಕೆ ಯಾ ಟಿವಿ ಚಾನೆಲ್‍ನ ಹೆಸರು, ದಿನಾಂಕ, ಪತ್ರಕರ್ತರ ಬಣ್ಣದ ಭಾವಚಿತ್ರ, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಒಳಗೊಂಡಿರುವ ಬಯೋಡೇಟಾ ಎಂಟ್ರಿಯ ಮತ್ತೊಂದು ಪುಟದಲ್ಲಿ ಸೇರಿಸಬೇಕು. ಪ್ರತಿ ವಿಭಾಗಕ್ಕೆ ಒಂದು ಎಂಟ್ರಿಯನ್ನು ಮಾತ್ರ ಪರಿಗಣಿಸಲಾಗುತ್ತದೆ.  ಒಂದು ವಿಭಾಗದಲ್ಲಿ ಹಾಕಲಾದ ಎಂಟ್ರಿಯನ್ನು ಇನ್ನೊಂದು ವಿಭಾಗಕ್ಕೆ ಪರಿಗಣಿಸಲಾಗುವುದಿಲ್ಲ. ಕವರ್‍ನ ಹೊರಭಾಗದಲ್ಲಿ ಸ್ಪರ್ಧಾ ವಿಭಾಗವನ್ನು ನಮೂದಿಸಬೇಕು. ಎಂಟ್ರಿ ಅರ್ಜಿದಾರರು ಸಿದ್ಧಪಡಿಸಿದ್ದಾರೆ ಎಂಬುದಕ್ಕೆ ನ್ಯೂಸ್ ಎಡಿಟರ್ ಅಥವಾ ಇತರ ಅಧಿಕಾರಿಗಳ ಸಾಕ್ಷ್ಯಪತ್ರವನ್ನು ಲಗತ್ತಿಸಬೇಕು.

          ಎಂಟ್ರಿಗಳನ್ನು ಡಿಸೆಂಬರ್ 20 ರಂದು ಸಂಜೆ 5 ಗಂಟೆಯೊಳಗೆ ಡೈರೆಕ್ಟರ್, ವಾರ್ತಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಸಚಿವಾಲಯ, ತಿರುವನಂತಪುರಂ - 695 001 ಎಂಬ ವಿಳಾಸಕ್ಕೆ ಕಳುಹಿಸಬೇಕು. ಪ್ರಶಸ್ತಿ ಸಂಬಂಧಿಸಿದ ಮಾರ್ಗಸೂಚಿಯನ್ನು www.prd.kerala.gov.in   ನಲ್ಲಿ ಪರಿಶೀಲಿಸಬಹುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries