ತಿರುವನಂತಪುರ: ಖಾಸಗೀ ಬಸ್ ಮಾಲೀಕರು ಘೋಷಿಸಿರುವ ಅನಿರ್ದಿಷ್ಟಾವಧಿ ಬಸ್ ಮುಷ್ಕರ ತೀರ್ಮಾನದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಅನ್ನಿ ರಾಜು ಬಸ್ ಮಾಲೀಕರನ್ನು ಚರ್ಚೆಗೆ ಕರೆದಿದ್ದಾರೆ.
ಇದೇ ತಿಂಗಳ 14ರಂದು ಎರ್ನಾಕುಳಂನಲ್ಲಿ ಚರ್ಚೆ ನಡೆಯಲಿದೆ. ಚರ್ಚೆಯಲ್ಲಿ ಹೆಚ್ಚಿನ ಭರವಸೆ ಇರಿಸಲಾಗಿದೆ. ತಮ್ಮ ಸಮಸ್ಯೆಗಳು ಬಗೆಹರಿಯುವ ಭರವಸೆ ಇದೆ ಎನ್ನುತ್ತಾರೆ ಬಸ್ ಮಾಲೀಕರು.
ವಿದ್ಯಾರ್ಥಿಗಳ ರಿಯಾಯಿತಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಬಸ್ ಮಾಲೀಕರು ಹಠ ಹಿಡಿದಿದ್ದಾರೆ. ಇದೇ ತಿಂಗಳ 21ರಿಂದ ರಾಜ್ಯಾದ್ಯಂತ ಬಸ್ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಲಾಗಿದೆ. ಇದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ತಿಂಗಳ 31ರಂದು ಖಾಸಗಿ ಬಸ್ ಮಾಲೀಕರು ಸೂಚನಾ ಮುಷ್ಕರ ನಡೆಸಿದ್ದರು.





