HEALTH TIPS

7 ವರ್ಷದ ಬಾಲಕನ ಶ್ವಾಸಕೋಶದಲ್ಲಿ ಹೊಕ್ಕಿದ್ದ ಸೂಜಿಯನ್ನು ಹೊರತೆಗೆದ ವೈದ್ಯರು

              ವದೆಹಲಿ: ಏಳು ವರ್ಷದ ಬಾಲಕನ ಶ್ವಾಸಕೋಶ ಹೊಕ್ಕಿದ್ದ ಹೊಲಿಗೆ ಯಂತ್ರದ ಸೂಜಿಯನ್ನು 'ಮ್ಯಾಗ್ನೆಟಿಕ್‌ ಸರ್ಜರಿ' ಮೂಲಕ ಹೊರತೆಗೆಯುವಲ್ಲಿ ನವದೆಹಲಿಯ ಏಮ್ಸ್‌ನ ಮಕ್ಕಳ ಶಸ್ತ್ರಚಿಕಿತ್ಸಕರು ಯಶಸ್ವಿಯಾಗಿದ್ದಾರೆ.

            ನಾಲ್ಕು ಸೆಂ.ಮೀನಷ್ಟು ಉದ್ದದ ಸೂಜಿಯು ಬಾಲಕನ ಶ್ವಾಸಕೋಶಕ್ಕೆ ಹೊಕ್ಕಿತ್ತು.

ಎಂಡೋಸ್ಕೋಪಿ ಪರೀಕ್ಷೆ ನಡೆಸಿದಾಗ ಕೆಲವೇ ಸೆಂ.ಮೀ.ನಷ್ಟು ಕಾಣುತ್ತಿತ್ತು.

              ಪತ್ತೆಯಾಗಿದ್ದು ಹೇಗೆ?: ರಕ್ತದ ವಾಂತಿ ಮಾಡಿಕೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕನನ್ನು ಆತನ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಸ್ಕ್ಯಾನಿಂಗ್‌ ಮಾಡಿದ ವೇಳೆ ಶ್ವಾಸಕೋಶದ ಎಡಭಾಗದಲ್ಲಿ ಸೂಜಿ ಹೊಕ್ಕಿರುವುದು ಪತ್ತೆಯಾಗಿತ್ತು.

              ಅದರ ಬಹುತೇಕ ಭಾಗವು ಒಳಗೆ ಹೋಗಿತ್ತು. ಹಾಗಾಗಿ, ಸಾಂಪ್ರದಾಯಿಕ ವಿಧಾನದಿಂದ ಅದನ್ನು ತೆಗೆಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ಶಸ್ತ್ರಚಿಕಿತ್ಸಕರ ತಂಡವು ಹೊಸ ಪರಿಹಾರ ಹುಡುಕಲು ಮುಂದಾಯಿತು.

                'ಮೊದಲಿಗೆ ತಮ್ಮ ವೈದ್ಯ ಸ್ನೇಹಿತರ ಬಳಿ ಚರ್ಚಿಸಿದ ಶಸ್ತ್ರಚಿಕಿತ್ಸಕರ ತಂಡವು ಬಳಿಕ ಅಯಸ್ಕಾಂತ ಬಳಸಿ ಸೂಜಿ ಹೊರೆತೆಗೆಯಲು ನಿರ್ಧರಿಸಿತು. ವೈದ್ಯಕೀಯ ಶಸ್ತ್ರಚಿಕಿತ್ಸೆಗಳಲ್ಲಿ ಆಧಾರವಾಗಿ ಆಯಸ್ಕಾಂತ ಬಳಸುತ್ತೇವೆ. ಆದರೆ, ದೇಹದ ಒಳಭಾಗದ ಸರ್ಜರಿಗೆ ಇದನ್ನು ಸಾಧನವಾಗಿ ಬಳಸುವುದಿಲ್ಲ' ಎಂದು ಶಸ್ತ್ರಚಿಕಿತ್ಸೆ ನಡೆಸಿದ ತಂಡದಲ್ಲಿದ್ದ ಡಾ.ವಿಶೇಷ್ ಜೈನ್ 'ಪ್ರಜಾವಾಣಿ'ಗೆ ತಿಳಿಸಿದರು.

                    ಗಂಟಲು ನಾಳದೊಳಗೆ ಸುಲಭವಾಗಿ ಹೋಗುವಂತಹ ಅಯಸ್ಕಾಂತ ಹುಡುಕುವುದು ವೈದ್ಯರಿಗೆ ಮೊದಲಿಗೆ ಸವಾಲಾಯಿತು. ಬಳಿಕ ಚಾಂದಿನಿ ಚೌಕದಲ್ಲಿ ಅದನ್ನು ಸಂಗ್ರಹಿಸಿದರು.

ಬಳಿಕ ಸರ್ಜರಿಗೆ ಮುಂದಾದ ವೈದ್ಯರು ಎಂಡೋಸ್ಕೋಪಿ ಉಪಕರಣದ ತುದಿಗೆ ಅಯಸ್ಕಾಂತ ಅಳವಡಿಸಿದ್ದಾರೆ. ಬಳಿಕ ಅದನ್ನು ಜಾಗರೂಕವಾಗಿ ಬಾಲಕನ ಬಾಯಿಯ ಮೂಲಕ ಶ್ವಾಸನಾಳಕ್ಕೆ ಬಿಟ್ಟಿದ್ದಾರೆ. ಅಯಸ್ಕಾಂತಕ್ಕೆ ಸೂಜಿ ಆಕರ್ಷಿಸಿದೆ. ಬಳಿಕ ಉಪಕರಣವನ್ನು ಹೊರಗೆ ತೆಗೆದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries